ಕಲಿಕಾ ಹಬ್ಬ ಕಾರ್ಯಕ್ರಮ ಮಕ್ಕಳು ಸಂತಸದಿಂದ ಕಲಿತು, ಕಲಿಕೆ ಒತ್ತಡವನ್ನು ಕಡಿಮೆ ಮಾಡಲು ಸಹಕಾರಿಯಾಗುವ ಜೊತೆಗೆ ಮಕ್ಕಳು ಸಾಧಿಸಿರುವ ಕಲಿಕಾ ಫಲಗಳನ್ನು ತಿಳಿಯಲು, ಅವರ ಪ್ರತಿಭೆ ಹೊರಹೊಮ್ಮಿಸಲು ಉತ್ತಮ ವೇದಿಕೆಯಾಗಿದೆ ಎಂಬ ಕ್ಷೇತ್ರ ಶಿಕ್ಷಣಾಧಿಕಾರಿ ಈ. ಹಾಲಮೂರ್ತಿ ಹೇಳಿದ್ದಾರೆ.

- ಜಗಳೂರು ಬಿಇಒ ಹಾಲಮೂರ್ತಿ ಅಭಿಮತ । ದೇವಿಕೆರೆ ಕ್ಲಸ್ಟರ್‌ನಿಂದ ಎಫ್‌ಎಲ್ಎನ್‌ ಕಲಿಕಾ ಹಬ್ಬ - - -

ಕನ್ನಡಪ್ರಭ ವಾರ್ತೆ ಜಗಳೂರು

ಕಲಿಕಾ ಹಬ್ಬ ಕಾರ್ಯಕ್ರಮ ಮಕ್ಕಳು ಸಂತಸದಿಂದ ಕಲಿತು, ಕಲಿಕೆ ಒತ್ತಡವನ್ನು ಕಡಿಮೆ ಮಾಡಲು ಸಹಕಾರಿಯಾಗುವ ಜೊತೆಗೆ ಮಕ್ಕಳು ಸಾಧಿಸಿರುವ ಕಲಿಕಾ ಫಲಗಳನ್ನು ತಿಳಿಯಲು, ಅವರ ಪ್ರತಿಭೆ ಹೊರಹೊಮ್ಮಿಸಲು ಉತ್ತಮ ವೇದಿಕೆಯಾಗಿದೆ ಎಂಬ ಕ್ಷೇತ್ರ ಶಿಕ್ಷಣಾಧಿಕಾರಿ ಈ. ಹಾಲಮೂರ್ತಿ ಹೇಳಿದರು.

ತಾಲೂಕಿನ ದೇವಿಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಮಂಗಳವಾರ ದೇವಿಕೆರೆ ಕ್ಲಷ್ಟರ್ ಹಮ್ಮಿಕೊಂಡಿದ್ದ ಎಫ್.ಎಲ್.ಎನ್. ಕಲಿಕಾ ಹಬ್ಬ ಕಾರ್ಯಕ್ರಮಕ್ಕೆ ದೀಪ ಬೆಳಗಿಸಿ ಚಾಲನೆ ನೀಡಿ ಅವರು ಮಾತನಾಡಿದರು. ಮೂಲಭೂತ ಸಾಕ್ಷರತೆ ಹಾಗೂ ಸಂಖ್ಯಾಜ್ಞಾನದ ಬೆಳವಣಿಗೆಗೆ ಕಲಿಕಾ ಹಬ್ಬ ಉತ್ತೇಜನ ನೀಡುತ್ತದೆ. ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಪೋಷಕರು ಪಾಲ್ಗೊಂಡಿದ್ದು, ಶಾಲಾ ಶಿಕ್ಷಕರು ಹಾಗೂ ಸಮುದಾಯದ ಸಹಕಾರದಿಂದ ವ್ಯವಸ್ಥಿತ ಕಾರ್ಯಕ್ರಮ ಸಂತಸದ ಸಂಗತಿ ಎಂದರು.

ಬಿ.ಆರ್.ಸಿ ಡಿ.ಡಿ. ಹಾಲಪ್ಪ ಮಾತನಾಡಿ, ಕಲಿಕಾ ಹಬ್ಬ 1ರಿಂದ 5 ನೇ ತರಗತಿಯ ಸರ್ಕಾರಿ ಶಾಲಾ ಮಕ್ಕಳಿಗೆ ಸಂಬಂಧಿಸಿದ ಕಾರ್ಯಕ್ರಮ ಆಗಿದೆ. ಇಲ್ಲಿ ಮೂಲಭೂತ ಸಾಕ್ಷರತೆ ಮತ್ತು ಸಂಖ್ಯಾ ಜ್ಞಾನಕ್ಕೆ ಸಂಬಂಧಿಸಿದ ಒಟ್ಟು 11 ಚಟುವಟಿಕೆಗಳನ್ನು ಪರಿಚಯಿಸಿದ್ದು, ಇದರಲ್ಲಿ 7 ಚಟುವಟಿಕೆಗಳನ್ನು ಕಡ್ಡಾಯವಾಗಿ ನಡೆಸಲಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಪೋಷಕರು ಮತ್ತು ಮಕ್ಕಳ ಸಹ ಸಂಬಂಧ, ಕಥೆ ಹೇಳುವುದು, ಸಂತೋಷದಾಯಕ ಗಣಿತ, ಆರೋಗ್ಯ ಮತ್ತು ಪೌಷ್ಟಿಕಾಂಶ ಸೇರಿದಂತೆ ಹಲವು ಚಟುವಟಿಕೆಗಳನ್ನು ಆಯೋಜಿಸಲಾಗಿತ್ತು. ಎಸ್.ಡಿ.ಎಂ.ಸಿ. ಸಮಿತಿ, ಪೋಷಕರು, ಶಿಕ್ಷಕರು, ಶಿಕ್ಷಣ ಇಲಾಖೆ ಕೈ ಜೋಡಿಸಿದ್ದರಿಂದ ಕಾರ್ಯಕ್ರಮ ಯಶಸ್ವಿಯಾಗಿದೆ ಎಂದು ತಿಳಿಸಿದರು.

ದೇವಿಕೆರೆ ಗ್ರಾಪಂ ಮಾಜಿ ಅಧ್ಯಕ್ಷ ಗುರುಸ್ವಾಮಿ, ಗ್ರಾಮದ ಹಿರಿಯ ಮುಖಂಡರಾದ ಶಿವಕುಮಾರ್ ಸ್ವಾಮಿ, ಗುರುಸಿದ್ದಪ್ಪ ಇತರರು ಮಾತನಾಡಿದರು. ಇದೇ ವೇಳೆ ಆಕರ್ಷಕ ಕಲಿಕಾ ಹಬ್ಬ ಸೆಲ್ಫಿ ಕಾರ್ನರ್ ಎಲ್ಲರ ಗಮನ ಸೆಳೆದಿಯಿತು. ಅಧಿಕಾರಿಗಳು, ಪೋಷಕರು, ಶಿಕ್ಷಕರು ವಿದ್ಯಾರ್ಥಿಗಳು ಸೆಲ್ಫಿ ಕಾರ್ನರ್ ನಲ್ಲಿ ಫೋಟೋ ತೆಗೆಸಿಕೊಂಡರು.

ಸ್ಪರ್ಧೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಿಗೆ 7 ಚಟುವಟಿಕೆಗಳಿಗೆ ತಲಾ 3 ಪ್ರಥಮ, ದ್ವಿತೀಯ, ತೃತೀಯ ಹಾಗೂ ಸಮಾಧಾನಕರ ಬಹುಮಾನಗಳನ್ನು ವಿತರಿಸಲಾಯಿತು. ಎಸ್.ಡಿ.ಎಂ.ಸಿ. ಅಧ್ಯಕ್ಷ ಗುರುಸಿದ್ದಪ್ಪ, ದೇವಿಕೆರೆ ಗ್ರಾಪಂ ಓಬಪ್ಪ, ಶ್ರೀನಿವಾಸ್, ಸಂಪತ್, ಬಿ.ಆರ್.ಪಿ.ಕೆ.ಎಸ್. ರವಿಕುಮಾರ್, ಸಿ.ಆರ್.ಪಿ. ತಿಮ್ಮೇಶ್, ರಮೇಶ್, ಗಂಗಾಧರ, ಮಾಜಿ ಸಿಆರ್.ಪಿ ಅಂಜಿನಪ್ಪ, ಪ್ರಾಥಮಿಕ ಶಾಲೆ ಶಿಕ್ಷಕರ ಸಂಘದ ಪದಾಧಿಕಾರಿ ಶಕುಂತಲಮ್ಮ, ದೇವಿಕೆರೆ ಸರ್ಕಾರಿ ಹಿ.ಪ್ರಾ. ಶಾಲಾ ಮುಖ್ಯ ಶಿಕ್ಷಕರಾದ ಮಂಜುಳ, ಸಹ ಶಿಕ್ಷಕರಾದ ಎಸ್.ಬಸಮ್ಮ, ಮಂಜುಳ, ಮಹಾಂತೇಶ್, ನಿವೃತ್ತ ಶಿಕ್ಷಕ ಗೌಸ್‌, ಗ್ರಾಮದ ಮುಖಂಡರಾದ ಮಲ್ಲಿಕಾರ್ಜುನಪ್ಪ, ಸುರೇಶ್, ಸ್ವಾಮಿ, ವೀರೇಶ್‌, ‌ ಎಸ್.ಡಿ.ಎಂ.ಸಿ. ಸದಸ್ಯರು ಇತರರು ಇದ್ದರು.

- - -

-20 ಜೆ.ಜಿ.ಎಲ್.2: ಜಗಳೂರು ತಾಲೂಕಿನ ದೇವಿಕೆರೆ ಸರ್ಕಾರಿ ಶಾಲೆ ಆವರಣದಲ್ಲಿ ಮಂಗಳವಾರ ದೇವಿಕೆರೆ ಕ್ಲಷ್ಟರ್ ವ್ಯಾಪ್ತಿ ಎಫ್ ಎಲ್ ಎನ್ ಕಲಿಕಾ ಹಬ್ಬ ಕಾರ್ಯಕ್ರಮವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಹಾಲಮೂರ್ತಿ ಉದ್ಘಾಟಿಸಿದರು. -20ಜೆ.ಜಿ.ಎಲ್.3: ಜಗಳೂರು ತಾಲೂಕಿನ ದೇವಿಕೆರೆ ಸರ್ಕಾರಿ ಶಾಲೆ ಆವರಣದಲ್ಲಿ ಮಂಗಳವಾರ ನಡೆದ ಕಲಿಕಾ ಹಬ್ಬದ ಸೆಲ್ಫಿ ಕಾರ್ನರ್ ಎಲ್ಲರ ಗಮನ ಸೆಳೆಯಿತು.