ಕುರಿ-ಆಡುಗಳ ಮೇಲೆ ಚಿರತೆ ದಾಳಿ

| Published : May 03 2024, 01:06 AM IST

ಸಾರಾಂಶ

ಕಡೂರು ತಾಲೂಕಿನ ಯಗಟಿಯಲ್ಲಿ ಚಿರತೆಗೆ ಏಳು ಕುರಿಗಳು ಮತ್ತು ಎರಡು ಆಡುಗಳು ಬಲಿಯಾಗಿವೆ. ಬುಧವಾರ ತಡ ರಾತ್ರಿ ಚಿರತೆ ಯಗಟಿಯ ಕೆಂಚಪ್ಪ ಮತ್ತು ರಾಜಪ್ಪ ಎಂಬುವವರ ಕೊಟ್ಟಿಗೆಗೆ ನುಗ್ಗಿ ಒಳಗಿದ್ದ ಕುರಿಗಳ ಮೇಲೆ ಧಾಳಿ ನಡೆಸಿದೆ.

ಕಡೂರು: ಕಡೂರು ತಾಲೂಕಿನ ಯಗಟಿಯಲ್ಲಿ ಚಿರತೆಗೆ ಏಳು ಕುರಿಗಳು ಮತ್ತು ಎರಡು ಆಡುಗಳು ಬಲಿಯಾಗಿವೆ. ಬುಧವಾರ ತಡ ರಾತ್ರಿ ಚಿರತೆ ಯಗಟಿಯ ಕೆಂಚಪ್ಪ ಮತ್ತು ರಾಜಪ್ಪ ಎಂಬುವವರ ಕೊಟ್ಟಿಗೆಗೆ ನುಗ್ಗಿ ಒಳಗಿದ್ದ ಕುರಿಗಳ ಮೇಲೆ ಧಾಳಿ ನಡೆಸಿದೆ.

ಗುರುವಾರ ಉಪವಲಯ ಅರಣ್ಯಾಧಿಕಾರಿ ಅಮೃತಾ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಮೃತಪಟ್ಟ ಕುರಿಗಳ ಮರಣೋತ್ತರ ಪರೀಕ್ಷೆ ನಡೆಸಿ ನಷ್ಟದ ಬಗ್ಗೆ ಇಲಾಖೆಗೆ ವರದಿ ಕಳಿಸಲಾಗಿದೆ. ಈಗಾಗಲೇ ಚಿರತೆ ಓಡಾಡುತ್ತಿರುವ ಮಾಹಿತಿ ಮೇರೆಗೆ ಕುಕ್ಕಸಮುದ್ರ ಬಳಿ ಅರಣ್ಯ ಇಲಾಖೆ ಮೂಲಕ ಬೋನು ಇಡಲಾಗಿತ್ತು. ಇಂದು ಯಗಟಿ ಬಳಿಯೂ ಬೋನು ಇಡಲು ವ್ಯವಸ್ಥೆ ಮಾಡಲಾಗಿದೆ ಎಂದು ವಲಯ ಅರಣ್ಯಾಧಿಕಾರಿ ರಜಾಕ್ ನದಾಫ್ ತಿಳಿಸಿದ್ದಾರೆ.

2ಕೆಕೆಡಿಯು3. ಕುರಿ ಮತ್ತು ಆಡುಗಳು ಚಿರತೆ ದಾಳಿಗೆ ಬಲಿಯಾಗಿದ ಸ್ಥಳಕ್ಕೆ ಉಪವಲಯ ಅರಣ್ಯಾಧಿಕಾರಿ ಅಮೃತಾ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು.