ಕಾರ್ಕಳ: ಕಾನೂನು ಮಾಹಿತಿ, ‘ಅಪೌಷ್ಟಿಕತೆ ಮುಕ್ತ ಕಾರ್ಕಳ’ ಕಾರ್ಯಕ್ರಮ

| Published : Oct 17 2025, 01:03 AM IST

ಸಾರಾಂಶ

ವಿಶ್ವ ಹೆಣ್ಣುಮಕ್ಕಳ ದಿನಾಚರಣೆ’ ಪ್ರಯುಕ್ತ ಕಾನೂನು ಮಾಹಿತಿ ಮತ್ತು ‘ಅಪೌಷ್ಟಿಕತೆ ಮುಕ್ತ ಕಾರ್ಕಳ’ ಕಾರ್ಯಕ್ರಮ ಕಾರ್ಕಳ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು.

ಕಾರ್ಕಳ: ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ಸಹಭಾಗಿತ್ವದಲ್ಲಿ, ತಾಲೂಕು ಕಾನೂನು ಸೇವೆಗಳ ಸಮಿತಿ ಕಾರ್ಕಳ, ನ್ಯಾಯವಾದಿಗಳ ಸಂಘ ಕಾರ್ಕಳ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಾರ್ಕಳ ಆಶ್ರಯದಲ್ಲಿ ‘ವಿಶ್ವ ಹೆಣ್ಣುಮಕ್ಕಳ ದಿನಾಚರಣೆ’ ಪ್ರಯುಕ್ತ ಕಾನೂನು ಮಾಹಿತಿ ಮತ್ತು ‘ಅಪೌಷ್ಟಿಕತೆ ಮುಕ್ತ ಕಾರ್ಕಳ’ ಕಾರ್ಯಕ್ರಮ ತಾ.ಪಂ. ಸಭಾಂಗಣದಲ್ಲಿ ನಡೆಯಿತು.ಕಾರ್ಯಕ್ರಮವನ್ನು ಕಾರ್ಕಳದ ಹಿರಿಯ ಸಿವಿಲ್ ಮತ್ತು ಎ.ಸಿ.ಜೆ.ಎಂ. ನ್ಯಾಯಾಧೀಶೆ ಹಾಗೂ ಕಾನೂನು ಸೇವೆಗಳ ಸಮಿತಿ ಕಾರ್ಕಳದ ಅಧ್ಯಕ್ಷೆ ಶರ್ಮಿಳಾ ಸಿ.ಎಸ್. ಉದ್ಘಾಟಿಸಿ ಮಾತನಾಡಿ, ಸ್ತ್ರೀಯರು ಪೂಜಿಸಲ್ಪಡುವ ಸ್ಥಳದಲ್ಲಿ ದೇವತೆಗಳೇ ನೆಲೆಸುತ್ತಾರೆ ಎಂದು ಹೇಳಿ, ಸ್ತ್ರೀಯರಿಗೆ ಉಚಿತ ಕಾನೂನು ನೆರವು ಲಭ್ಯವಿರುವುದನ್ನು ವಿವರಿಸಿದರು.ರೋಟರಿ ಮಾರ್ಗದರ್ಶಕ, ಮಾಜಿ ಜಿಲ್ಲಾ ಗವರ್ನರ್ ಡಾ.ಭರತೇಶ್ ಪ್ರಾಸ್ತಾವಿಕ ನುಡಿಗಳಲ್ಲಿ ರೋಟರಿಯ ವಿವಿಧ ಸಾಮಾಜಿಕ ಸೇವೆಗಳನ್ನು ಪರಿಚಯಿಸಿದರು.

ತಾಲೂಕು ವೈದ್ಯಾಧಿಕಾರಿ ಡಾ.ಸಂದೀಪ್ ಕುಡ್ವಾ ಕಾರ್ಕಳದಲ್ಲಿ ಹೆಣ್ಣುಮಕ್ಕಳ ಲಿಂಗಾನುಪಾತ ಶೇಕಡಾವಾರು ಹೆಚ್ಚು ಇರುವುದನ್ನು ಪ್ರಸ್ತಾಪಿಸಿ, ಇದು ಸಮಾಜದ ಸಕಾರಾತ್ಮಕ ಬೆಳವಣಿಗೆಯ ಲಕ್ಷಣ ಎಂದರು.

ಸಂಪನ್ಮೂಲ ವ್ಯಕ್ತಿಯಾಗಿ ನ್ಯಾಯವಾದಿ ಮುಕ್ತಾ ವಿ. ಅವರು ಹೆಣ್ಣುಮಕ್ಕಳ ಹಕ್ಕುಗಳು ಹಾಗೂ ಅವರ ಸಾಮಾಜಿಕ ಸ್ಥಾನಮಾನ ಕುರಿತು ಕಾನೂನು ಅರಿವು ಮೂಡಿಸಿದರು.

ಕಾರ್ಕಳ ವಕೀಲರ ಸಂಘದ ಉಪಾಧ್ಯಕ್ಷ ಹರೀಶ್ ಅಧಿಕಾ ರೋಟರಿಯ ಸಾಮಾಜಿಕ ಬದ್ಧತೆ ಶ್ಲಾಘಿಸಿದರು.ರೋಟರಿ ಜಿಲ್ಲಾ ಚೇರ್ಮನ್ ಹರಿಪ್ರಕಾಶ್ ಶೆಟ್ಟಿ ರವರು ಅಂಗನವಾಡಿ ಕೇಂದ್ರಗಳಿಗೆ ಅಪೌಷ್ಟಿಕ ಮಕ್ಕಳಿಗಾಗಿ ಪೌಷ್ಟಿಕ ಆಹಾರ ಕಿಟ್‌ ವಿತರಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಅಧ್ಯಕ್ಷ ರೋ.ಸುರೇಂದ್ರ ನಾಯಕ್ ವಹಿಸಿದ್ದರು. ಶಿಶು ಅಭಿವೃದ್ದಿ ಯೋಜನಾಧಿಕಾ ಶ್ರೀಲತಾ ಧನ್ಯವಾದ ಸಲ್ಲಿಸಿದರು. ವಸಂತಿ ಪ್ರಾರ್ಥನೆ ಸಲ್ಲಿಸಿದರು. ಸುಬ್ರಹ್ಮಣ್ಯ ಉಪಾಧ್ಯ ನಿರೂಪಣೆ ಮಾಡಿದರು.