ಸಾರಾಂಶ
ಸುರಪುರ ನಗರದ ಮಹಾತ್ಮ ಗಾಂಧಿವೃತ್ತದಲ್ಲಿ ನಾಗರ ಪಂಚಮಿ ಹಬ್ಬದ ನಿಮಿತ್ತ ನಿರ್ಗತಿಕರಿಗೆ ಹಾಲುಣಿಸುವ ಕಾರ್ಯಕ್ರಮ ನಡೆಯಿತು. 
ಕನ್ನಡಪ್ರಭ ವಾರ್ತೆ ಸುರಪುರ
ನಾಗರ ಪಂಚಮಿ ಹಬ್ಬದ ನಿಮಿತ್ತ ನಗರದ ಫಕೀರ ಓಣಿ ಅಂಗನವಾಡಿ ಕೇಂದ್ರ ಮತ್ತು ಮಹಾತ್ಮಾ ಗಾಂಧಿ ವೃತ್ತದಲ್ಲಿ ನಿರ್ಗತಿಕ, ಅಪೌಷ್ಟಿಕ ಮಕ್ಕಳಿಗೆ ಹಾಗೂ ಬಡ ಅನಾಥ ಮಕ್ಕಳಿಗೆ ಹಾಲುಣಿಸುವ ಕಾರ್ಯಕ್ರಮಕ್ಕೆ ಬುದ್ಧ, ಬಸವ, ಅಂಬೇಡ್ಕರ ಜನಜಾಗೃತಿ ಸಮಿತಿ ಸುರಪುರ, ಮಾನವ ಬಂಧುತ್ವ ವೇದಿಕೆ ಕರ್ನಾಟಕ ಸುರಪುರ ಘಟಕದ ವತಿಯಿಂದ ಚಾಲನೆ ನೀಡಲಾಯಿತು.ಈ ವೇಳೆ ವೇದಿಕೆ ಮುಖಂಡ ರಮೇಶ ದೊರೆ ಮಾತನಾಡಿ, ತಂದೆ-ತಾಯಿ ಬಿಟ್ಟು ಬೇರೆ ದೇವರಿಲ್ಲ. ಮೂಢನಂಬಿಕೆ ಬಿಟ್ಟು ಸರಿಯಾದ ಮಾರ್ಗದಲ್ಲಿ ನಡೆದರೆ ನಿಮ್ಮ ಬದುಕು ಸಾರ್ಥವಾಗುತ್ತಿದೆ, ಬುದ್ದ, ಬಸವ, ಅಂಬೇಡ್ಕರವರ, ವಾಲ್ಮೀಕಿಯ ತತ್ವಾದರ್ಶಗಳ ಮೇಲೆ ನಡೆದಂತಾಗುತ್ತಿದೆ ಎಂದರು.
ವೆಂಕಟೇಶ ಬೇಟೆಗಾರ ಮಾತನಾಡಿ, ಮೌಡ್ಯತೆ ಒಂದು ಶಾಪವಿದ್ದಂತೆ. ಜನರು ಮೂಢನಂಬಿಕೆಗೆ ಒಳಗಾಗಿದ್ದಾರೆ. ಇದರಿಂದ ಹೊರಬರಬೇಕು. ಯಾವುದೇ ಕೆಲಸ ಕಾರ್ಯಗಳು ಮಾಡಬೇಕಾದರೆ ನಿಮ್ಮ ಮನದಂತೆ ಕಾರ್ಯಗಳು ನಡೆಯುತ್ತಿವೆ. ಮೂಢ ನಂಬಿಕೆಯಿಂದ ಅಲ್ಲ ಎಂದು ಹೇಳಿದರು.ಈ ಸಂದರ್ಭದಲ್ಲಿ ಸಣ್ಣ ಹಣಮಂತ ಕಟ್ಟಿಮನಿ, ಗೋಪಾಲ ದೊರೆ, ಸಂಜೀವಪ್ಪ ಕಟ್ಟಿಮನಿ, ನಿಂಗಪ್ಪ ಕುರಿ, ಗುರುನಾಥರೆಡ್ಡಿ, ಶರಣು ಪೂಜಾರಿ, ವೆಂಕಟೇಶ ನಾಯಕ, ಅಹ್ಮದ್, ಮಾನಪ್ಪ, ಅಭಿಷೇಕ, ಅಖಿಲೇಶ, ಅಶೋಕ, ಪರಶುರಾಮ ಕಟ್ಟಿಮನಿ, ಭೀಮಾಶಂಕರ ಸೇರಿದಂತೆ ಇತರರಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))