ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಚಿಕ್ಕಬಳ್ಳಾಪುರ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ ಶಿಕ್ಷಕನನ್ನು ಕಾನೂನು ರೀತಿಯ ಶಿಕ್ಷೆಗೆ ಒಳಪಡಿಸಲಾಗುತ್ತೆ ಎಂದು ಶಿಕ್ಷಣ ಸಚಿವ ಮಧುಬಂಗಾರಪ್ಪ ಭರವಸೆ ನೀಡಿದ್ದಾರೆ.ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂತಹ ಪ್ರಕರಣ ಕುರಿತಂತೆ ಎಸ್.ಡಿ.ಎಂ.ಸಿ ಹಾಗೂ ಸರ್ಕಾರ ಹೊಂದಾಣಿಕೆ ಮಾಡಿಕೊಂಡು ಎಚ್ಚರ ವಹಿಸುತ್ತೇವೆ. ಇಂತ ಘಟನೆಯನ್ನ ನಾನು ಖಂಡಿಸುವ ಕೆಲಸ ಮಾಡುತ್ತೇನೆ ಎಂದರು. ಪ್ರಕರಣಕ್ಕೆ ಸಂಬಂಧಿಸಿ ಯಾವ ರೀತಿ ಕಾನೂನಿನಲ್ಲಿ ಶಿಕ್ಷೆ ಇದೆಯೇ ಅದೆ ರೀತಿ ಕ್ರಮ ಜಾರಿಯಾಗಬೇಕು ಎಂದರು.
ರಸ್ತೆಯಲ್ಲಿ ನಮಾಜ್:ಮಂಗಳೂರಿನ ಕಂಕನಾಡಿಯಲ್ಲಿ ರಸ್ತೆ ಮಧ್ಯದಲ್ಲಿ ನಮಾಜ್ ನಡೆದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕಾನೂನು ಬಾಹಿರ ಅಂದರೆ ಈ ಕುರಿತು ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತೆ. ಇದು ಕಾನೂನು ಬಾಹಿರ ಅಂತ ಅನಿಸೋದಿಲ್ಲ. ಇದರ ಬಗ್ಗೆ ನಾನು ಹೆಚ್ಚು ಮಾತನಾಡಲು ಹೋಗೊದಿಲ್ಲ. ಅಲ್ಲಿನ ಆಡಳಿತ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದರು.
ರಾಜ್ಯದಲ್ಲಿ ಅಧಿಕಾರ ಬಂದು ಒಂದು ವರ್ಷ ಆದರೂ ಕಾಂಗ್ರೆಸ್ ಅಭಿವೃದ್ಧಿ ಮಾಡಿಲ್ಲ ಎಂಬ ವಿಜಯೇಂದ್ರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, 6 ತಿಂಗಳು ಬಿಜೆಪಿಗೆ ಒಬ್ಬ ಅಧ್ಯಕ್ಷ ಇರಲಿಲ್ಲ. ಅವರಿಗೇನು ಅಧಿಕಾರ ಬರುತ್ತದೆ. ಅಧ್ಯಕ್ಷ ಇಲ್ಲದ ಪಕ್ಷ ಬಂದು ನಮ್ಮನ್ನ ಪ್ರಶ್ನಿಸುತ್ತಾರೆ. ಯಾವುದೇ ದಿಕ್ಕುದೆಸೆ ಇಲ್ಲದೆ ಪ್ರಶ್ನೆ ಕೇಳ್ತಾರೆ. ಅವಶ್ಯಕತೆ ಇರೋ ಪ್ರಶ್ನೆ ಕೇಳಿದರೆ ಉತ್ತರ ಕೊಡಬಹುದು ಎಂದರು.ತಪ್ಪು ಸಾಬೀತಾಗಲಿ:
ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ನಾಗೇಂದ್ರ ರಾಜೀನಾಮೆ ನೀಡಬೇಕೆಂಬ ಬಿಜೆಪಿ ಆಗ್ರಹಕ್ಕೆ ಪ್ರತಿಕ್ರಿಯಿಸಿದ ಅವರು, ನಾಗೇಂದ್ರ ಅವರೇನಾರೂ ತಪ್ಪು ಮಾಡಿದ್ದರೆ ಅಥವಾ ಸರ್ಕಾರದ ಕಡೆಯಿಂದ ತಪ್ಪಾಗಿದ್ರೆ ಶಿಕ್ಷೆ ಕೊಡಿಸುವ ಕೆಲಸ ಆಗುತ್ತದೆ. ಆದರೆ ಸಚಿವ ನಾಗೇಂದ್ರ ಅವರು ಸುಮ್ಮನೆ ರಾಜೀನಾಮೆ ಕೊಡಬೇಕೆನ್ನುವುದು ಸರಿಯಲ್ಲ. ರಾಜೀನಾಮೆ ಕೊಡಬೇಕೆಂದರೆ ಅವರು ತಪ್ಪು ಮಾಡಿದ್ದಾರೆ ಎನ್ನುವುದು ಸಾಬೀತಾಗಬೇಕಲ್ವಾ? ಬಿಜೆಪಿಯವರು ವಿರೋಧ ಪಕ್ಷದವರಂತೆ ನಡೆದುಕೊಳ್ಳಲಿ ಎಂದು ಹೇಳಿದರು.ಅವರು ಇನ್ನೂ ಏನೇನೋ ಹೇಳುತ್ತಾರೆ ಅದಕ್ಕೆಲ್ಲ ಉತ್ತರ ಕೊಡುವುದಕ್ಕೆ ಆಗಲ್ಲ. ಅವರಿಗೆ ಇನ್ನೂ ನಾಲ್ಕು ವರ್ಷ ಇದೇ ರೀತಿ ಮಾತನಾಡಿಕೊಂಡು ಇರಬೇಕು ಅಷ್ಟೇ.
ವಿರೋಧ ಪಕ್ಷದವರಂತೆ ಒಳ್ಳೆಯ ರೀತಿ ವರ್ತಿಸಿದರೆ ಅದು ಒಳ್ಳೆಯದು. ಆದರೆ ದಿಕ್ಕು ದೆಸೆ ಇಲ್ಲದಂತೆ ಮಾತನಾಡುತ್ತಾರೆ ಎಂದರು.ಲೋಕಸಭೆ ಚುನಾವಣೆ ಪ್ರಕ್ರಿಯೆ ಮುಗಿದ ಬಳಿಕ ಇನ್ನೂ ಚನ್ನಾಗಿ ಆಡಳಿತ ನಡೆಯುತ್ತೆ. ನಾವು ಚುನಾವಣಾ ಪ್ರಣಾಳಿಕೆಯಲ್ಲಿ ಸಾಕಷ್ಟು ಹೇಳಿದ್ದೇವೆ. ಅವನ್ನೆಲ್ಲಾ ಮುಂದಿನ ದಿನಗಳಲ್ಲಿ ಜಾರಿ ಮಾಡುತ್ತೇವೆ ಹೇಳಿದರು.
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))