ಶಾಲಾ ಸಂಸತ್ತನಿಂದ ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ

| Published : Aug 18 2025, 12:00 AM IST

ಸಾರಾಂಶ

ದೇಶದ ಆಡಳಿತ ವ್ಯವಸ್ಥೆಯಲ್ಲಿ ಸಂಸತ್ ಮಹತ್ವ ಏನು ಎಂಬುದರನ್ನು ತಿಳಿಸುವಲ್ಲಿ, ಮಕ್ಕಳಲ್ಲಿ ನಾಯಕತ್ವ ಗುಣ ಬೆಳೆಸುವಲ್ಲಿ ಶಾಲಾ ಸಂಸತ್ ರಚನೆ ಅತೀ ಪ್ರಮುಖ ಮತ್ತು ಮಹತ್ವದ್ದಾಗಿದೆ ಎಂದು ಹುಲ್ಲೂರ ಕಲ್ಮೇಶ್ವರ ವಿದ್ಯಾ ಪ್ರಸಾರಕ ಸೀಮಿತ ಪ್ರೌಢಶಾಲೆ ಎಸ್‌ಡಿಎಂಸಿ ಸದಸ್ಯ ಯಲ್ಲಪ್ಪ ಎಂ. ಮಕ್ಕಣ್ಣವರ ಹೇಳಿದರು.

ರೋಣ:ದೇಶದ ಆಡಳಿತ ವ್ಯವಸ್ಥೆಯಲ್ಲಿ ಸಂಸತ್ ಮಹತ್ವ ಏನು ಎಂಬುದರನ್ನು ತಿಳಿಸುವಲ್ಲಿ, ಮಕ್ಕಳಲ್ಲಿ ನಾಯಕತ್ವ ಗುಣ ಬೆಳೆಸುವಲ್ಲಿ ಶಾಲಾ ಸಂಸತ್ ರಚನೆ ಅತೀ ಪ್ರಮುಖ ಮತ್ತು ಮಹತ್ವದ್ದಾಗಿದೆ ಎಂದು ಹುಲ್ಲೂರ ಕಲ್ಮೇಶ್ವರ ವಿದ್ಯಾ ಪ್ರಸಾರಕ ಸೀಮಿತ ಪ್ರೌಢಶಾಲೆ ಎಸ್‌ಡಿಎಂಸಿ ಸದಸ್ಯ ಯಲ್ಲಪ್ಪ ಎಂ. ಮಕ್ಕಣ್ಣವರ ಹೇಳಿದರು.

ಅವರು ತಾಲೂಕಿನ ಹುಲ್ಲೂರ ಗ್ರಾಮದ ಕಲ್ಮೇಶ್ವರ ವಿದ್ಯಾ ಪ್ರಸಾರಕ ಸಮಿತಿಯ ಪ್ರೌಢಶಾಲೆಯಲ್ಲಿ ಜರುಗಿದ ಶಾಲಾ ಸಂಸತ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಎಸ್.ಕೆ. ಪಾಟೀಲ ಮಾತನಾಡಿ, ಇಂದಿನ ವಿದ್ಯಾರ್ಥಿಗಳು ದೇಶದ ನಾಳಿನ ನಾಡಿನ ಉತ್ತಮ ಪ್ರಜೆಗಳಾಗಬೇಕು. ಶಾಲಾ ಶೈಕ್ಷಣಿಕ ಜ್ಞಾನದ ಜತೆಗೆ ಸಾಮಾಜಿಕ ಜವಾಬ್ದಾರಿಗಳನ್ನು ಅರಿತುಕೊಳ್ಳಬೇಕು. ಸುಭದ್ರ ನಾಡನ್ನು ಕಟ್ಟಲು ಪ್ರತಿಯೊಬ್ಬರ ಜವಾಬ್ದಾರಿ ಮುಖ್ಯವಾಗಿದೆ ಎಂದರು.

ಉಪನ್ಯಾಸಕರಾಗಿ ಆಗಮಿಸಿದ ಮಂಜುನಾಥ ಟಿ. ಆರೇರ ಅವರು, ಚುನಾವಣೆ, ಸಂಸತ್ , ಮತದಾನದ ಮಹತ್ವ ಕುರಿತು ವಿವರಿಸಿದರು.

ಪ್ರಾಸ್ತಾವಿಕವಾಗಿ ವ್ಹಿ.ಎಲ್. ಮಾನೇದ ಮಾತನಾಡಿದರು. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶಾಲೆಗ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಬಸನಗೌಡ ಮೆಣಸಗಿ, ಬಸವರಾಜ ಗಾಣಿಗೇರ, ಅಂದಪ್ಪ ಪುರದ, ಮಲ್ಲಿಕಾರ್ಜುನ ಪಾಟೀಲ, ಸುರೇಶ ಹೆರಕಲ್ಲ, ಕುಬೇರಗೌಡ ಕುರವತ್ತಿಗೌಡ್ರ, ರವೀಂದ್ರಗೌಡ ಪಾಟೀಲ, ಎಂ.ಎಚ್. ನದಾಫ, ವೀರಪ್ಪ ಗಾಣಿಗೇರ, ಷಣ್ಮುಕಗೌಡ ಮೆಣಸಗಿ, ಯಲ್ಲಪ್ಪಗೌಡ ಕೆಂಚನಗೌಡ್ರ, ಮಂಜುನಾಥ ದೇಸಾಯಿ, ಮುಖ್ಯೋಪಾಧ್ಯಾಯ ಎ.ಬಿ. ಲಮಾಣಿ ಮುಂತಾದವರು ಉಪಸ್ಥಿತರಿದ್ದರು. ವೈ.ಎಚ್. ಕಟ್ಟೆಣ್ಣವರ ನಿರೂಪಿಸಿದರು. ವ್ಹಿ.ವ್ಹಿ.ರಾಠೋಡ ವಂದಿಸಿದರು.