ಸಾಲ ಪಡೆದವರಿಗೆ ಕಿರುಕುಳ ನೀಡಿದರೆ ಕಾನೂನು ಕ್ರಮ

| Published : Feb 05 2025, 12:32 AM IST

ಸಾಲ ಪಡೆದವರಿಗೆ ಕಿರುಕುಳ ನೀಡಿದರೆ ಕಾನೂನು ಕ್ರಮ
Share this Article
  • FB
  • TW
  • Linkdin
  • Email

ಸಾರಾಂಶ

ಮೈಕ್ರೋ ಫೈನಾನ್ಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ಸಾಲ ಪಡೆದ ಸಾಲಗಾರರಿಂದ ಸಾಲ ವಸೂಲಾತಿ ಮಾಡುವಾಗ ಅವರಿಗೆ ಯಾವುದೇ ಕಾರಣಕ್ಕೂ ಕಿರುಕುಳ ನೀಡಿ ಹಣ ವಸೂಲಿ ಮಾಡುವ ಪ್ರವೃತ್ತಿ ಬೆಳೆಸಿಕೊಳ್ಳಬಾರದು. ಈ ರೀತಿ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಟಿ. ಬಿ. ಜಯಚಂದ್ರ ಹೇಳಿದರು.

ಕನ್ನಡಪ್ರಭ ವಾರ್ತೆ ಶಿರಾ ಮೈಕ್ರೋ ಫೈನಾನ್ಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ಸಾಲ ಪಡೆದ ಸಾಲಗಾರರಿಂದ ಸಾಲ ವಸೂಲಾತಿ ಮಾಡುವಾಗ ಅವರಿಗೆ ಯಾವುದೇ ಕಾರಣಕ್ಕೂ ಕಿರುಕುಳ ನೀಡಿ ಹಣ ವಸೂಲಿ ಮಾಡುವ ಪ್ರವೃತ್ತಿ ಬೆಳೆಸಿಕೊಳ್ಳಬಾರದು. ಈ ರೀತಿ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಟಿ. ಬಿ. ಜಯಚಂದ್ರ ಹೇಳಿದರು. ನಗರದ ತಾಲೂಕು ಕಚೇರಿಯ ಸಭಾಂಗಣದಲ್ಲಿ ಮೈಕ್ರೋ ಫೈನಾನ್ಸ್ ಅಧಿಕಾರಿಗಳ ಮತ್ತು ತಾಲೂಕು ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ಈಗಾಗಲೇ ಸರ್ಕಾರ ಮೈಕ್ರೋ ಫೈನಾನ್ಸ್‌ಗಳ ಬಗ್ಗೆ ಗಂಭೀರ ಚಿಂತನೆ ನಡೆಸಿದ್ದು, ಇದನ್ನು ತಡೆಗಟ್ಟುವ ಬಗ್ಗೆ ಸುಗ್ರೀವಾಜ್ಞೆ ನಿಯಮವನ್ನು ಕಾನೂನು ಅಡಿ ಜಾರಿ ತರಲು ಕರಡು ಸಿದ್ಧಪಡಿಸಿದೆ ಎಂದು ತಿಳಿಸಿದರು. ಮೈಕ್ರೋ ಫೈನಾನ್ಸ್ ಅಧಿಕಾರಿಗಳು ಮಾತನಾಡಿ, ಸರ್ಕಾರದ ಈ ನೀತಿಯಿಂದ ಜನರು ಹಣವನ್ನು ಕಟ್ಟದೆ ನಮ್ಮ ಮೇಲೆ ಜಗಳಕ್ಕೆ ಬರುತ್ತಿದ್ದಾರೆ ಎಂದರು.

ಪ್ರತಿಕ್ರಿಯಿಸಿದ ಶಾಸಕ, ಹಣ ನೀಡುವ ಮೈಕ್ರೋ ಫೈನಾನ್ಸ್ ಸಾಲ ವಸೂಲಾತಿದಾರರಿಂದ ಸಾಲ ಪಡೆದವರಿಗೂ ತೊಂದರೆ ಆಗಬಾರದು. ಅದೇ ರೀತಿ ಅವರಿಂದಲೂ ನಿಮಗೆ ಏನಾದರೂ ತೊಂದರೆಯಾದರೆ ನಮ್ಮ ಗಮನಕ್ಕೆ ತನ್ನಿ ನಾವು ಬಗೆಹರಿಸುತ್ತೇವೆಂದು ಹೇಳಿದರು.

ತಹಸೀಲ್ದಾರ್ ಸಚ್ಚಿದಾನಂದ ಕುಚನೂರು ಮಾತನಾಡಿ, ಮೈಕ್ರೋ ಫೈನಾನ್ಸ್ ಸಾಲ ವಸೂಲಾತಿ ಅಧಿಕಾರಿಗಳ ಭಾಷೆ ಪ್ರಯೋಗದ ಬಗ್ಗೆ ಹಿಡಿತವಿರಬೇಕು. ಬೆಳಿಗ್ಗೆ 9 ರಿಂದ ಸಂಜೆ 6 ಗಂಟೆ ಒಳಗೆ ಮಾತ್ರ ಹಣ ವಸೂಲಿಗೆ ಹೋಗಬೇಕು. ಹಣ ವಸೂಲಿ ಮಾಡುವಾಗ ಗುಂಡಾಗಿರಿ, ದರ್ಪ ತೋರಿಸ ಬಾರದು. ಹೆಂಗಸರು ಹಾಗೂ ಮಕ್ಕಳ ಜೊತೆ ಗೌರವಯುಕ್ತರಾಗಿ ಮಾತನಾಡಬೇಕು. ಸಾಲಗಾರರಿಗೆ ಯಾವುದೇ ರೀತಿಯ ಕಿರುಕಳ ನೀಡಿದರೆ ಶಿಕ್ಷೆಗೆ ಗುರಿಯಾಗುತ್ತೀರಾ ಎಂದು ಎಚ್ಚರಿಸಿದರು.ನಗರಸಭೆ ಅಧ್ಯಕ್ಷ ಜೇಷಾನ್ ಮೊಹಮದ್, ಪೌರಾಯುಕ್ತ ರುದ್ರೇಶ್, ಡಿ ವೈ ಎಸ್ ಪಿ ಶೇಖರ್, ತಾ.ಪಂ. ಇಒ ಹರೀಶ್, ನಟರಾಜ್ ಭಾಗವಹಿಸಿದ್ದರು.