ಸಾರಾಂಶ
ಅನ್ಯಾಯಕ್ಕೆ ಒಳಗಾದವರು, ಹಕ್ಕುಗಳಿಂದ ವಂಚಿತರಾದವರು ಕಾನೂನು ನೆರವಿನ ಮೂಲಕ ಸಹಾಯ ಪಡೆದು ಆರ್ಥಿಕ ಅಭಿವೃದ್ಧಿ ಹೊಂದಿ ಸಾವಲಂಬಿ ಜೀವನ ನಡೆಸಬೇಕು. ನೆರೆಹೊರೆಯವರಲ್ಲಿ ಕಾನೂನಿನ ಅರಿವು ಮೂಡುವಂತೆ ಮಾಡಬೇಕು.
ಕಲಘಟಗಿ:
ವಿಶೇಷಚೇತನರು ಜೀವನವನ್ನು ಉಜ್ವಲವಾಗಿ ರೂಪಿಸಿಕೊಳ್ಳಲು ಕಾಯ್ದೆ, ಕಾನೂನುಗಳ ಅರಿವು ಅತ್ಯಗತ್ಯ ಎಂದು ಪಟ್ಟಣ ಪಂಚಾಯಿತಿ ಸದಸ್ಯ ವೃಷಭೇಂದ್ರ ಪಟ್ಟಣಶೆಟ್ಟಿ ಹೇಳಿದರು.ಪಟ್ಟಣ ಪಂಚಾಯಿತಿ ತಾಲೂಕು ಕಾನೂನು ಸೇವಾ ಸಮಿತಿ, ಹಿರಿಯ ನಾಗರಿಕರ ಸಬಲೀಕರಣ ಆರೋಗ್ಯ ಇಲಾಖೆ ಹಾಗೂ ಮಾತೃಭೂಮಿ ಸಮಾಜ ಸೇವಾ ಸಂಸ್ಥೆ ವತಿಯಿಂದ ಆಯೋಜಿಸಿದ್ದ ದಿವ್ಯಾಂಗರಿಗೆ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರ ಅನೇಕ ಯೋಜನೆ ಜಾರಿಗೊಳಿಸುವ ಮೂಲಕ ವಿಶೇಷಚೇತನರಿಗೆ ಉತ್ತೇಜನ ನೀಡಿದೆ, ಆದರೆ, ದುರಾದೃಷ್ಟ ಅರ್ಹ ಫಲಾನುಭವಿಗಳಿಗೆ ಸರ್ಕಾರದ ಸೌಲಭ್ಯಗಳು ಸಿಗದೇ ವಂಚಿತರಾಗುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.ಅನ್ಯಾಯಕ್ಕೆ ಒಳಗಾದವರು, ಹಕ್ಕುಗಳಿಂದ ವಂಚಿತರಾದವರು ಕಾನೂನು ನೆರವಿನ ಮೂಲಕ ಸಹಾಯ ಪಡೆದು ಆರ್ಥಿಕ ಅಭಿವೃದ್ಧಿ ಹೊಂದಿ ಸಾವಲಂಬಿ ಜೀವನ ನಡೆಸಬೇಕು. ನೆರೆಹೊರೆಯವರಲ್ಲಿ ಕಾನೂನಿನ ಅರಿವು ಮೂಡುವಂತೆ ಮಾಡಬೇಕು. ಆಗ ಇಂತಹ ಕಾರ್ಯಕ್ರಮಗಳು ಸಾರ್ಥಕವಾಗಲಿವೆ ಎಂದರು.ಗಂಗಾಧರ ಗೌಳಿ ಮಾತನಾಡಿ ಪಟ್ಟಣ ಪಂಚಾಯಿತಿ ವತಿಯಿಂದ ಪ್ರತಿ ವರ್ಷ ಶೇ. 5ರಷ್ಟು ಅನುದಾನ ವಿಶೇಷಚೇತನರಗೆ ಮೀಸಲು ಇದೆ. ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಕರೆ ನೀಡಿದರು.
ಆರೋಢ ಸಂಸ್ಥೆ ಅಧ್ಯಕ್ಷ ನಾಗರಾಜ ಹೂಗಾರ ವಿಶೇಷಚೇತನರಿಗೆ ಸಿಗಬೇಕಾದ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿ ಸಂವಾದ ನಡೆಸಿದರು.ಈ ವೇಳೆ ಪಪಂ ಅಧ್ಯಕ್ಷೆ ಶಿಲ್ಪಾ ಪಾಲಕರ, ಪಟ್ಟಣ ಪಂಚಾಯಿತಿ ಸಮುದಾಯ ಸಂಘಟಕ ಶರಣಪ್ಪ ಉಣಕಲ್, ಕಲಾವತಿ ಹೊಸೂರು, ಯಲ್ಲವ್ವ ಸಿಗ್ಲಿ, ಶೋಭಾ ಸಾಲಿಮಠ, ರವಿ ಹುಬ್ಬಳ್ಳಿ ಉಪಸ್ಥಿತರಿದ್ದರು.