ಮಾತಾಡುವುದನ್ನು ಕಲಿತರೆ ಜಗತ್ತು ಗೆದ್ದಂತೆ: ಚಿನ್ನಸ್ವಾಮಿ ಸೋಸಲೆ

| Published : Oct 02 2024, 01:13 AM IST

ಮಾತಾಡುವುದನ್ನು ಕಲಿತರೆ ಜಗತ್ತು ಗೆದ್ದಂತೆ: ಚಿನ್ನಸ್ವಾಮಿ ಸೋಸಲೆ
Share this Article
  • FB
  • TW
  • Linkdin
  • Email

ಸಾರಾಂಶ

ಹಾಡುವ ಮತ್ತು ಕಾಡುವ ಕವಿ ಅನುಭವಗಳ ನೆಲೆಯಿಂದ ಒಳ್ಳೆಯ ಕವಿತೆ ಕಟ್ಟಬಲ್ಲ.

ಹೊಸಪೇಟೆ: ಜನ ಮಾತನಾಡಿದರೆ ಜಗತ್ತು ಗೆದ್ದಂತೆ. ಮಾತನಾಡುವುದನ್ನು ಜನ ಕಲಿಯಬೇಕು ಎಂದು ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಚಿನ್ನಸ್ವಾಮಿ ಸೋಸಲೆ ಹೇಳಿದರು.ಕವಯತ್ರಿ ನೂರ್ ಜಹಾನ್ ರಚಿಸಿರುವ ಕಾಗದದ ಹೂಗಳು ಮತ್ತು ಜೀವನ ಕಾವ್ಯ ಎಂಬ ಕವನ ಸಂಕಲನಗಳ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬೂಸಾ ಸಾಹಿತ್ಯ, ಬಂಡಾಯ ಸಾಹಿತ್ಯ ಜನ ಸಂಸ್ಕೃತಿ ಬದುಕಿನ ಬರಹಕ್ಕೆ ದಾರಿದೀಪ ಆಯಿತು. ರಾಜ ಪ್ರಭುತ್ವದಿಂದ ಬದಲಾದ ಜನರು ಪ್ರಭುತ್ವದ ಸಾಹಿತ್ಯಕ್ಕೆ ಬರಲು ಕನ್ನಡ ಸಾಹಿತ್ಯ ಮೂಲ ಕಾರಣವಾಗಿದೆ ಎಂದರು.

ಗಜಲ್ ಕವಿ ಅಲ್ಲಾಗಿರಿ ರಾಜ್ ಕನಕಗಿರಿ ಮಾತನಾಡಿ, ಹಾಡುವ ಮತ್ತು ಕಾಡುವ ಕವಿ ಅನುಭವಗಳ ನೆಲೆಯಿಂದ ಒಳ್ಳೆಯ ಕವಿತೆ ಕಟ್ಟಬಲ್ಲ. ಕವಿ ಜಗತ್ತನ್ನು ಪ್ರೀತಿಸಬಲ್ಲ. ಕವಿ ಯಾವಾಗಲೂ ಕಷ್ಟ ಮತ್ತು ಬಡತನದಲ್ಲಿ ಬೆಂದಾಗ ಕವಿತೆಗಳನ್ನು ರಚಿಸಬಲ್ಲ ಎಂದರು.

ನೂರ್ ಜಹಾನ್ ಅವರ "ಕಾಗದದ ಹೂಗಳು " ಸಂಕಲನದ ಬಗ್ಗೆ ಕವಿ ಅಲ್ಲಾವುದ್ದೀನ್ ಯಮ್ಮಿ, ನೂರ್ ಜಹಾನ್ ಅವರ ಕೆಲವು ಕವನಗಳನ್ನು ಪರಿಚಯಿಸುವ ಮೂಲಕ ಕೃತಿ ಪರಿಚಯ ಮಾಡಿಕೊಟ್ಟರು. ನೂರ್ ಜಹಾನ್ ಅವರ ಇನ್ನೊಂದು ಕವನ ಸಂಕಲನ ''''''''ಜೀವನ ಕಾವ್ಯ " ಪುಸ್ತಕದ ಬಗ್ಗೆ ಸಾಹಿತಿ ಅರುಣಾ ನರೇಂದ್ರ ಪರಿಚಯ ಮಾಡಿದರು.

ಹಿರಿಯ ರಂಗಕರ್ಮಿ ಮ.ಬ. ಸೋಮಣ್ಣ ನಾಡೋಜ ನಾಗರತ್ನಮ್ಮ ಇದ್ದರು. ಬಳಿಕ ನಡೆದ ಕವಿಗೋಷ್ಠಿಯಲ್ಲಿ ಡಾ. ದಯಾನಂದ ಕಿನ್ನಾಳ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅಂಜಲಿ ಬೆಳಗಲ್, ಭಾರತಿ ಮೂಲಿಮನಿ, ಸೋ.ದಾ. ವಿರೂಪಕ್ಷಗೌಡ, ವೆಂಕಟೇಶ್ ಬಡಿಗೇರ, ಯರಿಸ್ವಾಮಿ ಜಿ., ವಿಶಾಲ್ ಮ್ಯಾಸರ್, ಪಂಪಾ ಮಹೇಶ್, ನೂರ್ ಜಹಾನ್, ಎಂ. ಉಮಾಮಹೇಶ್ವರ ಇತರರು ಕವನ ವಾಚಿಸಿದರು. ವಾಲ್ಯಾ ನಾಯ್ಕ ಪ್ರಾರ್ಥನೆ ಗೀತೆ ಹಾಡಿದರು. ದಸ್ತಗಿರಿ ನಬಿ, ಸಾಹಿತಿ ಎಂ. ಉಮಾಮಹೇಶ್ವರ ನಿರ್ವಹಿಸಿದರು.

ಹೊಸಪೇಟೆಯಲ್ಲಿ ಕವಯತ್ರಿ ನೂರ್ ಜಹಾನ್ ರಚಿಸಿರುವ ಕಾಗದದ ಹೂಗಳು ಮತ್ತು ಜೀವನ ಕಾವ್ಯ ಎಂಬ ಕವನ ಸಂಕಲನಗಳ ಪುಸ್ತಕ ಬಿಡುಗಡೆಗೊಳಿಸಲಾಯಿತು.