- ಬಲಗಾಲಿಗೆ ತೀವ್ರ ಪೆಟ್ಟು

---

ಕನ್ನಡಪ್ರಭ ವಾರ್ತೆ ಹನೂರುಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಹಸುವಿನ ಮೇಲೆ ಚಿರತೆಯೊಂದು ದಾಳಿ ನಡೆಸಿ ಹಸುವಿನ ಬಲಗಾಲನ್ನು ತೀವ್ರವಾಗಿ ಗಾಯಗೊಳಿಸಿರುವ ಆಘಾತಕಾರಿ ಘಟನೆಯು ಮಂಗಳವಾರ ರಾತ್ರಿ ನಡೆದಿದೆ.

ಹನೂರು ತಾಲೂಕಿನ ಸಿರಗೋಡಿನ ರೈತ ಮಹದೇವ ಸ್ವಾಮಿ ಎಂಬುವರಿಗೆ ಸೇರಿದ ಹಸುವಿನ ಮೇಲೆ ಚಿರತೆ ದಾಳಿ ನಡೆಸಿದೆ. ಮಹದೇವ ಸ್ವಾಮಿ ಎಂಬುವರು ಅರಣ್ಯಭಾಗದಲ್ಲಿರು ತೋಟದ ಮನೆಯಲ್ಲಿ ವಾಸವಿದ್ದು, ತಮ್ಮ ಮನೆಯ ಎದುರು ಕೊಟ್ಟಿಗೆಯಲ್ಲಿ ಹಸುವನ್ನು ಕಟ್ಟಿ ಹಾಕಿದ್ದರು. ರಾತ್ರಿ ವೇಳೆ ಚಿರತೆ ದಾಳಿ ನಡೆಸಿದೆ. ಪರಿಣಾಮ ಹಸು ಜೋರಾರಿ ಕೂಗಾಡಿದೆ. ಹಸುವಿನ ಕೂಗಾಟ ಕೇಳಿ ಮಹದೇವ ಸ್ವಾಮಿ ಕೂಡಲೇ ಹೊರಬಂದಿದ್ದಾರೆ. ಈ ವೇಳೆ ಚಿರತೆ ಕಾಲ್ಕಿತ್ತಿದೆ.

ರೈತ ಅಳಲು:


ಚಿರತೆ ದಾಳಿಯಿಂದಾಗಿ ಹಸುವಿನ ಬಲಗಾಲಿನ ಭಾಗಕ್ಕೆ ತೀವ್ರವಾಗಿ ಘಾಸಿಯಾಗಿದ್ದು, ನಡೆಯಲಾಗದ ಸ್ಥಿತಿ ನಿರ್ಮಾಣವಾಗಿದೆ. 15 ದಿನಗಳ ಹಿಂದಷ್ಟೇ 55,000 ರು. ಕೊಟ್ಟು ಹಸು ತಂದಿದ್ದೇನೆ. ಈಗ ಅದರ ಸ್ಥಿತಿ ಈ ರೀತಿಯಾಗಿದೆ ಎಂದು ರೈತ ಅಳಲು ತೋಡಿಕೊಂಡಿದ್ದಾರೆ.

ಪರಿಹಾರ ಆಗದು:

ಘಟನೆ ಸಂಬಂಧ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪರಿಹಾರ ಕೊಡಲಾಗದು ಎಂದು ಹೇಳಿದ್ದಾರೆಂದು ರೈತ ಹೇಳಿದ್ದಾರೆ.