ಸಾರಾಂಶ
ಕನ್ನಡಪ್ರಭ ವಾರ್ತೆ ಹನೂರು
ಹನೂರು ತಾಲೂಕಿನ ಬಸಪ್ಪನ ದೊಡ್ಡಿ ಗ್ರಾಮದ ರೈತ ಮಾದೇವ ತನ್ನ ಜಮೀನಿನಲ್ಲಿ ಕಟ್ಟಿ ಹಾಕಲಾಗಿದ್ದ ಮೇಕೆಯನ್ನು ರಾತ್ರಿ ವೇಳೆಯಲ್ಲಿ ಚಿರತೆ ಅರಣ್ಯ ಪ್ರದೇಶದಿಂದ ತೋಟದ ಮನೆಗೆ ನುಗ್ಗಿ ಮೇಕೆಯನ್ನು ಕಚ್ಚಿ ಕೊಂದಿರುವ ಬಗ್ಗೆ ರೈತರು ಆತಂಕ ವ್ಯಕ್ತಪಡಿಸಿದ್ದಾರೆ.ತಾಲೂಕಿನಲ್ಲಿ ಚಿರತೆ ಉಪಟಳ ಮತ್ತೊಂದೆಡೆ ಹಂದಿ ಆನೆಗಳ ಹಾವಳಿ ಬೆಳೆ ಹಾನಿ ಜೀವ ಭಯದಲ್ಲೇ ಕಾಲ ಕಳೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.
ಬೋನಿಗೆ ಬಬೀಳದ ಚಿರತೆ: ಕಳೆದ ಒಂದು ವರ್ಷದಿಂದ ಚಿರತೆ ಕಾಟದಿಂದ ಉಪಟಳ ಹೆಚ್ಚಾಗಿ ರೈತರ ಸಾಕುಪ್ರಾಣಿಗಳನ್ನೇ ಕೊಂದು ತಿನ್ನುತ್ತಿದ್ದರೂ ಅರಣ್ಯಾಧಿಕಾರಿಗಳು ಚಿರತೆ ಸೆರೆ ಹಿಡಿಯಲು ವಿಫಲರಾಗಿದ್ದಾರೆ. ಕಾಟಚಾರಕ್ಕೆ ಅಂಬಿಕಾಪುರ, ಜಿಆರ್ ನಗರ, ಗಂಗನ ದೊಡ್ಡಿ, ದೊಮ್ಮನ ಗದ್ದೆ ಕಾಂಚಳ್ಳಿ ವಿವಿಧಡೆ ಚಿರತೆ ಸರಿ ಹಿಡಿಯಲು ಬೋನ್ ಇಡಲಾಗಿದೆ. ಆದರೂ ಚಿರತೆ ಬೋನಿಗೆ ಸೆರೆಯಾಗದೆ ಸಾಕು ಪ್ರಾಣಿಗಳನ್ನು ಕೊಂದು ತಿನ್ನುತ್ತಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.ತೋಟದ ಮನೆಗಳು ಟಾರ್ಗೆಟ್: ಕಳೆದ ಒಂದು ವರ್ಷದಿಂದ ವಿವಿಧ ಗ್ರಾಮಗಳ ಉಡುತೊರೆ ಹಳ್ಳ ಸಮೀಪದ ರೈತರ ಜಮೀನುಗಳ ತೋಟದ ಮನೆಗಳಲ್ಲಿ ವಾಸಿಸುವ ಸಾಕು ಪ್ರಾಣಿಗಳಾದ ನಾಯಿ ಕುರಿ ಮೇಕೆ ಕೋಳಿ ಇನ್ನಿತರ ಪ್ರಾಣಿಗಳನ್ನು ಕೊಂದು ತಿನ್ನುತ್ತಿರುವ ಚಿರತೆ ಉಪಟಳದಿಂದ ರೈತರು ರಾತ್ರಿ ವೇಳೆ ಜಮೀನುಗಳಲ್ಲಿ ಬೆಳೆಗೆ ನೀರು ಹಾಯಿಸಲು ಭಯ ಪಡುತ್ತಿದ್ದಾರೆ ಜೊತೆಗೆ ಆತಂಕದಲ್ಲಿಯೇ ತೋಟದ ಮನೆಗಳಲ್ಲಿ ವಾಸಿಸುತ್ತಿದ್ದಾರೆ. ಚಿರತೆಯನ್ನು ಸೆರೆ ಹಿಡಿಯಲು ಅರಣ್ಯ ಅಧಿಕಾರಿಗಳು ಬೋನ್ ಇಡುವ ಮೂಲಕ ರೈತರೇ ಫೋನಿಗೆ ಪ್ರಾಣಿಗಳನ್ನು ಕಟ್ಟಬೇಕು. ಜೊತೆಗೆ ನೀವೇ ನೋಡಿಕೊಳ್ಳಿ ಎಂದು ಅರಣ್ಯ ಅಧಿಕಾರಿಗಳು ಚಿರತೆ ಸೆರೆ ಹಿಡಿಯಲು ಪ್ರಯತ್ನ ಪಡುತ್ತಿಲ್ಲ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ .
------------------------ಮಲೆ ಮಾದೇಶ್ವರ ವನ್ಯಜೀವಿ ವ್ಯಾಪ್ತಿಯಲ್ಲಿ ಪಚ್ಚೆದೊಡ್ಡಿ ಹಾಗೂ ವಿವಿಧ ಭಾಗಗಳಲ್ಲಿ ಅಪಾರ ಪ್ರಮಾಣವಾದ ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚಿನಿಂದ ಸುಟ್ಟು ಕರಕಲಾಗಿರುವುದರಿಂದ ಕಾಡುಪ್ರಾಣಿಗಳು ರೈತರ ಜಮೀನುಗಳತ್ತ ಚಿರತೆ ಆನೆ ಮತ್ತು ಹಂದಿಗಳು ಸಹ ರೈತರ ಜಮೀನಿಗಳಲ್ಲಿ
ಅಪಾರ ಪ್ರಮಾಣವಾದ ಮುಸುಕಿನ ಜೋಳ ಮತ್ತು ಇನ್ನಿತರ ಫಸಲನ್ನು ತಿಂದು ಹಾಳು ಮಾಡುತ್ತಿದೆ. ಹೀಗಾಗಿ ಸಂಬಂಧಪಟ್ಟ ಅರಣ್ಯ ಅಧಿಕಾರಿಗಳು ಇತ್ತ ಗಮನಹರಿಸಿ ಕಾಡುಪ್ರಾಣಿಗಳು ರೈತರ ಜಮೀನಿಗೆ ಬರದಂತೆ ಶಾಶ್ವತ ಪರಿಹಾರ ನೀಡಲು ಆನೆ ಕಂದಕ ಸೋಲಾರ್ ಬೇಲಿ ಅಥವಾ ರೈಲ್ವೆ ಬ್ಯಾರಿ ಗೇಟ್ ನಿರ್ಮಾಣ ಮಾಡಿ ಸೂಕ್ತ ಕ್ರಮ ಕೈಗೊಳ್ಳಬೇಕು ಇದೇ ವಿಚಾರವಾಗಿ ಏ. 5 ರಂದು ಸಭೆ ಕರೆಯಲಾಗಿದ್ದು ಕರ್ನಾಟಕ ರಾಜ್ಯ ರೈತ ಸಂಘ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು.ಅಮ್ಜದ್ ಖಾನ್,
ಕರ್ನಾಟಕ ರಾಜ್ಯ ರೈತ ಸಂಘ ತಾಲೂಕು ಘಟಕ, ಹನೂರು