ನ.3 ರಂದು ಉಪನ್ಯಾಸ ಕಾರ್ಯಕ್ರಮ

| Published : Nov 01 2024, 12:08 AM IST

ಸಾರಾಂಶ

Lecture program on Nov. 3

ಯಾದಗಿರಿ: ಶ್ರೀಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ, ಸ್ವರ್ಣ ಜಯಂತಿ, ವಿಕಾಸ ಅಕಾಡೆಮಿ, ಭಾರತ ವಿಕಾಸ ಸಂಗಮ ಸಂಯುಕ್ತಾಶ್ರಯದಲ್ಲಿ ನ.3ರಂದು ನಗರದ ಲಕ್ಷ್ಮೀ ನಗರದ ಲಕ್ಷ್ಮೀ ಮಂದಿರದಲ್ಲಿ ಸಂಜೆ 5 ಗಂಟೆಗೆ ದೇಶಿ ಆಹಾರ-ಸಂಪೂರ್ಣ ಆರೋಗ್ಯ ವಿಷಯ ಕುರಿತು ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ವಿಕಾಸ ಅಕಾಡೆಮಿಯ ಪ್ರಮುಖರಾದ ಹೆಚ್.ಸಿ ಪಾಟೀಲ್ ರಾಜನಕೋಳೂರ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುವ ಅವರು, 2022ನೇ ಸಾಲಿನ ಪದ್ಮಶ್ರೀ ಪ್ರಶಸ್ತಿ ವಿಜೇತ, ಸಿರಿಧಾನ್ಯ ತಜ್ಞ, ವಿಜ್ಞಾನಿಗಳಾದ ಪದ್ಮಶ್ರೀ ಡಾ. ಖಾದರ್‌ ವಲಿ ಮೈಸೂರು ಉಪನ್ಯಾಸ ನೀಡುವರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬಿಜೆಪಿ ಹಿರಿಯ ಮುಖಂಡೆ ನಾಗರತ್ನ ಕುಪ್ಪಿ, ಜಿಲ್ಲಾ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಚೆನ್ನಪ್ಪಗೌಡ ಮೋಸಂಬಿ, ಮುಖಂಡರಾದ ರಾಚನಗೌಡ ಮುದ್ನಾಳ, ವಿಕಾಸ ಅಕಾಡೆಮಿಯ ವಿಶ್ವಸ್ಥರಾದ ವಿ. ಶಾಂತರಡ್ಡಿ ಉಪಸ್ಥಿತರಿರುವರು.

------

30ವೈಡಿಆರ್‌3 : ಖಾದರ್‌ ವಲಿ ಮೈಸೂರು