ಸಾರಾಂಶ
ತಯಾರಿಸಿದ ವಸ್ತುಗಳು ಮಾರಾಟವಾಗಬೇಕಾದರೆ, ಮಾರ್ಕೆಟಿಂಗ್ ಕೌಶಲ್ಯ ತಿಳಿದಿರಲೇ ಬೇಕು. ಅದರ ತಂತ್ರಗಾರಿಕೆಯನ್ನು ಅರಿತುಕೊಳ್ಳುವ ಸಲುವಾಗಿ ವಿದ್ಯಾರ್ಥಿಗಳಿಗಾಗಿ ಈ ಮೇಳವನ್ನು ಆಯೋಜಿಸಲಾಗಿದೆ.
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ವಿದ್ಯಾರ್ಥಿಗಳಿಗೆ ಓದಿನೊಂದಿಗೆ ವ್ಯವಹಾರ ಜ್ಞಾನ ತಿಳಿಸಿ ಕೊಡುವ ಅಗತ್ಯವಿದೆ. ವ್ಯವಹಾರ ಜ್ಞಾನದ ಬಗ್ಗೆ ಅರಿವು ಹೊಂದುವ ನಿಟ್ಟಿನಲ್ಲಿ ವಿದ್ಯಾರ್ಥಿ ಮಾರುಕಟ್ಟೆ ಕಾರ್ಯ ಕ್ರಮಗಳನ್ನು ಬಿಜಿಎಸ್ ಶಿಕ್ಷಣ ಸಂಸ್ಥೆ ಆಯೋಜಿಸುತ್ತಿದೆ ಎಂದು ಆದಿ ಚುಂಚನ ಗಿರಿ ಪೀಠಾಧ್ಯಕ್ಷ ಡಾ.ನಿರ್ಮಲಾನಂದ ನಾಥ ಸ್ವಾಮೀಜಿ ತಿಳಿಸಿದರು.ನಗರ ಹೊರವಲಯದ ಎಸ್ ಜೆಸಿಐಟಿ ಇಂಜನಿಯರಿಂಗ್ ಕಾಲೇಜು ಆವರಣದಲ್ಲಿನ ಬಿಜಿಎಸ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮಂಟ್ ಸ್ಟಡೀಸ್ ಕಾಲೇಜು ವತಿಯಿಂದ ಸೋಮವಾರ ಆಯೋಜಿಸಿದ್ದ ವಿದ್ಯಾರ್ಥಿ ಬಜಾರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ವ್ಯಾಸಂಗದ ಜತೆ ವ್ಯವಹಾರ
ಈ ವಿದ್ಯಾರ್ಥಿ ಬಜಾರ್ ಕಾರ್ಯಕ್ರಮವು ಜಿಲ್ಲೆಯಲ್ಲಿಯೇ ಪ್ರಥಮಬಾರಿಗೆ ನಮ್ಮ ಕಾಲೇಜಿನ ವ್ಯವಹಾರ ನಿರ್ವಾಹಣ ಶಾಸ್ತ್ರ ಹಾಗೂ ವಾಣಿಜ್ಯ ಶಾಸ್ತ್ರದ ವಿದ್ಯಾರ್ಥಿಗಳು ಪದವಿಯ ನಂತರ ಸ್ವಂತವಾಗಿ ವ್ಯವಹಾರವನ್ನು ಪ್ರಾರಂಭಿಸಲು ಅನುಕೂಲವಾಗುವಂತೆ ವ್ಯಾಸಂಗ ಮಾಡುತ್ತಿರುವಾಗಲೇ ಸ್ವoತ ವ್ಯವಹಾರವನ್ನು ಹೇಗೆ ಪ್ರಾರಂಭಿಸಿ, ಲಾಭ -ನಷ್ಟದ ಬಗೆಗಿನ ಅನುಭವಗಳನ್ನು ಪಡೆಯವ ಪ್ರಯತ್ನವನ್ನು ವಿದ್ಯಾರ್ಥಿಗಳು ಮಾಡುತ್ತಿದ್ದಾರೆ ಎಂದರು.ಸ್ವoತ ವ್ಯವಹಾರವನ್ನು ಆರಂಭಿಸಲು ಒಂದು ಉತ್ತಮ ವೇದಿಕೆಯನ್ನು ನಮ್ಮ ಕಾಲೇಜಿನಲ್ಲಿ ಕಲ್ಪಿಸಲಾಗಿದೆ. ವಿದ್ಯಾರ್ಥಿಗಳು ತಮ್ಮ ಸ್ವoತ ಸಾಮರ್ಥ್ಯದಿಂದ ತಮ್ಮದೇ ಆದ ವಿವಿಧ ರೀತಿಯ ತಿಂಡಿ -ತಿನಿಸು, ಸಿಹಿ,ಕಾರಾ ಖಾದ್ಯಗಳು, ಬಟ್ಟೆ, ದಿನಸಿ ವಸ್ತುಗಳು, ಅಲoಕಾರಿಕ ವಸ್ತುಗಳ ಮಳಿಗೆ, ಹೀಗೆ ಹಲವಾರು ಮಾರಾಟ ಮಳಿಗೆಗಳನ್ನು ಪ್ರಾರಂಭ ಮಾಡುವ ಮೂಲಕ ತಮ್ಮಲ್ಲಿರುವ ಸಾಮರ್ಥ್ಯ, ಕೌಶಲ್ಯ, ಚಾಕಚಕ್ಯತೆಯಿಂದ ವ್ಯಾಪಾರ ವಹಿವಾಟು ಮಾಡುವುದನ್ನು ತೋರ್ಪಡಿಸಿದ್ದಾರೆ ಎಂದು ಹೇಳಿದರು.ಮಾರುಕಟ್ಟೆ ಕೌಶಲ ಅಗತ್ಯ
ಸಿಸ್ಟಮ್ ಡೋಮೈನ್ಸ್ ನ ನಿರ್ದೇಶಕ ಕೃಷ್ಣನ್ ಆಗರ್ವಾಲ್ ಮಾತನಾಡಿ, ಇಂದಿನ ಮಾರ್ಕೆಟಿಂಗ್ ಕ್ಷೇತ್ರದಲ್ಲಿ ವಿಫುಲ ಸಾಧ್ಯತೆಗಳಿವೆ. ಅದನ್ನು ಮನಗಂಡೇ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಎಂಬಿಎ ಪದವಿ ಪಡೆಯಲು ಮುಂದಾಗುತ್ತಿದ್ದಾರೆ. ತಯಾರಿಸಿದ ವಸ್ತುಗಳು ಮಾರಾಟವಾಗಬೇಕಾದರೆ, ಮಾರ್ಕೆಟಿಂಗ್ ಕೌಶಲ್ಯ ತಿಳಿದಿರಲೇ ಬೇಕು. ಅದರ ತಂತ್ರಗಾರಿಕೆಯನ್ನು ಅರಿತುಕೊಳ್ಳುವ ಸಲುವಾಗಿ ವಿದ್ಯಾರ್ಥಿಗಳಿಗಾಗಿ ಈ ಮೇಳವನ್ನು ಆಯೋಜಿಸಿದ್ದಾರೆ. ಇದರಿಂದ ವಿದ್ಯಾರ್ಥಿಗಳು ಪಡೆದ ಅನುಭವ ಅಪಾರ ಎಂದೇ ಹೇಳಬಹುದು ಎಂದರು.ಕೆಲ ವಿದ್ಯಾರ್ಥಿಗಳು ತಾವೇ ತಯಾರಿಸಿದ ಸಿಹಿ-ಖಾರ ಖಾದ್ಯಗಳನ್ನು ತಮ್ಮ ಮಳಿಗೆಗಳಲ್ಲಿ ಮಾರಾಟ ಮಾಡಿದರೆ, ಕೆಲ ವಿಧ್ಯಾರ್ಥಿಗಳು ಫನ್ ಕಾರ್ನರ್ ಹೆಸರಿನಲ್ಲಿ ಗೇಮಿಂಗ್ ಸೆಂಟರ್, ಕೆಲವರು ಬಟ್ಟೆ ಅಂಗಡಿ ಮತ್ತೆ ಕೆಲವರು ಪುಸ್ತಕ ಮಳಿಗೆ , ಜ್ಯೂಸ್ ಕಾರ್ನರ್ ,ಹಣ್ಣಿನ ಅಂಗಡಿಗಳನ್ನು ತೆರೆದಿದ್ದರು.
ಕಾರ್ಯಕ್ರಮದಲ್ಲಿ ಚಿಕ್ಕಬಳ್ಳಾಪುರ ಶಾಖಾ ಮಠದ ಕಾರ್ಯದರ್ಶಿ ಮಂಗಳನಾಥ ಸ್ವಾಮೀಜಿ, ಬಿ ಜಿ ಎಸ್ ಸಮೂಹ ಸಂಸ್ಥೆಯ ಮುಖ್ಯ ಆಡಳಿತಧಿಕಾರಿ ಡಾ. ಎನ್. ಶಿವರಾಮ್ ರೆಡ್ಡಿ ,ಎಸ್ ಜೆ ಸಿ ಐ ಟಿ ಕಾಲೇಜಿನ ಪ್ರಾಂಶುಪಾಲ ಡಾ. ಜಿ ಟಿ ರಾಜು,ರಿಜಿಸ್ಟ್ರಾರ್ ಜೆ.ಸುರೇಶ್, ಕಾಲೇಜಿನ ಪ್ರಾoಶುಪಾಲ ಡಾ.ಬಿ.ಆರ್.ವೆಂಕಟೇಶ್ ಬಾಬು, ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.;Resize=(128,128))
;Resize=(128,128))
;Resize=(128,128))
;Resize=(128,128))