ದೊಡ್ಡಬಳ್ಳಾಪುರ: ಸಂವಿಧಾನ ಶಿಲ್ಪಿ, ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಕುರಿತು ಫೇಸ್‌ಬುಕ್‌ನಲ್ಲಿ ಅವಹೇಳನಕಾರಿ ಪೋಸ್ಟ್ ಹಾಕುತ್ತಿರುವ ''ಗುಲಾಮರ ಅಪ್ಪ'' ಎಂಬ ಖಾತೆಯ ನಿರ್ವಾಹಕರನ್ನು ತಕ್ಷಣ ಬಂಧಿಸದಿದ್ದರೆ ಜ.26ರಂದು ಗಣರಾಜ್ಯೋತ್ಸವದಲ್ಲಿ ಕಪ್ಪು ಪಟ್ಟಿ ಧರಿಸಿ ಪ್ರತಿಭಟಿಸುವುದಾಗಿ ಮಾದಾರ ಚನ್ನಯ್ಯ ಮಹಾಸಭಾ ಮುಖಂಡರು ಎಚ್ಚರಿಕೆ ನೀಡಿದ್ದಾರೆ.
ದೊಡ್ಡಬಳ್ಳಾಪುರ: ಸಂವಿಧಾನ ಶಿಲ್ಪಿ, ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಕುರಿತು ಫೇಸ್‌ಬುಕ್‌ನಲ್ಲಿ ಅವಹೇಳನಕಾರಿ ಪೋಸ್ಟ್ ಹಾಕುತ್ತಿರುವ ''''ಗುಲಾಮರ ಅಪ್ಪ'''' ಎಂಬ ಖಾತೆಯ ನಿರ್ವಾಹಕರನ್ನು ತಕ್ಷಣ ಬಂಧಿಸದಿದ್ದರೆ ಜ.26ರಂದು ಗಣರಾಜ್ಯೋತ್ಸವದಲ್ಲಿ ಕಪ್ಪು ಪಟ್ಟಿ ಧರಿಸಿ ಪ್ರತಿಭಟಿಸುವುದಾಗಿ ಮಾದಾರ ಚನ್ನಯ್ಯ ಮಹಾಸಭಾ ಮುಖಂಡರು ಎಚ್ಚರಿಕೆ ನೀಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ತಳವಾರ ನಾಗರಾಜ್ ಮಾತನಾಡಿ, ರಾಜ್ಯ ಸರ್ಕಾರ ಒಳ ಮೀಸಲಾತಿ ಕುರಿತಂತೆ ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಿದ್ದ ಕಡತವನ್ನು ವಾಪಸ್ ಕಳುಹಿಸಿದ್ದಾರೆ. ಈಗಲಾದರೂ ವರದಿಯಲ್ಲಿ ಮಾಡಿರುವ ತಪ್ಪುಗಳನ್ನು ಸರಿಪಡಿಸಿ ನ್ಯಾಯಮೂರ್ತಿ ನಾಗಮೋಹನ್ ದಾಸ್ ವರದಿಯನ್ನು ಯಥಾವತ್ತಾಗಿ ಜಾರಿ ಮಾಡಬೇಕು. ಸತತ 35 ವರ್ಷಗಳ ಅವಿರತ ಹೋರಾಟದ ನಂತರ ಒಳ ಮೀಸಲಾತಿ ದೊರೆಯುತ್ತಿದ್ದು, ರಾಜ್ಯ ಸರ್ಕಾರ ಕೆಲ ರಾಜಕೀಯ ಪ್ರಭಾವಗಳಿಗೆ ಒಳಗಾಗಿ ಮಾದಿಗ ಹಾಗೂ ಅಲೆಮಾರಿ ಸಮುದಾಯಗಳಿಗೆ ಅರ್ಹ ಮೀಸಲಾತಿ ನೀಡುವಲ್ಲಿ ಎಡವಿದೆ. ರಾಜ್ಯಪಾಲರಿಂದ ಮರಳಿ ಬಂದಿರುವ ಕಡತವನ್ನು ಸರಿಪಡಿಸುವ ಮೂಲಕ ಸೂಕ್ತ ನಿರ್ಣಯ ಕೈಗೊಳ್ಳಬೇಕು ಎಂದರು.ಒಳ ಮೀಸಲಾತಿ ನಮ್ಮ ಹಕ್ಕು, ಅದನ್ನು ನಾವು ಕೇಳುತ್ತಿದ್ದೇವೆ. ಜನಸಂಖ್ಯೆ ಹೆಚ್ಚಿರುವ ಮಾದಿಗ ಸಮುದಾಯಕ್ಕೆ ಅರ್ಹ ಮೀಸಲಾತಿ ನೀಡಬೇಕು ಹಾಗೂ ಅಲೆಮಾರಿ ಸಮುದಾಯವನ್ನು ಬಲಿಷ್ಠ ಸಮುದಾಯಗಳ ಪಟ್ಟಿಯಲ್ಲಿ ಸೇರಿಸಲಾಗಿದೆ. ಇವರನ್ನು ಪ್ರತ್ಯೇಕ ಗೊಳಿಸಿ ಮೀಸಲಾತಿ ಜಾರಿಗೊಳಿಸಬೇಕು ಎಂದರು.
ಈ ವೇಳೆ ಮುನಿಸುಬ್ಬಯ್ಯ, ಬಚ್ಚಹಳ್ಳಿ ನಾಗರಾಜ್, ದೊಡ್ಡತುಮಕೂರು ವೆಂಕಟೇಶ್, ಹನುಮಣ್ಣ, ಟಿ.ಡಿ.ಮುನಿಯಪ್ಪ, ನಾರಾಯಣಪ್ಪ, ಕೆ.ವಿ.ಮುನಿಯಪ್ಪ, ಮುತ್ತುರಾಜು, ಕನ್ನಡ ಪಕ್ಷದ ವೆಂಕಟೇಶ್, ತೂಬಗೆರೆ ವೆಂಕಟೇಶ್, ಹಾದ್ರಿಪುರ ಹರ್ಷ, ಕಾಡನೂರು ಲಕ್ಕಪ್ಪ, ಹಳೆಕೋಟೆ ಹನುಮಂತಯ್ಯ, ಕರೀಂಸೊಣ್ಣೇನಹಳ್ಳಿ ಮುನಿಯಪ್ಪ, ಗಂಗರಾಜು, ದೇವರಾಜು, ಸಂತೋಷ್ ಮತ್ತಿತರರಿದ್ದರು.20ಕೆಡಿಬಿಪಿ3-
ದೊಡ್ಡಬಳ್ಳಾಪುರದಲ್ಲಿ ಮಾದಾರ ಚನ್ನಯ್ಯ ಮಹಾಸಭಾ ಮುಖಂಡರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.