ಶಿಕ್ಷಕರು ಮಕ್ಕಳ ಸ್ನೇಹಿಯಾಗಿ ಬೋಧಿಸಿದರೆ ಕಲಿಕೆ ಪರಿಣಾಮಕಾರಿ: ಎಸ್ ಬಸವರಾಜ್

| Published : Oct 18 2024, 12:10 AM IST

ಶಿಕ್ಷಕರು ಮಕ್ಕಳ ಸ್ನೇಹಿಯಾಗಿ ಬೋಧಿಸಿದರೆ ಕಲಿಕೆ ಪರಿಣಾಮಕಾರಿ: ಎಸ್ ಬಸವರಾಜ್
Share this Article
  • FB
  • TW
  • Linkdin
  • Email

ಸಾರಾಂಶ

Learning is effective if teachers teach in a child-friendly manner: S Basavaraj

-ಜ್ಞಾನಭಾರತಿ ಶಿಕ್ಷಣ ಮಹಾವಿದ್ಯಾಲಯದ ಪ್ರಶಿಕ್ಷಣಾರ್ಥಿಗಳಿಗೆ ಶೈಕ್ಷಣಿಕ ಚಟುವಟಿಕೆ ಕಾರ್ಯಾಗಾರ

------

ಕನ್ನಡಪ್ರಭ ವಾರ್ತೆ ಹಿರಿಯೂರು ಶಿಕ್ಷಕರು ಕ್ರಿಯಾಶೀಲತೆಯಿಂದ ಮಕ್ಕಳ ಸ್ನೇಹಿಯಾಗಿ ಬೋಧಿಸಿದರೆ ಕಲಿಕೆ ಪರಿಣಾಮಕಾರಿಯಾಗುತ್ತದೆ ಎಂದು ಡಯಟ್ ಉಪನ್ಯಾಸಕ ಎಸ್.ಬಸವರಾಜು ಹೇಳಿದರು. ಶಿಕ್ಷಕರ ವೃತ್ತಿಪರ ಸಾಮರ್ಥ್ಯ ಅಭಿವೃದ್ಧಿಯಲ್ಲಿ ಡಯಟ್‍ನ ಪಾತ್ರ ವಿಷಯದ ಕುರಿತು ನಗರದ ಜ್ಞಾನಭಾರತಿ ಶಿಕ್ಷಣ ಮಹಾವಿದ್ಯಾಲಯದ ಪ್ರಶಿಕ್ಷಣಾರ್ಥಿಗಳಿಗೆ ಡಯಟ್‍ನಲ್ಲಿ ಆಯೋಜಿಸಿದ್ದ ಶೈಕ್ಷಣಿಕ ಚಟುವಟಿಕೆ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಶಿಕ್ಷಕರಿಗೆ ಸಹಾನೂಭೂತಿ, ಸಂವೇದನಾಶೀಲತೆ ಗುಣ ಅಗತ್ಯವಾಗಿದ್ದು ಮಕ್ಕಳ ಕಲಿಕೆಯಲ್ಲಿನ ಸವಾಲುಗಳನ್ನು ಗುರುತಿಸಿ ಅವರ ಮನಸ್ಥಿತಿ, ಬುದ್ದಿಮಟ್ಟ ಅರ್ಥೈಸಿಕೊಂಡು ಪೂರಕ ಚಟುವಟಿಕೆಗಳನ್ನು ಬಳಸಿ ಬೋಧಿಸುವುದರಿಂದ ಕಲಿಕೆ ಪ್ರಗತಿಯಾಗುತ್ತದೆ. ಮಕ್ಕಳಲ್ಲಿ ವೈಜ್ಞಾನಿಕ ಮತ್ತು ಸ್ಪರ್ಧಾತ್ಮಕ ಮನೋಭಾವನೆ ಬೆಳೆಸುವುದರ ಜತೆಗೆ ಜೀವನ ಮೌಲ್ಯಗಳನ್ನು ಬೆಳೆಸಬೇಕು ಎಂದರು.

ಉಪನ್ಯಾಸಕಿ ಸಿಎಸ್.ಲೀಲಾವತಿ ಮಾತನಾಡಿ, ಶಿಕ್ಷಕರ ವೃತ್ತಿಪರ ಅಭಿವೃದ್ಧಿಗೆ ಭಾಷೆ, ವಿಷಯಾಧಾರಿತ, ತಂತ್ರಜ್ಞಾನ ಆಧಾರಿತ ತರಬೇತಿಯನ್ನು ನೀಡಲಾಗುತ್ತದೆ. ವ್ಯಕ್ತಿತ್ವ ವಿಕಸನ, ವೈಜ್ಞಾನಿಕ ಮನೋಭಾವನೆ ಬೆಳೆಸಲು ವಿಜ್ಞಾನ ವಿಚಾರ ಗೋಷ್ಠಿ, ನಾಟಕ, ಜಾನಪದ ನೃತ್ಯ, ಪ್ರಬಂಧ ಸ್ಪರ್ಧೆಗಳನ್ನು ನಡೆಸಲಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಡಯಟ್ ಪ್ರಾಚಾರ್ಯ ಎಂ.ನಾಸಿರುದ್ದೀನ್, ಉಪನ್ಯಾಸಕ ಆರ್.ನಾಗರಾಜು, ಜ್ಞಾನಭಾರತಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಧನಂಜಯ, ಉಪನ್ಯಾಸಕರಾದ ಬಸವರಾಜು, ಅರುಣಕುಮಾರಿ ಮತ್ತು ಪ್ರಶಿಕ್ಷಣಾರ್ಥಿಗಳು ಹಾಜರಿದ್ದರು.

----

ಫೋಟೋ: ಚಿತ್ರದುರ್ಗ ಡಯಟ್‍ನಲ್ಲಿ ಶಿಕ್ಷಕರ ವೃತ್ತಿಪರ ಸಾಮರ್ಥ್ಯ ಅಭಿವೃದ್ಧಿಯಲ್ಲಿ ಡಯಟ್‍ನ ಪಾತ್ರ ವಿಷಯದ ಕುರಿತು ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಹಿರಿಯೂರು ಜ್ಞಾನಭಾರತಿ ಶಿಕ್ಷಣ ಮಹಾವಿದ್ಯಾಲಯದ ಪ್ರಶಿಕ್ಷಣಾರ್ಥಿಗಳು ಭಾಗವಹಿಸಿದ್ದರು.