ಕನ್ನಡಪ್ರಭ ವಾರ್ತೆ ರಾಮದುರ್ಗ ಸಮಾಜದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ತಡೆಗಟ್ಟಲು ಸರ್ಕಾರ ಜಾರಿಗೆ ತಂದಿರುವ ಕಾನೂನುಗಳ ಕುರಿತ ಜಾಗೃತಿ ಅಗತ್ಯ. ಜತೆಗೆ ಮಹಿಳೆಯರು ಮಾನಸಿಕ ಮತ್ತು ದೈಹಿಕವಾಗಿ ಆರೋಗ್ಯವಾಗಿರುವಂತಹ ವಾತಾವರಣ ನಿರ್ಮಾಣ ಕೂಡ ಅಗತ್ಯ ಎಂದು ಪಿಎಸ್‌ಐ ಸವಿತಾ ಮುನ್ಯಾಳ ಹೇಳಿದರು.

ಕನ್ನಡಪ್ರಭ ವಾರ್ತೆ ರಾಮದುರ್ಗ

ಸಮಾಜದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ತಡೆಗಟ್ಟಲು ಸರ್ಕಾರ ಜಾರಿಗೆ ತಂದಿರುವ ಕಾನೂನುಗಳ ಕುರಿತ ಜಾಗೃತಿ ಅಗತ್ಯ. ಜತೆಗೆ ಮಹಿಳೆಯರು ಮಾನಸಿಕ ಮತ್ತು ದೈಹಿಕವಾಗಿ ಆರೋಗ್ಯವಾಗಿರುವಂತಹ ವಾತಾವರಣ ನಿರ್ಮಾಣ ಕೂಡ ಅಗತ್ಯ ಎಂದು ಪಿಎಸ್‌ಐ ಸವಿತಾ ಮುನ್ಯಾಳ ಹೇಳಿದರು.

ಪಟ್ಟಣದ ಸರ್ಕಾರಿ ಪಪೂ ಮಹಾವಿದ್ಯಾಲಯದಲ್ಲಿ ರಾಮದುರ್ಗದ ರೋಟರಿ ಇನ್ನರವ್ಹೀಲ್ ಕ್ಲಬ್ ಮಂಗಳವಾರ ಆಯೋಜಿಸಿದ್ದ ಮಹಿಳಾ ದೌರ್ಜನ್ಯ ತಡೆಗಟ್ಟಲು ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸರ್ಕಾರ ಮಹಿಳೆಯರ ಸಂರಕ್ಷಣೆಗೆ ಬಾಲ್ಯವಿವಾಹ ನಿಷೇಧ, ಮಹಿಳಾ ದೌರ್ಜನ್ಯ ತಡೆ ಕಾಯ್ದೆ ಮತ್ತು ಪೋಕ್ಸೋ ಕಾನೂನು ಜಾರಿಗೆ ತಂದಿದೆ. ಆದರೂ ಸಮಾಜದಲ್ಲಿ ಬಾಲ್ಯವಿವಾಹ ಮತ್ತು ಮಹಿಳೆಯರಿಗೆ ಕಿರುಕುಳ ನೀಡುವ ಪ್ರಕರಣಗಳು ಹೆಚ್ಚಾಗುತ್ತಿವೆ. ಯಾರಿಗಾದರೂ ಮಾನಸಿಕ ಮತ್ತು ಲೈಂಗಿಕ ಕಿರುಕುಳ ನೀಡುತ್ತಿರುವುದು ಕಂಡು ಬಂದರೆ ಹತ್ತಿರ ಪೊಲೀಸ್ ಠಾಣೆ ಅಥವಾ ಸ್ವಯಂ ಸೇವಾ ಸಂಘಟನೆಗಳ ಮೂಲಕ ದೂರು ನೀಡಲು ಮುಂದಾಗಬೇಕು. ಒಂದು ವೇಳೆ ಕಾನೂನಿನ ದುರುಪಯೋಗ ಮಾಡಿಕೊಂಡಿದ್ದು ಕಂಡುಬಂದರೆ ದೂರುದಾರರ ವಿರುದ್ಧವೂ ಕ್ರಮ ಕೈಗೊಳ್ಳಲು ಅವಕಾಶವಿದೆ ಎಂದರು.

ನ್ಯಾಯವಾದಿ ರೂಪಾ ಜಿ.ಅಮಟೂರ ಮಾತನಾಡಿ, ಮಹಿಳೆಯರ ಸಂರಕ್ಷಣೆ ಮಾಡಿಕೊಳ್ಳಲು ಕಾನೂನುಗಳಿವೆ. ಆದರೂ ಪ್ರಕರಣಗಳ ಹೆಚ್ಚುತ್ತಲಿವೆ. ಪ್ರತಿಯೊಬ್ಬರು ಕಾನೂನು ಸದುಪಯೋಗ ಪಡೆದುಕೊಳ್ಳಬೇಕು. ಮಹಿಳೆಯರಿಗಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಸ್ವಯಂ ಸೇವಾ ಸಂಸ್ಥೆಗಳು ಸಹಿತ ಶ್ರಮಿಸುತ್ತಿದ್ದು ಠಾಣೆಗೆ ಹೋಗದೆ ಈ ಸಂಸ್ಥೆಗಳ ಮುಖಾಂತರ ಪರಿಹಾರ ಕಂಡುಕೊಳ್ಳಬಹುದು ಎಂದು ಸಲಹೆ ನೀಡಿದರು.

ಪ್ರಾಚಾರ್ಯ ಡಿ.ಡಿ.ಮುಜಾವರ ಮಾತನಾಡಿ, ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರ ಸಂರಕ್ಷಣೆ ಉದ್ದೇಶದಿಂದ ಶಾಲಾ ಶಿಕ್ಷಣ ಇಲಾಖೆ ಸಮಿತಿಗಳನ್ನು ಮಾಡಿ.ದೆ ಇದರ ಜೊತೆಗೆ ಸರ್ಕಾರಿ ಪದವಿ ಕಾಲೇಜಿನಲ್ಲಿ ಉಚಿತ ಕರಾಟೆ ತರಬೇತಿ ಕಾರ್ಯಕ್ರಮ ನಡೆಸಲಾಗುತ್ತಿದೆ. ಸರ್ಕಾರದ ಯೋಜನೆಗಳ ಸದ್ವಿನಿಯೋಗವಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ಇನ್ನರ್‌ವ್ಹೀಲ್ ಕ್ಲಬ್‌ ಉಪಾಧ್ಯಕ್ಷೆ ಲೀಲಾವತಿ ಆರಿಬೆಂಚಿ, ಖಜಾಂಚಿ ಹೇಮಲತಾ ಕಲ್ಯಾಣಿ, ಐಎಸ್‌ಒ ಉಮಾ ನೇಮಗೌಡರ, ರಾಜೇಶ್ವರಿ ಆಪ್ಟೆ ಸೇರಿದಂತೆ ಸಂಸ್ಥೆಯ ಪದಾಧಿಕಾರಿಗಳು ಇದ್ದರು. ಇನ್ನರ್‌ವ್ಹೀಲ್ ಕ್ಲಬ್ ಅಧ್ಯಕ್ಷೆ ಸುಲೋಚನಾ ಯಾದವಾಡ ಸ್ವಾಗತಿಸಿದರು. ಕಾರ್ಯದರ್ಶಿ ವಿಶಾಲಾಕ್ಷಿ ಚಿಕ್ಕೋಡಿ ನಿರೂಪಿಸಿದರು. ಸುಷ್ಮಾ ಯಾದವಾಡ ವಂದಿಸಿದರು.-