ಜೆಡಿಎಸ್‌ ಮುಗಿಸಬೇಕೆಂಬ ನಾಯಕರ ಕನಸು ನನಸಾಗದು: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ

| Published : Jan 05 2025, 01:31 AM IST / Updated: Jan 05 2025, 12:48 PM IST

ಜೆಡಿಎಸ್‌ ಮುಗಿಸಬೇಕೆಂಬ ನಾಯಕರ ಕನಸು ನನಸಾಗದು: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಪಕ್ಷಕ್ಕೆ ಕಾರ್ಯಕರ್ತರ ಶಕ್ತಿ ಇರುವುದರಿಂದ ಜೆಡಿಎಸ್ ಮುಗಿಸಬೇಕು ಎಂಬ ಕನಸು ಹೊತ್ತವರ ಪ್ರಯತ್ನ ನನಸಾಗುವುದಿಲ್ಲ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

 ಮೈಸೂರು :   ಪಕ್ಷಕ್ಕೆ ಕಾರ್ಯಕರ್ತರ ಶಕ್ತಿ ಇರುವುದರಿಂದ ಜೆಡಿಎಸ್ ಮುಗಿಸಬೇಕು ಎಂಬ ಕನಸು ಹೊತ್ತವರ ಪ್ರಯತ್ನ ನನಸಾಗುವುದಿಲ್ಲ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ನಗರದ ಸಾರಾ ಕನ್ವೆನ್ಷನ್ಹಾಲ್ನಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕರ್ತರು ಮತ್ತು ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಜೆಡಿಎಸ್ಕಾರ್ಯಕರ್ತರ ಶ್ರಮದಿಂದ ಉಳಿದಿದ್ದು, ಫೀನಿಕ್ಸ್ಪಕ್ಷಿಯಂತೆ ಮೇಲೇಳುವ ಶಕ್ತಿ ಇದೆ. ಈಗ ಪಕ್ಷಕ್ಕೆ ಹೆಚ್ಚಿನ ಸದಸ್ಯರನ್ನು ನೋಂದಾಯಿಸುವ ಮೂಲಕ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಜ್ಜಾಗೋಣ ಎಂದರು.

ಪಕ್ಷ ಸಂಘಟನೆ ಸರಿ ಇದ್ದರೆ ನಾವು ಯಾವುದೇ ಚುನಾವಣೆಯಾದರೂ ಗೆಲ್ಲಬಹುದು. ನಮ್ಮ ಪಕ್ಷ ಬಲವಾಗಿದ್ದರೆ ರೈತರಿಗೆ ಅನುಕೂಲವಾಗುತ್ತದೆ. ಎಲ್ಲಾ ಸಮಾಜವನ್ನು ಒಟ್ಟಿಗೆ ಕರೆದೊಯ್ಯುವ ಶಕ್ತಿ ಪಕ್ಷಕ್ಕಿದೆ. ದೇವೇಗೌಡರ ಪರಿಶ್ರಮ ಮತ್ತು ದೂರದೃಷ್ಟಿಯ ಫಲವಾಗಿ ಜೆಡಿಎಸ್ಇಂದಿಗೂ ಸಶಕ್ತವಾಗಿದೆ. ಅಂಬೇಡ್ಕರ್ಅವರ ಆಶಯದಂತೆ ಎಲ್ಲಾ ಸಮುದಾಯದ ನಾಯಕರನ್ನೂ ಬೆಳೆಸಿದರು. ಅದನ್ನು ಸ್ಮರಿಸುವ ಹೃದಯ ವೈಶಾಲ್ಯತೆ ಅನೇಕರಿಗೆ ಇಲ್ಲ ಎಂದು ಅವರು ಟೀಕಿಸಿದರು.

ನಾಯಕ ಸಮುದಾಯಕ್ಕೆ ಮೀಸಲಾತಿ ನೀಡುವಾಗ ದೇವೆಗೌಡರ ಕೊಡುಗೆ ದೊಡ್ಡದು. ಚಂದ್ರಶೇಖರ್ ಅವರು ಮಂತ್ರಿ ಮಾಡುತ್ತೇನೆ. ನನಗೆ ಮಂತ್ರಿ ಸ್ಥಾನ ಬೇಡ. ಅದರ ಬದಲಿಗೆ ನಾಯಕ ಸವಾಜವನ್ನು ಪ.ಪ್ರವರ್ಗಕ್ಕೆ ಸೇರಿಸಿ ಎಂದು ಕೇಳಿದರು. ಅವರ ಒತ್ತಾಯದ ಮೇರೆಗೆ ಇವತ್ತು ನಾಯಕ ಸಮಾಜ ಎಸ್ಟಿ ಪ್ರವರ್ಗದಲ್ಲಿದೆ. ಅಷ್ಟೇ ಅಲ್ಲ, ಆ ಸಮುದಾಯದ ಮಠ ಕಟ್ಟಬೇಕಾದರೆ ಅವರ ಕೊಡುಗೆ ಇದೆ ಎಂದು ಅವರು ಮಾಹಿತಿ ನೀಡಿದರು.

ಕೇವಲ ಐದು ಗ್ಯಾರಂಟಿ ಕೊಟ್ಟು ಜನರ ಮೇಲೆ ಸರ್ಕಾರ ಬೆಲೆಯ ಬರೆ ಎಳೆಯುತ್ತಿದೆ. ಇಂದು ಮಧ್ಯರಾತ್ರಿಯಿಂದ ಬಸ್ ದರ ಶೇ. 15ರಷ್ಟು ಹೆಚ್ಚಾಗುತ್ತಿದೆ. ಕಾಂಗ್ರೆಸ್ ನವರಿಗೆ ಮಧ್ಯರಾತ್ರಿ ಎಂದರೆ ಬಹಳ ಇಷ್ಟ. ದರದ ಮೇಲೆ ದರ ಏರಿಸುತ್ತಾ ಹೋದರೆ 2 ಸಾವಿರ ಕೊಡುವುದು ದೊಡ್ಡ ವಿಷಯವೇ? ನಾನೇ ಸಿಎಂ ಆಗಿದ್ದಿದ್ದರೆ 2 ಸಾವಿರ ಬದಲು 5 ಸಾವಿರ ಕೊಡುತ್ತಿದ್ದೆ ಎಂದು ಅವರು ವಾಗ್ದಾಳಿ ನಡೆಸಿದರು.

ಮುಂದಿನ ದಿನಗಳಲ್ಲಿ ನಮಗೆ ಒಳ್ಳೆಯ ಭವಿಷ್ಯವಿದೆ. ನಾವು ನಿರಾಶರಾಗಬೇಕಿಲ್ಲ. ಪಕ್ಷ ಕಟ್ಟೋಣ, ಮಿತ್ರಪಕ್ಷ ಬಿಜೆಪಿ ಜತೆ ಸೇರಿ ಅಧಿಕಾರಕ್ಕೆ ಬರುತ್ತೇವೆ. ಇಡೀ ದೇಶದಲ್ಲಿಯೇ ರಾಜ್ಯದಲ್ಲಿನ ಕಾಂಗ್ರೆಸ್ಸರ್ಕಾರದಂತ ಕೆಟ್ಟ ಸರ್ಕಾರವನ್ನು ನೋಡಲಿಲ್ಲ. ರಾಜ್ಯ ಸರ್ಕಾರ ವಿಪರೀತ ಭ್ರಷ್ಟಾಚಾರದಲ್ಲಿ ಮುಳುಗಿದೆ. ಐದು ಪರ್ಸೆಂಟ್, ಹತ್ತು ಪರ್ಸೆಂಟ್ಕಮಿಷನ್ಗೆ ಒತ್ತಡ ಹಾಕಲಾಗುತ್ತಿದೆ ಎಂದರು.

ಮುಸ್ಲಿಮರು ನಮ್ಮವರು ಎಂದು ಈ ಸರ್ಕಾರ ಹೇಳುತ್ತಿದೆ. ಆದರೆ, ಅದೇ ಮುಸ್ಲಿಂ ಗುತ್ತಿಗೆದಾರರಿಂದ ಸುಲಿಗೆ ಮಾಡುತ್ತಿದೆ. ಗುತ್ತಿಗೆದಾರನೊಬ್ಬ ದಯಾಮರಣ ಕೊಡಿ ಎಂದು ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾನೆ. ಇದಕ್ಕೆ ಏನು ಉತ್ತರ ಕೊಡುತ್ತೀರಿ ಸಿದ್ಧರಾಮಯ್ಯನವರೇ ಎಂದು ಅವರು ಪ್ರಶ್ನಿಸಿದರು.

ವಾಲ್ಮೀಕಿ ನಿಗಮದ ಅಕ್ರಮ ಗೊತ್ತೇ ಇದೆ. ಅಲ್ಲಿ ಚಂದ್ರಶೇಖರ್ ಎನ್ನುವ ಅಧಿಕಾರಿ ಆತ್ಮಹತ್ಯೆ ಮಾಡಿಕೊಳ್ಳದೆ ಇದ್ದಿದ್ದರೆ ಸಿದ್ದರಾಮಯ್ಯ ಅವರ ರಾಮಾಯಣ ಬಯಲಿಗೆ ಬರುತ್ತಿರಲಿಲ್ಲ. ಅಧಿಕಾರಿಗಳು, ಗುತ್ತಿಗೆದಾರರು ನಿರಂತರವಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ರಾಜ್ಯದ ಉದ್ದಗಲಕ್ಕೂ ಬಾಣಂತಿಯರು ಆಸ್ಪತ್ರೆಗಳಲ್ಲಿಯೇ ಜೀವ ಕಳೆದುಕೊಳ್ಳುತ್ತಿದ್ದಾರೆ. ಸಿದ್ದರಾಮಯ್ಯನವರೇ ನಿಮಗೆ ಕಿಂಚಿತ್ತಾದರೂ ದುಃಖ ಬೇಡವೇ ಎಂದು ಅವರು ಪ್ರಶ್ನಿಸಿದರು.