ಸೂರ್ಯದೇವಸ್ಥಾನ ಶಾಲೆಯಲ್ಲಿ ಕಲಿಕಾ ಹಬ್ಬ

| Published : Feb 21 2025, 11:47 PM IST

ಸಾರಾಂಶ

ಕೊಪ್ಪ, ಹಳ್ಳಿ ಭಾಗದ ಈ ಶಾಲೆಯಲ್ಲಿ ಇಂತಹ ಅದ್ಧೂರಿ ಕಾರ್ಯಕ್ರಮ ಮಾಡಲು ಊರಿನವರು ಮತ್ತು ಎಸ್.ಡಿ.ಎಂ.ಸಿ. ಸಹಕಾರ ಕಾರಣ ಎಂದು ಕೆಡಿಪಿ ಸದಸ್ಯ ರಾಜಶಂಕರ್ ಹೇಳಿದರು.

ಅದ್ಧೂರಿ ಕಾರ್ಯಕ್ರಮಕ್ಕೆ ಎಲ್ಲರ ಸಹಕಾರ: ರಾಜಶಂಕರ್

ಕನ್ನಡಪ್ರಭ ವಾರ್ತೆ, ಕೊಪ್ಪ

ಹಳ್ಳಿ ಭಾಗದ ಈ ಶಾಲೆಯಲ್ಲಿ ಇಂತಹ ಅದ್ಧೂರಿ ಕಾರ್ಯಕ್ರಮ ಮಾಡಲು ಊರಿನವರು ಮತ್ತು ಎಸ್.ಡಿ.ಎಂ.ಸಿ. ಸಹಕಾರ ಕಾರಣ ಎಂದು ಕೆಡಿಪಿ ಸದಸ್ಯ ರಾಜಶಂಕರ್ ಹೇಳಿದರು.

ಸೂರ್ಯದೇವಸ್ಥಾನದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಎಫ್.ಎಲ್.ಎನ್. ಕಲಿಕಾ ಹಬ್ಬ ಉದ್ಘಾಟಿಸಿ ಮಾತನಾಡಿ, ಶಾಲೆಯಲ್ಲಿರುವ ಕ್ರಿಯಾಶೀಲ ಶಿಕ್ಷಕರ ತಂಡದಿಂದ ಶಾಲೆ ಮತ್ತಷ್ಟು ಅಭಿವೃದ್ಧಿಯಾಗಲಿ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ರಾಘವೇಂದ್ರ ಮಾತನಾಡಿ ಈ ಶಾಲೆ ಸುತ್ತ ಶಾಲೆ ಮುಂದಿನ ಚಪ್ಪರ ಅಲಂಕಾರ, ವೇದಿಕೆ ಸಿಂಗಾರ ಎಲ್ಲಾ ಒಂದಕ್ಕಿಂತ ಒಂದು ಚೆನ್ನಾಗಿದೆ. ವರ್ಣಿಸಲು ಸಾಧ್ಯವಿಲ್ಲ ಎಲ್ಲರೂ ಸೇರಿ ಉತ್ತಮ ಕಾರ್ಯಕ್ರಮ ಮಾಡಿದ್ದಾರೆ. ಇಲ್ಲಿರುವ ಕ್ರಿಯಾಶೀಲ ಶಿಕ್ಷಕರ ತಂಡ ಮತ್ತು ಗ್ರಾಮಸ್ಥರ ಸಹಕಾರ ಉತ್ತಮವಾಗಿದೆ. ಸರ್ಕಾರದ ಈ ಯೋಜನೆ ಇಲ್ಲಿ ವ್ಯವಸ್ಥಿತವಾಗಿ ಜಾರಿಯಾಗಿದೆ. ಯಾವುದಕ್ಕೂ ಕೊರತೆ ಇಲ್ಲದಂತೆ ಕಾರ್ಯಕ್ರಮ ಆಯೋಜನೆ ಮಾಡಿದ್ದಾರೆ ಎಂದರು.

ಕಾರ್ಯಕ್ರಮದ ವೇದಿಕೆಯಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಆರ್.ಡಿ. ರವೀಂದ್ರ ಅವರಿಗೆ ಸನ್ಮಾನಿಸಲಾಯಿತು.ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಶೇಖರಪ್ಪ, ಎಸ್.ಡಿ.ಎಂ.ಸಿ. ಅಧ್ಯಕ್ಷ ಆನಂದ್, ಶಿಕ್ಷಕರ ಸಂಘದ ಅಧ್ಯಕ್ಷ ಆದರ್ಶ, ಇಸಿಒ ಸುಚಿತ್ಚಂದ್ರ, ಬಿ.ಆರ್.ಪಿ. ಗಳಾದ ಸುನಿತಾ, ಯೋಮಕೇಶವ್, ರಾಮಚಂದ್ರ, ರಾಜ್ಯ ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಮಾರುತಿ ಪ್ರಸಾದ್, ಖಜಾಂಚಿ ರಾಜೇಶ್, ನಿರ್ದೇಶಕ ಗಜೇಂದ್ರ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರದೀಪ್, ಬಿ.ಆರ್.ಪಿ.ಗಳಾದ ಮಹಾಲಕ್ಷ್ಮಿ ಭಟ್, ಜ್ಯೋತಿ, ಕೊಪ್ಪ ಗ್ರಾಮಾಂತರ ಕ್ಲಸ್ಟರ್‌ನ ಎಲ್ಲಾ ಶಿಕ್ಷಕರು, ಮಕ್ಕಳು ಸೂರ್ಯದೇವಸ್ಥಾನ ಶಾಲೆ ಶಿಕ್ಷಕರಾದ ಸುಕೇಶ್, ಮಲ್ಲಿಕಾ ಸೇರಿದಂತೆ ಮಕ್ಕಳು, ಪೋಷಕರು, ಗ್ರಾಮಸ್ಥರು ಹಾಜರಿದ್ದರು.

ಈ ಎಫ್.ಎಲ್.ಎನ್. ಕಲಿಕಾ ಹಬ್ಬದಲ್ಲಿ ೭ ವಿಭಾಗದಲ್ಲಿ ಸ್ವರ್ಧೆಗಳನ್ನು ಆಯೋಜಿಸಲಾಗಿತ್ತು. ವಿಜೇತ ಮಕ್ಕಳಿಗೆ ಪ್ರಥಮ ದ್ವಿತೀಯ ತೃತೀಯ ಬಹುಮಾನ ನೀಡಲಾಯಿತು. ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಸಮಾಧಾನಕರ ಬಹುಮಾನ ವಿತರಿಸಲಾಯಿತು.