ಪಠ್ಯೇತರ ಚಟುವಟಿಕೆಗಳಿಂದ ನಾಯಕತ್ವ ಗುಣ: ಸಚಿವ ಎಸ್.ಮಧು ಬಂಗಾರಪ್ಪ

| Published : May 13 2025, 01:13 AM IST

ಸಾರಾಂಶ

ಸೊರಬ: ವಿದ್ಯಾರ್ಥಿಗಳು ಕ್ರೀಡಾ, ಸಾಂಸ್ಕೃತಿಕ, ಸ್ಕೌಟ್ಸ್ ಮತ್ತು ಗೈಡ್ಸ್ ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರದಲ್ಲಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದರಿಂದ ನಾಯಕತ್ವದ ಗುಣ ಬೆಳೆಯುತ್ತದೆ ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಎಸ್.ಮಧು ಬಂಗಾರಪ್ಪ ಹೇಳಿದರು.

ಸೊರಬ: ವಿದ್ಯಾರ್ಥಿಗಳು ಕ್ರೀಡಾ, ಸಾಂಸ್ಕೃತಿಕ, ಸ್ಕೌಟ್ಸ್ ಮತ್ತು ಗೈಡ್ಸ್ ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರದಲ್ಲಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದರಿಂದ ನಾಯಕತ್ವದ ಗುಣ ಬೆಳೆಯುತ್ತದೆ ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಎಸ್.ಮಧು ಬಂಗಾರಪ್ಪ ಹೇಳಿದರು.

ಸೋಮವಾರ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ೨೦೨೪-೨೫ನೇ ಸಾಲಿನ ಸಾಂಸ್ಕೃತಿಕ, ಕ್ರೀಡಾ, ರಾಷ್ಟ್ರೀಯ ಸೇವಾ ಯೋಜನೆ, ಯುವ ರೆಡ್ ಕ್ರಾಸ್ ರೋವರ್ಸ್ ರೇಂಜರ್ಸ್ ಚಟುವಟಿಕೆಗಳ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಎಸ್.ಬಂಗಾರಪ್ಪ ಅವರು ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಈ ಕಾಲೇಜು ಆರಂಭವಾಗಿದ್ದು, ಸಾವಿರಾರು ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯಲು ಅನುಕೂಲವಾಗಿದೆ. ಕಾಲೇಜಿನ ಸಮಗ್ರ ಅಭಿವೃದ್ಧಿಗೆ ಬೇಕಾಗಿರುವ ಮೂಲ ಸೌಕರ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದ ಅವರು, ಶಿಕ್ಷಣ ಸಚಿವನಾಗಿ ಮಕ್ಕಳ ಹಿತದೃಷ್ಟಿಯಿಂದ ಹಲವು ಅಮೂಲಾಗ್ರವಾದ ಬದಲಾವಣೆ ತಂದಿದ್ದು, ಇದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಸಾಧ್ಯವಾಗುತ್ತದೆ ದೇಶದಲ್ಲಿ ಯಾವುದೇ ಬದಲಾವಣೆ ಅಭಿವೃದ್ಧಿ ಆಗುವುದಾದರೆ ಅದು ಶಿಕ್ಷಣದಿಂದ ಮಾತ್ರ ಸಾಧ್ಯ ಎಂದರು.ತಾಪಂ ಮಾಜಿ ಅಧ್ಯಕ್ಷ ಎಚ್.ಗಣಪತಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಮುಂದಾಗಬೇಕು ಎಂದರು.ತಾಲೂಕು ಬಗರ್‌ಹುಕುಂ ಸಮಿತಿ ಅಧ್ಯಕ್ಷ ಎಂ.ಡಿ.ಶೇಖರ್ ಮಾತನಾಡಿ, ಸೊರಬ ಕಾಲೇಜಿಗೆ ದೊಡ್ಡ ಇತಿಹಾಸವೇ ಇದ್ದು, ವಿದ್ಯಾರ್ಥಿಗಳು ತಮ್ಮ ಗಮನವನ್ನು ಕೇವಲ ಶಿಕ್ಷಣಕ್ಕೆ ಮೀಸಲಿಟ್ಟರೆ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಎಂದರು.ಸಿಪಿಐ ರಾಜಶೇಖರ್ ಮಾತನಾಡಿದರು. ನಿವೃತ್ತ ಡಿಡಿಪಿಐ ಡಾ.ಹಾ.ಉಮೇಶ್ ಸಮಾರೋಪ ಭಾಷಣ ಮಾಡಿದರು. ಪ್ರಾಂಶುಪಾಲೆ ನೇತ್ರಾವತಿ ಅಧ್ಯಕ್ಷತೆ ವಹಿಸಿದ್ದರು.

ಪುರಸಭೆ ಅಧ್ಯಕ್ಷ ಪ್ರಭು ಮೇಸ್ತ್ರಿ, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಪ್ರಕಾಶ್.ಜೆ. ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಹೂವಪ್ಪ, ಪ್ರವೀಣ್ ಶಾಂತಗೇರಿ, ಹರೀಶ್, ಮಹಮದ್ ಸಾಜೀದ್, ಡಾ.ಜೋಶಿ, ರಾಜೇಶ್, ಮಂಜುನಾಥ್, ಮಹೇಶ್ವರಿ, ಶಂಕರ್ ನಾಯ್ಕ್, ಕಿರಣ್ ಕುಮಾರ್, ಮೋಹನ್‌ಕುಮಾರ್, ಚರಣ್ ರಾಜ್, ರಾಘವೇಂದ್ರ, ಆಶಾ ಗೌಡರ್, ಮಂಜುನಾಥ್, ನೇಂದ್ರಪ್ಪ, ರಾಘವೇಂದ್ರ, ರಾಜಶೇಖರಗೌಡ, ಪ್ರಮೋದ್, ರವಿ, ರಾಘವೇಂದ್ರ, ಮಿಲನ, ಪೂರ್ಣಿಮಾ, ಮಮತಾ, ಗುರುದತ್ತ, ರವಿ ಹೆಗಡೆ, ಕಿರಣ್‌ಕುಮಾರ್, ಚೈತ್ರ, ಐಶ್ವರ್ಯ, ಕೊಟ್ರೇಶ್, ಚಂದ್ರಪ್ಪ, ರಾಕೇಶ್, ದಿಲೀಪ್, ಹಬೀಬುಲ್ಲಾ, ಜಾಹೀರುದ್ದೀನ್, ಪವಿತ್ರ ಸೇರಿದಂತೆ ಬೋಧಕ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು. ವಿರೇಶ್ ಮತ್ತು ಅಮೃತ ಕಾರ್ಯಕ್ರಮ ನಿರೂಪಿಸಿದರು. ಭುವನ್ ಪ್ರಾರ್ಥಿಸಿ ಯೋಗೀಶ್ ಸ್ವಾಗತಿಸಿದರು.