ಸಾರಾಂಶ
12 ದಿನಗಳ ಮೊದಲು ಲಿವರ್ ಟ್ರಾನ್ಸ್‌ಫರ್ ಶಸ್ತ್ರಚಿಕಿತ್ಸೆ ನೆರವೇರಿಸಲಾಗಿತ್ತು. ಬಳಿಕ ಅರ್ಚನಾ ಕಾಮತ್ ಆರೋಗ್ಯದಿಂದಲೇ ಇದ್ದರು. 3 ದಿನಗಳ ಹಿಂದಷ್ಟೆ ಆಸ್ಪತ್ರೆಯಿಂದ ಮನೆಗೆ ಮರಳಿದ್ದರು.
ಕನ್ನಡಪ್ರಭ ವಾರ್ತೆ ಮಂಗಳೂರು
ಹತ್ತಿರದ ಸಂಬಂಧಿಯೊಬ್ಬರಿಗೆ ಲಿವರ್ ದಾನ ಮಾಡಿದ ಮಂಗಳೂರಿನ ಉಪನ್ಯಾಸಕಿಯೊಬ್ಬರು ಪ್ರಾಣವನ್ನೇ ಕಳೆದುಕೊಂಡ ದುರ್ಘಟನೆ ನಡೆದಿದೆ.ಮಂಗಳೂರಿನ ಲೆಕ್ಕಪರಿಶೋಧಕ ಚೇತನ್ ಕಾಮತ್ ಅವರ ಪತ್ನಿ, ಉಪನ್ಯಾಸಕಿ ಅರ್ಚನಾ ಕಾಮತ್ (33) ಮೃತರು.
ಚೇತನ್ ಕಾಮತ್ ಅವರ ತಂದೆ ಸಿ.ಎ ಸತೀಶ್ ಕಾಮತ್ ಅವರ ಸಹೋದರನ ಪತ್ನಿಗೆ ಲಿವರ್ ಸಮಸ್ಯೆ ಇದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಲಿವರ್ ಕಸಿ ಮಾಡಲು ನಿರ್ಧರಿಸಲಾಗಿತ್ತು. ಆದರೆ ಹಲವಾರು ಡೋನರ್‌ಗಳ ಲಿವರ್ ಮ್ಯಾಚ್ ಆಗದೆ ಚಿಕಿತ್ಸೆ ವಿಳಂಬವಾಗುತ್ತಿತ್ತು. ಕೊನೆಗೆ ಅರ್ಚನಾ ಕಾಮತ್ ಅವರ ಲಿವರ್ ಅರ್ಗನ್ ಮ್ಯಾಚ್ ಆಗಿದ್ದರಿಂದ ಅರ್ಚನಾ ಸಹಿತ ಕುಟುಂಬಸ್ಥರು ಲಿವರ್ ಅಂಗ ದಾನಕ್ಕೆ ನಿರ್ಧಾರ ಕೈಗೊಂಡಿದ್ದರು.12 ದಿನಗಳ ಮೊದಲು ಲಿವರ್ ಟ್ರಾನ್ಸ್‌ಫರ್ ಶಸ್ತ್ರಚಿಕಿತ್ಸೆ ನೆರವೇರಿಸಲಾಗಿತ್ತು. ಬಳಿಕ ಅರ್ಚನಾ ಕಾಮತ್ ಆರೋಗ್ಯದಿಂದಲೇ ಇದ್ದರು. 3 ದಿನಗಳ ಹಿಂದಷ್ಟೆ ಆಸ್ಪತ್ರೆಯಿಂದ ಮನೆಗೆ ಮರಳಿದ್ದರು. ಈ ಮಧ್ಯೆ ಅರ್ಚನಾ ಕಾಮತ್ ಆರೋಗ್ಯದಲ್ಲಿ ಏರಿಳಿತವಾಗಿದ್ದರಿಂದ ಮತ್ತೆ ಬೆಂಗಳೂರಿನ ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು. ಆದರೆ ಬಹುಅಂಗಾಗ ವೈಫಲ್ಯಗೊಂಡು ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
ಮೃತ ಶರೀರವನ್ನು ಕರಂಗಲ್ಪಾಡಿಯಯ ನಿವಾಸಕ್ಕೆ ತಂದು ಬಳಿಕ ಕುಂದಾಪುರದ ಕೋಟೇಶ್ವರದಲ್ಲಿ ಕುಟಂಬಸ್ಥರ ಸಮ್ಮುಖದಲ್ಲಿ ಅಂತಿಮ ಕಾರ್ಯ ನೆರವೇರಿಸಲಾಗಿದೆ.