ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಉತ್ತಮ ಶಿಕ್ಷಣ ನೀಡುತ್ತಿದ್ದು, ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿರುವ ನಿಟ್ಟಿನಲ್ಲಿ ವಿದ್ಯೆ ಕಲಿಸಿದ ಗುರುಗಳನ್ನು ನಂಬಿ ಗೌರವಿಸಿ ಅವರಲ್ಲಿ ದೈವತ್ವವನ್ನು ಕಾಣಬೇಕು. ನಿಮ್ಮ ಭವಿಷ್ಯ ಉಜ್ವಲವಾಗಬೇಕು ಎಂದರೆ ನಿಮ್ಮನ್ನು ನೀವು ಗುರುವಿಗೆ ಸಮರ್ಪಿಸಿಕೊಳ್ಳಬೇಕು.

ಹಲಗೂರು:

ವಿದ್ಯೆ ಕಲಿಸುವ ಗುರುಗಳ ಶ್ರಮಕ್ಕೆ ತಕ್ಕ ಪ್ರತಿಫಲವನ್ನು ವಿದ್ಯಾರ್ಥಿಗಳು ನೀಡಿ ಸಮಾದಲ್ಲಿ ಆದರ್ಶ ವ್ಯಕ್ತಿಯಾಗಿ ಬದುಕಬೇಕು ಎಂದು ಬಸವನಪುರದ ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕಿ ಸುಕನ್ಯ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಕರ್ನಾಟಕ ಪಬ್ಲಿಕ್ ಶಾಲಾ ವತಿಯಿಂದ ಕುವೆಂಪು ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿ, ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಉತ್ತಮ ಶಿಕ್ಷಣ ನೀಡುತ್ತಿದ್ದು, ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿರುವ ನಿಟ್ಟಿನಲ್ಲಿ ವಿದ್ಯೆ ಕಲಿಸಿದ ಗುರುಗಳನ್ನು ನಂಬಿ ಗೌರವಿಸಿ ಅವರಲ್ಲಿ ದೈವತ್ವವನ್ನು ಕಾಣಬೇಕು. ನಿಮ್ಮ ಭವಿಷ್ಯ ಉಜ್ವಲವಾಗಬೇಕು ಎಂದರೆ ನಿಮ್ಮನ್ನು ನೀವು ಗುರುವಿಗೆ ಸಮರ್ಪಿಸಿಕೊಳ್ಳಬೇಕು ಎಂದರು.

ಒಬ್ಬ ವಿದ್ಯಾರ್ಥಿಗೆ ಮುಂದೆ ಗುರಿ ಹಿಂದೆ ಗುರು ಇದ್ದರೆ ಖಂಡಿತ ಅವನೊಬ್ಬ ಸಾಧಕನಾಗುತ್ತಾನೆ. ಗುರು ಕಲಿಸುವ ವಿದ್ಯೆಯನ್ನು ಕಲಿತು ಸಮಾಜಕ್ಕೆ, ದೇಶಕ್ಕೆ ಒಬ್ಬ ಆದರ್ಶ ವ್ಯಕ್ತಿಯಾಗಬೇಕು ಖಾಸಗಿ ಶಾಲೆಗಳ ಆಕರ್ಷಕ ಜಾಹೀರಾತಿಗೆ ಮಾರು ಹೋಗದೇ ಸರ್ಕಾರಿ ಶಾಲೆಗಳನ್ನು ಪ್ರೋತ್ಸಾಹಿಸಬೇಕು ಎಂದರು.

ಈ ವೇಳೆ ಹುಲ್ಲೇಗಾಲ ಗ್ರಾಮದ ಹೇಮಲತಾ, ಕರಿಗೌಡನದೊಡ್ಡಿ ಶಾಲೆಯ ಶಿಕ್ಷಕಿ ಗೊಲ್ಲರಹಳ್ಳಿಯ ರಾಧಾ ಮತ್ತು ಬಸವನಪುರದ ಸುಕನ್ಯಾರನ್ನು ಸನ್ಮಾನಿಸಲಾಯಿತು. ಈ ವೇಳೆ ಶಾಲೆ ಶಿಕ್ಷಕವೃಂದ ಮತ್ತು ಇತರರು ಇದ್ದರು.

ಶಿಕ್ಷಕರಾಗಿ ಕೆಲಕಾಲ ಮಕ್ಕಳಿಗೆ ಪಾಠ ಗಮನ ಸೆಳೆದ ಎಸಿ ಶ್ರೀನಿವಾಸ್

ಪಾಂಡವಪುರ:ಪಾಂಡವಪುರ ಉಪವಿಭಾಗಾಧಿಕಾರಿ ಕೆ.ಆರ್.ಶ್ರೀನಿವಾಸ್ ಅವರು ತಾಲೂಕಿನ ಚಲುವರಸನಕೊಪ್ಪಲು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ಶಿಕ್ಷಕರಾಗಿ ಕೆಲ ಹೊತ್ತು ವಿದ್ಯಾರ್ಥಿಗಳಿಗೆ ಪಾಠ ಮಾಡಿ ಗಮನಸೆಳೆದರು.

ಮಾಮೂಲಿ ಶಿಕ್ಷಕರಂತೆಯೇ ಸೀಮೆ ಸುಣ್ಣವನ್ನಿಡು ಉಪವಿಭಾಗಾಧಿಕಾರಿಗಳು ಸುಮಾರು ಅರ್ಧ ತಾಸಿಗೂ ಹೆಚ್ಚು ಕಾಲ ವಿದ್ಯಾರ್ಥಿಗಳಿಗೆ ಪಾಠ ಮಾಡಿದರು. ಸಮಾಜದ ದೊಡ್ಡ ದೊಡ್ಡ ದಾರ್ಶನಿಕರ ಉದಾಹರಣೆ ನೀಡಿದರು.ಉತ್ತಮ ವಿದ್ಯಾಭ್ಯಾಸ ಮಾಡುವ ಮೂಲಕ ವಿದ್ಯಾರ್ಥಿಗಳು ದೊಡ್ಡ ದೊಡ್ಡ ಅಧಿಕಾರಿಗಳಾಗಬೇಕು. ಇದಕ್ಕಾಗಿ ವಿದ್ಯಾರ್ಥಿಗಳು ಪುಸ್ತಕಗಳನ್ನು ಓದುವುದನ್ನು ರೂಢಿಸಿಕೊಳ್ಳಬೇಕು. ಇದರ ಜತೆಗೆ ಪ್ರತಿನಿತ್ಯ ದಿನಪತ್ರಿಕೆಗಳನ್ನು ಓದುವ ಮೂಲಕ ತಮ್ಮ ಜ್ಞಾನ ಹೆಚ್ಚಿಸಿಕೊಳ್ಳಬೇಕು ಎಂದರು.

ದಿನಪತ್ರಿಕೆ ಹಾಗೂ ಗ್ರಂಥಾಲಯಗಳಲ್ಲಿನ ಪುಸ್ತಕಗಳನ್ನು ಓದಿದರೆ ಐಎಎಸ್, ಕೆಎಎಸ್ ಪರೀಕ್ಷೆ ಬರೆದು ದೊಡ್ಡ ಮಟ್ಟದ ಅಧಿಕಾರಿಗಳಾಗಬಹುದು. ತಹಸೀಲ್ದಾರ್, ಉಪವಿಭಾಗಾಧಿಕಾರಿ, ಜಿಲ್ಲಾಧಿಕಾರಿ, ಪೊಲೀಸ್ ಸಬ್ ಇನ್ಸ್ ಪೆಕ್ಟರ್, ಡಿವೈ ಎಸ್ಪಿ, ಎಸ್ಪಿ ಹುದ್ದೆಯಂತಹ ದೊಡ್ಡ ದೊಡ್ಡ ಹುದ್ದೆಗೇರುವ ಕನಸ್ಸನ್ನು ಜೀವನದಲ್ಲಿ ವಿದ್ಯಾರ್ಥಿಗಳು ಕಾಣಬೇಕು ಎಂದು ಕಿವಿಮಾತು ಹೇಳಿದರು. ಈ ವೇಳೆ ಶಾಲೆ ಮುಖ್ಯ ಶಿಕ್ಷಕ ಕುಮಾರ್ ಇದ್ದರು.