ನಾ ಎಂಬ ಅಹಂ ಬಿಟ್ಟು, ನಮ್ಮದು ಎಂಬ ಭಾವ ಇರಲಿ

| Published : Dec 21 2023, 01:15 AM IST

ಸಾರಾಂಶ

ನಾ ದೊಡ್ಡವ ಎನ್ನುವ ಅಹಂಭಾವ ಬಿಟ್ಟು, ನಾವುಗಳು ನಮ್ಮದು ಎಂಬ ಭಾವನೆ ಪ್ರತಿಯೊಬ್ಬರಲ್ಲಿ ಮೂಡಿದರೆ ಶಿಕ್ಷಣ ಸಂಸ್ಥೆ ಇನ್ನೂ ಹೆಮ್ಮರವಾಗಿ ಬೆಳೆದು ನಿಲ್ಲಲಿದೆ: ಶ್ರೀ ಖಾಸ್ಗತೇಶ್ವರ ಮಠದ ಬಾಲ ಶಿವಯೋಗಿ ಶ್ರೀ ಸಿದ್ದಲಿಂಗ ದೇವರು

ಕನ್ನಡಪ್ರಭ ವಾರ್ತೆ ತಾಳಿಕೋಟೆ

ನಾ ದೊಡ್ಡವ ಎನ್ನುವ ಅಹಂಭಾವ ಬಿಟ್ಟು, ನಾವುಗಳು ನಮ್ಮದು ಎಂಬ ಭಾವನೆ ಪ್ರತಿಯೊಬ್ಬರಲ್ಲಿ ಮೂಡಿದರೆ ಶಿಕ್ಷಣ ಸಂಸ್ಥೆ ಇನ್ನೂ ಹೆಮ್ಮರವಾಗಿ ಬೆಳೆದು ನಿಲ್ಲಲಿದೆ ಎಂದು ಶ್ರೀ ಖಾಸ್ಗತೇಶ್ವರ ಮಠದ ಬಾಲ ಶಿವಯೋಗಿ ಶ್ರೀ ಸಿದ್ದಲಿಂಗ ದೇವರು ನುಡಿದರು.

ಬುಧವಾರ ಪಟ್ಟಣದ ವೀರಶೈವ ವಿಧ್ಯಾ ವರ್ದಕ ಸಂಘದ ೮೫ನೇ ವರ್ಷದ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ದಿವ್ಯ ಸಾನ್ನಿದ್ಯ ವಹಿಸಿ ಮಾತನಾಡಿದ ಅವರು, ಸದ್ಯ ಈ ಭಾಗದಲ್ಲಿ ಶಿಕ್ಷಣ ಸಂಸ್ಥೆಯಲ್ಲಿಯೇ ಅತೀ ಹೆಚ್ಚು ಹೆಮ್ಮರವಾಗಿ ಬೆಳುದು ನಿಂತಿರುವುದು ಶ್ರೀ ಖಾಸ್ಗತೇಶ್ವರ ಶಿಕ್ಷಣ ಸಂಸ್ಥೆ ಎಂಬುವುದು ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ. ಈ ಸಂಸ್ಥೆ ರಾಜ್ಯದಲ್ಲಿಯೇ ಮಾದರಿಯ ಸಂಸ್ಥೆಯಾಗಿ ಬೆಳೆದು ನಿಲ್ಲಬೇಕಾದರೆ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುವ ಎಲ್ಲ ಸಿಬ್ಬಂದಿಗಳು ಮತ್ತು ಆಡಳಿತ ಮಂಡಳಿಯೂ ಒಗ್ಗೂಡಿಕೊಂಡು ಹೆಜ್ಜೆ ಹಾಕಬೇಕು. ಸಂಸ್ಥೆ ಅಭಿವೃದ್ದಿ ಪಥದತ್ತ ಕೊಂಡೊಯುವ ಮನೋಭಾವನೆ ಪ್ರತಿಯೊಬ್ಬರಲ್ಲಿ ಬರಬೇಕು. ಅಂದಾಗ ಮಾತ್ರ ಶಿಕ್ಷಣ ಸಂಸ್ಥೆ ಬೆಳೆಯಲು ಸಾಧ್ಯವಾಗಲಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವೀ.ವಿ.ಸಂಘದ ಅಧ್ಯಕ್ಷ ವಿರುಪಾಕ್ಷಯ್ಯ ಹಿರೇಮಠ(ಹಂಪಿಮುತ್ಯಾ) ಅವರು ಮಾತನಾಡಿ, ಕಳೆದ ೧೦ ವರ್ಷಗಳಲ್ಲಿ ಸಂಸ್ಥೆಯಲ್ಲಿ ಸಾಕಷ್ಟು ಬದಲಾವಣೆಗಳನ್ನು ತರುವುದರೊಂದಿಗೆ ವಿಧ್ಯಾರ್ಥಿಗಳಿಗಾಗಿ ಬಿಎಸ್‌ಇ ಮತ್ತು ಬಿಈಡಿ ಕೋರ್ಸ್‌ಗಳನ್ನು ಪ್ರಾರಂಭಿಸಿದ್ದೇವೆ. ಇದರಿಂದ ನೂರಾರು ಮಕ್ಕಳಿಗೆ ಅನುಕೂಲವಾಗಿದೆ. ಮುಂದಿನ ದಿನಗಳಲ್ಲಿ ವೈದ್ಯಕೀಯ ಕೋರ್ಸ್‌ಗಳಿಗೆ ಸಂಬಂಧಿಸಿದ ಕೋರ್ಸ್‌ಗಳನ್ನು ಪ್ರಾರಂಭಿಸಿ ಹೆಚ್ಚಿನ ಸೌಲಭ್ಯ ಒದಗಿಸಲಾಗುವುದು ಎಂದು ಹೇಳಿದರು. ಈ ಸಭೆಯಲ್ಲಿ ದಿ.೩೦-೧೨-೨೦೨೨ರ ವಾರ್ಷಿಕ ಸರ್ವ ಸಾಧಾರಣ ಸಭೆಯ ನಿರ್ಣಗಳನ್ನು ಓದಿ ದೃಢಿಕರಿಸಲಾಯಿತು.ಕಾರ್ಯಕ್ರಮಕ್ಕೂ ಮೊದಲು ಸಂಸ್ಥೆಯ ನಿರ್ದೇಶಕರಾಗಿ ಕಾರ್ಯನಿರ್ವಹಿಸಿ ಇತ್ತೀಚೆಗೆ ನಿಧನರಾದ ಬಿ.ಎಸ್.ಗಬಸಾವಳಗಿ, ಬಸರಡ್ಡಿ ಭಂಟನೂರ ಅವರ ಕುರಿತು ಎರಡು ನಿಮಿಷ ಮೌನ ಆಚರಿಸಲಾಯಿತು. ಈ ಸಮಯದಲ್ಲಿ ವೀ.ವಿ.ಸಂಘದ ಉಪಾಧ್ಯಕ್ಷ ಬಿ.ಎನ್.ಹಿಪ್ಪರಗಿ, ಕಾರ್ಯದರ್ಶಿ ಎಂ.ಎಸ್.ಸರಶೆಟ್ಟಿ, ಸಹ ಕಾರ್ಯದರ್ಶಿ ಕಾಶಿನಾಥ ಮುರಾಳ, ನಿರ್ದೇಶಕ ವೇ.ಮುರುಘೇಶ ವಿರಕ್ತಮಠ, ಮಲ್ಲಿಕಾರ್ಜುನ ಕತ್ತಿ, ಈಶ್ವರಪ್ಪ ಬಿಳೇಭಾವಿ, ಚನಮಲ್ಲು ಕತ್ತಿ, ರಾಚನಗೌಡ ಪಾಟೀಲ, ರಮೇಶ ಸಾಲಂಕಿ, ಗುರಲಿಂಗಪ್ಪ ಕಶೆಟ್ಟಿ, ಗುರಲಿಂಗಪ್ಪಗೌಡ ಪಾಟೀಲ, ಕಾಶಿನಾಥ ಸಜ್ಜನ, ಬಸವರಾಜ ಗುರಡ್ಡಿ, ಹಣಮಗೌಡ ಗೂಗಲ್ಲ ಹಾಗೂ ಅಂಗ ಸಂಸ್ಥೆಗಳ ಅಧ್ಯಕ್ಷ ಶಂಕರಗೌಡ ಹಿಪ್ಪರಗಿ, ಅಶೋಕ ಜಾಲವಾದಿ, ಆರ್.ಸಿ.ಪಾಟೀಲ ಹಾಗೂ ಸಂಘದ ಸದಸ್ಯಗಳು, ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು. ಶಿಕ್ಷಕ ಅನಿಲ ಇರಾಜ ನಿರೂಪಿಸಿ, ವಂದಿಸಿದರು.--