ಭ್ರಷ್ಟಚಾರ ನಿಗ್ರಹಕ್ಕೆ ಕಾನೂನು ಅರಿವು ಅಗತ್ಯ

| Published : May 22 2024, 01:02 AM IST

ಸಾರಾಂಶ

ಸಮಾಜದಲ್ಲಿ ಬೇರು ಬಿಟ್ಟಿರುವ ಶೋಷಣೆ ಹಾಗೂ ಭ್ರಷ್ಟತೆಯನ್ನು ಹೋಗಲಾಡಿಸಲು ಕಾನೂನು ಪ್ರಬಲ ಅಸ್ತ್ರವಾಗಿರುವುದರಿಂದ ಪ್ರತಿಯೊಬ್ಬರು ಕಾನೂನನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಚಿಂತಾಮಣಿ

ಸಾರ್ವಜನಿಕರಿಗೆ ಕಾನೂನಿನ ಅರಿವು ಇದ್ದಲ್ಲಿ ಶೋಷಣೆ ಹಾಗೂ ಭ್ರಷ್ಟಾಚಾರಕ್ಕೆ ಅವಕಾಶ ಇರುವುದಿಲ್ಲ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‌ಸಿ ಹಾಗೂ ತಾಲ್ಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷ ಪ್ರಕಾಶ್.ಪಿ.ಎಂ ಅಭಿಪ್ರಾಯಪಟ್ಟರು.

ನಗರದ ತಾಲೂಕು ಕಚೇರಿ ಆವರಣದಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ತಾಲ್ಲೂಕು ಆಡಳಿತದ ಸಂಯುಕ್ತ ಆಶ್ರಯದಲ್ಲಿ ಕರ್ನಾಟಕ ಲೋಕಾಯುಕ್ತ ಕಾಯ್ದೆ ಹಾಗೂ ಭ್ರಷ್ಟಾಚಾರ ನಿಷೇದ ಕಾಯ್ದೆ ಕುರಿತು ಜನಸಾಮಾನ್ಯರಿಗೆ ಕಾನೂನು ಅರಿವು ನೆರವು ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಶೋಷಣೆ ತಡೆಗೆ ಕಾನೂನು ಅಸ್ತ್ರ

ಸಮಾಜದಲ್ಲಿ ಬೇರು ಬಿಟ್ಟಿರುವ ಶೋಷಣೆ ಹಾಗೂ ಭ್ರಷ್ಟತೆಯನ್ನು ಹೋಗಲಾಡಿಸಲು ಕಾನೂನು ಪ್ರಬಲ ಅಸ್ತ್ರವಾಗಿರುವುದರಿಂದ ಪ್ರತಿಯೊಬ್ಬರು ಕಾನೂನನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ಇದರಿಂದ ಶೋಷಣೆ ಮುಕ್ತ ಸಮಾಜ ನಿರ್ಮಾಣ ಸಾಧ್ಯವೆಂದು ಅಭಿಪ್ರಾಯಪಟ್ಟರು.

ಲೋಕಾಯುಕ್ತ ಸಂಸ್ಥೆಯು ನಾಗರಿಕರಿಗೆ ತಮ್ಮ ರಾಷ್ಟ್ರವನ್ನು ಮೊದಲು ರಕ್ಷಿಸಲು ಆಸ್ತಿಯನ್ನು ಎರಡನೆಯದಾಗಿ ಮತ್ತು ಅಂತಿಮವಾಗಿ ಗೌರವಯುತ ಜೀವನವನ್ನು ನಡೆಸಲು ಸಶಕ್ತಗೊಳಿಸಲು ಬಹುಮುಖಿ ವಿಧಾನದಲ್ಲಿ ಕೆಲಸ ಮಾಡುತ್ತಿದೆ. ತ್ವರಿತ ನ್ಯಾಯದ ನಿರೀಕ್ಷೆಯಲ್ಲಿ ನಾಗರಿಕರು ಲೋಕಾಯುಕ್ತ ಸಂಸ್ಥೆಯನ್ನು ಸಂಪರ್ಕಿಸುತ್ತಾರೆಂದು ವಿವರಿಸಿದರು.

ಭ್ರಷ್ಟಾಚಾರ ಮುಕ್ತ ಕಚೇರಿ

ಗ್ರೇಡ್ ೨ ತಹಸೀಲ್ದಾರ್ ರಾಜೇಂದ್ರ ಪ್ರಸಾದ್ ಮಾತನಾಡಿ ಸರ್ಕಾರದಿಂದ ಬರುವ ಸೌಲಭ್ಯಗಳು ಸಾರ್ವಜನಿಕರಿಗೆ ತೊಂದರೆಯಾಗದಂತೆ ಬಳಕೆಯಾಗಬೇಕು ಭ್ರಷ್ಟಚಾರ ಮುಕ್ತ ಕಚೇರಿಗಳಾಗಲು ಎಲ್ಲರ ಸಹಕಾರ ಅಗತ್ಯವಾಗಿದೆಯೆಂದರು.

ಕಾರ್ಯಕ್ರಮದಲ್ಲಿ ಚಿಂತಾಮಣಿ ವಕೀಲರ ಸಂಘದ ಅಧ್ಯಕ್ಷ ಬಿ.ಶ್ರೀನಿವಾಸ್. ಉಪಾಧ್ಯಕ್ಷ ಜಿ.ಶಿವಾನಂದ್, ಹಿರಿಯ ವಕೀಲ ಎಸ್.ರಾಜಾರಾಮ್, ಬಿಇಒ ಉಮಾದೇವಿ, ಕಂದಾಯ ಇಲಾಖೆಯ ಅಧಿಕಾರಿಗಳಾದ ರವೀಶ್, ಗೋಕುಲ್, ಅಬ್ದುಲ್‌ಖಾದರ್ ಮತ್ತಿತರರು ಉಪಸ್ಥಿತರಿದ್ದರು.