ಉಪನ್ಯಾಸಕಿ ಮೇಲೆ ಹಲ್ಲೆ ನಡೆಸಿದ್ದವನ ಬಂಧನ

| Published : Jun 25 2025, 01:18 AM IST

ಸಾರಾಂಶ

ಮುದ್ದೇಬಿಹಾಳ: ಪಟ್ಟಣದ ಸಾಯಿ ನಗರ ಬಡಾವಣೆಯಲ್ಲಿ ಕಳೇದ ಜೂ.21 ರಂದು ನಡೆದ ಉಪನ್ಯಾಸಕಿ ಮೇಲೆ ಹಲ್ಲೆ ನಡೆಸಿ ನಾಪತ್ತೆಯಾಗಿದ್ದ ಹಲ್ಲೆಕೋರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ತೆಲಂಗಾಣದ ನಲಗೊಂಡ ಜಿಲ್ಲೆಯ ಅನುಮುಲ್ಲಾ ಮಂಡಲದ ಹಜಾರಿಗುಡ್ಡದ ನಿವಾಸಿ ಪೇರುಮಾಳ ಸೈದಯ್ಯ ಧನಂಜಯ ಎಂದು ಗುರುತಿಸಲಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಪಿಎಸ್‌ಐ ಸಂಜಯ ತಿಪರೆಡ್ಡಿ, ಈತ ಮನೆ ಬಾಡಿಗೆ ಕೇಳುವ ನೆಪದಲ್ಲಿ ಸಾಯಿ ನಗರ ಬಡಾವಣೆಯ ಉಪನ್ಯಾಸಕಿಯೊಬ್ಬರ ಮನೆಗೆ ಆಗಮಿಸಿ ಕಳ್ಳತನಕ್ಕೆ ಯತ್ನಿಸಿದ್ದ. ಈ ವೇಳೆ ವಿರೋಧ ಮಾಡಿದ್ದ ಉಪನ್ಯಾಸಕಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಪರಾರಿಯಾಗಿ ಎಂದು ತಿಳಿಸಿದ್ದಾರೆ. ಒಬ್ಬಂಟಿಯಾಗಿರುವ ಮಹಿಳೆಯರು ತಮ್ಮ ಮನೆಗಳಿಗೆ ಬಾಡಿಗೆ ಕೊಡಲು ಗುಗುರು ಪರಿಚಿತರನ್ನು ಗುರುತಿಸಿ ಬಾಡಿಗೆ ಕೊಡಬೇಕು. ಅಪರಿಚಿತರ ಬಗ್ಗೆ ನಿಗಾವಹಿಸಬೇಕು, ಸಂಶಯ ಕಂಡುಬಂದರೆ ತಕ್ಷಣವೇ ಪೋಲಿಸರಿಗೆ ದೂರು ನೀಡಿದರೇ ಇಂತಹ ಆರೋಪಿಗಳನ್ನು ಪತ್ತೆ ಹಚ್ಚಲು ಮತ್ತು ಮುಂದಾಗುವ ಅನಾಹುತಗಳನ್ನು ತಪ್ಪಿಸಲು ಸಹಕಾರಿಯಾಗಲಿದೆ ಎಂದು ಹೇಳಿದ್ದಾರೆ.

ಘಟನೆ ನಡೆದ ಬಳಿಕ ಹಲ್ಲೆಗೊಳಗಾಗಿದ್ದ ಉಪನ್ಯಾಸಕಿ ಸುಮಂಗಲಾ ಅಂಗಡಿ ಅವರ ಮನೆಗೆ ಹೆಚ್ಚುವರಿ ಎಸ್ಪಿ ಶಂಕರ ಮಾರಿಹಾಳ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪಿಎಸ್‌ಐ ಸಂಜಯ್ ತಿಪರೆಡ್ಡಿ ಇದ್ದರು.

Related Stories
Top Stories