ಚಿಕ್ಕಮಗಳೂರುಕಾನೂನು ಅಂದರೆ ಸಾಮಾಜಿಕ ಬದಲಾವಣೆಯ ಪರಿಣಾಮಕಾರಿ ಸಾಧನ. ಜನ ಸಾಮಾನ್ಯರಿಗೆ ಕಾನೂನು ಸೇವೆ ಸುಲಭ ವಾಗಿ ಸಿಗಬೇಕು. ಈ ಉದ್ದೇಶದಿಂದಲೇ ಅಧಿವಕ್ತಾ ಪರಿಷತ್ ಸ್ಥಾಪನೆಯಾಗಿದೆ ಎಂದು ದ.ಪ್ರಾಂತ ಅಧಿವಕ್ತಾ ಪರಿಷತ್ ಉಪಾಧ್ಯಕ್ಷ ಕೆ.ಆರ್.ಜಗದೀಶ್ ಹೇಳಿದರು.
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಕಾನೂನು ಅಂದರೆ ಸಾಮಾಜಿಕ ಬದಲಾವಣೆಯ ಪರಿಣಾಮಕಾರಿ ಸಾಧನ. ಜನ ಸಾಮಾನ್ಯರಿಗೆ ಕಾನೂನು ಸೇವೆ ಸುಲಭ ವಾಗಿ ಸಿಗಬೇಕು. ಈ ಉದ್ದೇಶದಿಂದಲೇ ಅಧಿವಕ್ತಾ ಪರಿಷತ್ ಸ್ಥಾಪನೆಯಾಗಿದೆ ಎಂದು ದ.ಪ್ರಾಂತ ಅಧಿವಕ್ತಾ ಪರಿಷತ್ ಉಪಾಧ್ಯಕ್ಷ ಕೆ.ಆರ್.ಜಗದೀಶ್ ಹೇಳಿದರು.ನಗರದ ವಿಶ್ವವಿದ್ಯಾಲಯದ ಶಾಲಾ ಸಭಾಂಗಣದಲ್ಲಿ ಅಧಿವಕ್ತಾ ಪರಿಷತ್ ಕರ್ನಾಟಕದ ಜಿಲ್ಲಾ ಘಟಕ ಉದ್ಘಾಟಿಸಿ ಮಾತನಾಡಿ ದೇಶದಲ್ಲಿ ಅನೇಕ ವಕೀಲರ ಸಂಘಟನೆಗಳಿವೆ. ಆದರೆ ರಾಜಕೀಯೇತರ ಹಾಗೂ ನಿಸ್ವಾರ್ಥ ಸೇವಾ ಮನೋ ಭಾವದ ಇನ್ನೊಂದು ಸಂಸ್ಥೆ ಅಧಿವಕ್ತಾ ಸ್ಥಾಪನೆಯಾಗಿದೆ. ಇದರ ಉದ್ದೇಶ ಈಡೇರಿಕೆಗೆ ದೇಶ ಪ್ರೇಮವುಳ್ಳ ಹಾಗೂ ನಿಸ್ವಾರ್ಥ ಮನೋಭಾವದ ವಕೀಲರು ಮುಂದೆ ಬರಬೇಕು ಎಂದರು.
ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಗುರುಪ್ರಸಾದ್ ರಾಘವೇಂದ್ರ ಕುಲಕರ್ಣಿ, ಪರಿಷತ್ ರಾಜ್ಯ ಕಾರ್ಯದರ್ಶಿ ನಟರಾಜ್, ವಕೀಲರ ಸಂಘದ ಅಧ್ಯಕ್ಷ ಡಿ.ಬಿ.ಸುಜೇಂದ್ರ, ಖಜಾಂಚಿ ದೀಪಕ್, ವಕೀಲರಾದ ಸುಧಾಕರ್, ಭರತ್‌ಕುಮಾರ್, ಎಸ್.ಎಸ್.ವೆಂಕಟೇಶ್, ಎಂ.ಆರ್.ಯತಿರಾಜ್, ಪರೀಕ್ಷಿತ್‌ಗೌಡ, ದೀಫಕ್, ಡಿ.ಎಸ್.ಮಮತ, ಜಿ.ಎನ್. ರಾಣಿ ಮೊದಲಾದವರಿದ್ದರು.ನೂತನ ಜಿಲ್ಲಾ ಪದಾಧಿಕಾರಿಗಳು:
ಬಿ.ಆರ್.ಜಗದೀಶ್ (ಜಿಲ್ಲಾಧ್ಯಕ್ಷ), ಕೆ.ಎನ್.ಚಂದ್ರಶೇಖರ್ (ಕಾ ರ್ಯದರ್ಶಿ), ಅರುಂಧತಿ (ಅಧ್ಯಯನ ವೃತ್ತ ಜಿಲ್ಲಾ ಸಂಚಾಲಕಿ), ಮೋಹನ್ (ಚಿಕ್ಕಮಗಳೂರು ತಾ.ಅಧ್ಯ ಕ್ಷ), ಸುನೀಲ್‌ಕುಮಾರ್ (ಕಡೂರು ಅಧ್ಯಕ್ಷ) ಅವಿನಾಶ್ (ತರೀಕೆರೆ), ನಾಗೇಶ್ (ಮೂಡಿಗೆರೆ), ದೇವತ್ ಗೌಡ (ಸಹ ಸಂಚಾಲಕ), ಚರಣ್ (ಶೃಂಗೇರಿ), ಶ್ರೀಕಾಂತ್ (ಅಧ್ಯಕ್ಷ), ಅಕ್ಷಯ ಭಟ್ (ಸಹ ಸಂಚಾಲಕ). ಹೆಚ್.ಹೆಚ್.ಕೃಷ್ಣಮೂರ್ತಿ (ನ.ರಾ.ಪುರ), ರಾಜೀವ್ ಭಟ್ (ಕಳಸ), ಬಸವರಾಜ್ ಸೊಕ್ಕೆ (ಅಜ್ಜಂಪುರ)