ಬನ್ನೇರುಘಟ್ಟ ಸಫಾರಿ ವಾಹನದಲ್ಲಿದ್ದ ಮಹಿಳೆ ಮೇಲೆ ಚಿರತೆ ದಾಳಿ

| Published : Nov 14 2025, 02:30 AM IST

ಬನ್ನೇರುಘಟ್ಟ ಸಫಾರಿ ವಾಹನದಲ್ಲಿದ್ದ ಮಹಿಳೆ ಮೇಲೆ ಚಿರತೆ ದಾಳಿ
Share this Article
  • FB
  • TW
  • Linkdin
  • Email

ಸಾರಾಂಶ

ಬನ್ನೇರುಘಟ್ಟದ ಜೈವಿಕ ಉದ್ಯಾನವನದ ಚಿರತೆ ಸಫಾರಿಯಲ್ಲಿನ ಚಿರತೆಯೊಂದು ಸಫಾರಿ ಸವಾರಿ ಬಸ್ ನಲ್ಲಿ ಕುಳಿತಿದ್ದ ಮಹಿಳೆಯ ಮೇಲೆ ದಾಳಿ ಮಾಡಿ ತೋಳನ್ನು ಕಚ್ಚಿ ಗಾಯಪಡಿಸಿದ್ದು ಆಕೆ ಹೊದ್ದುಕೊಂಡಿದ್ದ ವೇಲ್ ಅನ್ನು ಕಚ್ಚಿ ಎಳೆದೊಯ್ದ ಘಟನೆ ಗುರುವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ನಡೆದಿದೆ. ವಹಿದಾ ಬಾನು (56) ದಾಳಿಗೋಳಗಾದ ಪ್ರವಾಸಿ ಮಹಿಳೆ

ಕನ್ನಡಪ್ರಭ ವಾರ್ತೆ ಆನೇಕಲ್ಬನ್ನೇರುಘಟ್ಟದ ಜೈವಿಕ ಉದ್ಯಾನವನದ ಚಿರತೆ ಸಫಾರಿಯಲ್ಲಿನ ಚಿರತೆಯೊಂದು ಸಫಾರಿ ಸವಾರಿ ಬಸ್ ನಲ್ಲಿ ಕುಳಿತಿದ್ದ ಮಹಿಳೆಯ ಮೇಲೆ ದಾಳಿ ಮಾಡಿ ತೋಳನ್ನು ಕಚ್ಚಿ ಗಾಯಪಡಿಸಿದ್ದು ಆಕೆ ಹೊದ್ದುಕೊಂಡಿದ್ದ ವೇಲ್ ಅನ್ನು ಕಚ್ಚಿ ಎಳೆದೊಯ್ದ ಘಟನೆ ಗುರುವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ನಡೆದಿದೆ. ವಹಿದಾ ಬಾನು (56) ದಾಳಿಗೋಳಗಾದ ಪ್ರವಾಸಿ ಮಹಿಳೆ. ಸಫಾರಿಯಲ್ಲಿನ ಡಾಮ್ಬರು ರಸ್ತೆಯಲ್ಲಿ ಮಲಗಿದ್ದ ಚಿರತೆಯೊಂದು ಕಿಟಕಿ ಬಳಿ ಬಂದು ಮಾಮೂಲಿನಂತೆ ಎಗರಿ ನಿಂತಿದೆ. ಒಳಗಿದ್ದ ಪ್ರವಾಸಿಗರು ತಮ್ಮ ತಮ್ಮ ಮೊಬೈಲ್ ಮೂಲಕ ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದ್ದಾರೆ. ಈಕೆ ಕುಳಿತಿದ್ದ ಕಿಟಕಿಯ ಗಾಜು ಸ್ವಲ್ಪ ತೆರೆದಿದ್ದು ಚಿರತೆ ದಾಳಿ ಮಾಡಿ ಬಾಯಿ ಹಾಕಿದೆ. ಕೂಡಲೇ ಎಚ್ಚೆತ್ತ ಮಹಿಳೆ ಕೂಗಿಕೊಂಡು ಬದಿಗೆ ಸರಿದಿದ್ದಾರೆ. ಆಕೆಯ ತೋಳನ್ನು ಕಚ್ಚಿ ಎಳೆದ ಚಿರತೆಗೆ ಆಕೆ ಹೊದ್ದಿದ್ದ ವೇಲ್ ಮಾತ್ರ ಸಿಕ್ಕಿದೆ. ಗಾಯಾಳು ವಹಿದಾ ಬಾನು ರವರನ್ನು ಕೂಡಲೇ ಸಮೀಪದ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದೆ. ಆಕೆ ಚೇತರಿಸಿಕೊಂಡಿದ್ದಾರೆ. ಕೆಎಸ್ ಟಿಡಿಸಿ ನಾನ್ ಎಸಿ ಬಸ್ ನ ಕಿಟಕಿ ಸ್ವಲ್ಪ ತೆರೆದಿದ್ದು ಘಟನೆ ಸಂಭವಿಸಿದೆ.