ಸಾರಾಂಶ
ಬಳ್ಳಾರಿ, ವಿಜಯನಗರ, ತಮಕೂರು ಹಾಗೂ ಚಿತ್ರದುರ್ಗ ಸೇರಿದಂತೆ ರಾಜ್ಯದ ಗಣಿ ಬಾಧಿತ ಪರಿಸರ ಮತ್ತು ಜನ ಬದುಕಿನ ಪುನಶ್ಚೇತನಕ್ಕಾಗಿ ವಿಸ್ತೃತ ಜನಾಂದೋಲನಕ್ಕೆ ಕಾರ್ಯಕರ್ತರಲ್ಲಿ ನಾಯಕತ್ವ ಗುಣ ಬೆಳೆಸುವ ಉದ್ದೇಶದೊಂದಿಗೆ ತೀರ್ಥಹಳ್ಳಿ ತಾಲೂಕಿನ ಕುಪ್ಪಳ್ಳಿ ಕವಿಶೈಲದಲ್ಲಿ ಅ.4 ಮತ್ತು 5 ರಂದು ಉಪನ್ಯಾಸ ಶಿಬಿರ ಆಯೋಜಿಸಲಾಗಿದೆ ಎಂದು ಸಮಾಜ ಪರಿವರ್ತನಾ ಟ್ರಸ್ಟ್ ಸ್ಥಾಪಕ ಅಧ್ಯಕ್ಷ ಎಸ್.ಆರ್.ಹಿರೇಮಠ್ ತಿಳಿಸಿದರು.
ಶಿವಮೊಗ್ಗ: ಬಳ್ಳಾರಿ, ವಿಜಯನಗರ, ತಮಕೂರು ಹಾಗೂ ಚಿತ್ರದುರ್ಗ ಸೇರಿದಂತೆ ರಾಜ್ಯದ ಗಣಿ ಬಾಧಿತ ಪರಿಸರ ಮತ್ತು ಜನ ಬದುಕಿನ ಪುನಶ್ಚೇತನಕ್ಕಾಗಿ ವಿಸ್ತೃತ ಜನಾಂದೋಲನಕ್ಕೆ ಕಾರ್ಯಕರ್ತರಲ್ಲಿ ನಾಯಕತ್ವ ಗುಣ ಬೆಳೆಸುವ ಉದ್ದೇಶದೊಂದಿಗೆ ತೀರ್ಥಹಳ್ಳಿ ತಾಲೂಕಿನ ಕುಪ್ಪಳ್ಳಿ ಕವಿಶೈಲದಲ್ಲಿ ಅ.4 ಮತ್ತು 5 ರಂದು ಉಪನ್ಯಾಸ ಶಿಬಿರ ಆಯೋಜಿಸಲಾಗಿದೆ ಎಂದು ಸಮಾಜ ಪರಿವರ್ತನಾ ಟ್ರಸ್ಟ್ ಸ್ಥಾಪಕ ಅಧ್ಯಕ್ಷ ಎಸ್.ಆರ್.ಹಿರೇಮಠ್ ತಿಳಿಸಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಗಣಿಬಾಧಿತ ಪ್ರದೇಶದ ಜನರ ಸಶಕ್ತೀಕರಣಕ್ಕಾಗಿ ಮತ್ತು ಕೇಂದ್ರ ಸರ್ಕಾರ ಗಣಿಗಾರಿಕೆ ಅವಕಾಶ ನೀಡಬಾರದೆಂದು ಒತ್ತಾಯಿಸಿ ಆ.16 ರಂದು ಬಳ್ಳಾರಿಯಲ್ಲಿ ಜನಾಂದೋಲನಗಳ ಮಹಾಮೈತ್ರಿ ಸಿಟಿಜೆನ್ಸ್ ಫಾರ್ ಡೆಮಾಕ್ರಸಿ ಹಾಗೂ ಕರ್ನಾಟಕದ ಇತ್ಯಾದಿ ಸಂಘಟನೆಗಳಿಂದ ಬೃಹತ್ ಸಮಾವೇಶ ನಡೆಸಲಾಯಿತು. ಈ ಸಮಾವೇಶ ಭಾಗವಾಗಿ ಸತ್ಯಾಗ್ರಹಕ್ಕಾಗಿ ಸಿದ್ಧತೆ, ಜನಾಂದೋಲನ ಸಶಕ್ತೀಕರಣಕ್ಕಾಗಿ ಮತ್ತು ಭವಿಷ್ಯದ ಪೀಳಿಗೆಯ ನಾಯಕತ್ವ ಬೆಳೆಸುವ ಉದ್ದೇಶದೊಂದಿಗೆ ಈ ಶಿಬಿರ ಆಯೋಜಿಸಲಾಗಿದೆ ಎಂದು ವಿವರಿಸಿದರು.ಪ್ರಸಿದ್ಧ ತರಬೇತುದಾರ ದಿಲೀಪ್ ಕಾಮತ್ ಮಾರ್ಗದರ್ಶನದಲ್ಲಿ ಜಿ.ಎನ್.ಸಿಂಹ ಹಾಗೂ ಜ್ಞಾನ ಸಿಂಧು ಅವರು ಶಿಬಿರ ನಡೆಸಿಕೊಡಲಿದ್ದಾರೆ. ಎರಡು ದಿನಗಳ ಕಾಲ ನಡೆಯುವ ಈ ಶಿಬಿರದಲ್ಲಿ ಗಣಿ ಬಾಧಿತ ಪರಿಸರ-ಜನ ಬದುಕಿನ ಪುನಶ್ವೇತನ ಹೋರಾಟ ಸಮಿತಿ, ಜನಾಂದೋಲನಗಳ ಮಹಾ ಮೈತ್ರಿ ಸೇರಿದಂತೆ ಇತರೆ ಸಂಘಟನೆಗಳ ನೂರಾರು ಮಂದಿ ಕಾರ್ಯಕರ್ತರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆಂದು ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಸಂಘಟನೆಗಳ ಪ್ರಮುಖರಾದ ಕೆ.ವಿ.ಭಟ್, ಜಿ.ಎನ್.ಸಿಂಹಾ, ಎಂ.ಡಿ.ವಸಂತ್ ಕುಮಾರ್, ವಾಸುದೇವ್ ಕೋಟ್ಯಾನ್ ಇದ್ದರು.