ಚಿರತೆ ದಾಳಿ: 8 ಕುರಿ ಸಾವು

| Published : Dec 10 2024, 12:30 AM IST

ಸಾರಾಂಶ

ಸುರ್ಗೆನಳ್ಳಿ ಗ್ರಾಮದ ರೈತ ಕೃಷ್ಣಪ್ಪ ನವರಿಗೆ ಸೇರಿದ ಸುಮಾರು 8 ಕುರಿಗಳು ಚಿರತೆ ದಾಳಿಯಿಂದ ಸಾವುನ್ನಪ್ಪಿದ ಘಟನೆ ನಡೆದಿದೆ.

ಕನ್ನಡಪ್ರಭ ವಾರ್ತೆ ಗುಬ್ಬಿ

ತಾಲೂಕಿನ ಸುರ್ಗೆನಳ್ಳಿ ಗ್ರಾಮದ ರೈತ ಕೃಷ್ಣಪ್ಪ ನವರಿಗೆ ಸೇರಿದ ಸುಮಾರು 8 ಕುರಿಗಳು ಚಿರತೆ ದಾಳಿಯಿಂದ ಸಾವುನ್ನಪ್ಪಿದ ಘಟನೆ ನಡೆದಿದೆ. ಸೋಮವಾರ ಬೆಳಗ್ಗೆ ಕುರಿಗಳ ಮೇಲೆ ಚಿರತೆ ದಾಳಿ ನಡೆಸಿ ಹಲವು ಕುರಿಗಳನ್ನು ಗಾಯಗೊಳಿಸಿದೆ. 2 ಲಕ್ಷ ಮೌಲ್ಯದ ಕುರಿಗಳನ್ನು ಕಳೆದುಕೊಂಡಿರುವ ರೈತ ಸಂಕಷ್ಟಕ್ಕೆ ಈಡಾಗಿದ್ದಾರೆ. ಕೂಡಲೇ ಅಧಿಕಾರಿಗಳು ಪರಿಹಾರವನ್ನು ನೀಡಬೇಕು ಎಂದು ಮನವಿಯನ್ನ ಮಾಡಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಪಶುಸಂಗೋಪನ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಗ್ರಾಮದ ಸುತ್ತಮುತ್ತಲು ಚಿರತೆಗಳು ಓಡಾಡುತ್ತಿರುವುದರಿಂದ ಗ್ರಾಮಸ್ಥರು ಭಯಭೀತರಾಗಿದ್ದಾರೆ. ಅರಣ್ಯ ಇಲಾಖೆಯವರು ಬೋನನ್ನು ಇಟ್ಟು ಶೀಘ್ರವಾಗಿ ಚಿರತೆಯನ್ನು ಸೆರೆ ಹಿಡಿಯಬೇಕು.ಇಲ್ಲವಾದಲ್ಲಿ ಮತ್ತಷ್ಟು ಜಾನುವಾರುಗಳನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.