ಗುಬ್ಬಿ: ತಾಲೂಕಿನ ಹರದಗೆರೆ ಗ್ರಾಮದಲ್ಲಿ ಆತಂಕಕ್ಕೆ ಕಾರಣವಾಗಿದ್ದ ಚಿರತೆ ಅರಣ್ಯ ಇಲಾಖೆ ಬೋನಿಗೆ ಬಿದ್ದಿದೆ.
ಗುಬ್ಬಿ: ತಾಲೂಕಿನ ಹರದಗೆರೆ ಗ್ರಾಮದಲ್ಲಿ ಆತಂಕಕ್ಕೆ ಕಾರಣವಾಗಿದ್ದ ಚಿರತೆ ಅರಣ್ಯ ಇಲಾಖೆ ಬೋನಿಗೆ ಬಿದ್ದಿದೆ. ಕೆಲ ದಿನಗಳಿಂದ ರೈತರ ಕುರಿ ಮೇಕೆ ನಾಯಿಗಳನ್ನು ಹಿಡಿದುಕೊಂಡು ತಿನ್ನುತ್ತಿದ್ದ ಚಿರತೆಯನ್ನು ಹಿಡಿಯುವಂತೆ ಈ ಭಾಗದ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮನವಿ ಮಾಡಿದ್ದರು. ಅದರಂತೆ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಶನಿವಾರವೇ ಸೆರೆಯಾಗಿದ್ದು ಜನರಲ್ಲಿ ಆತಂಕ ಕಡಿಮೆಯಾಗಿದೆ. ಕಾಣಿಸಿಕೊಂಡ ತಕ್ಷಣ ಆ ಭಾಗದ ಗ್ರಾಮಸ್ಥರು ಅರಣ್ಯ ಅಧಿಕಾರಿಗಳಿಗೆ ಬೋನ್ ಇಡುವಂತೆ ಮನವಿ ಮಾಡಿದ್ದರು. ಕಾರ್ಯಾರಣೆಯಲ್ಲಿ ಅರಣ್ಯ ಇಲಾಖೆಯ ಸಂತೋಷ್, ಶಶಿಕುಮಾರ್, ನರಸಿಂಹಮೂರ್ತಿ, ಶಿವಕುಮಾರ್, ಷಣ್ಮುಖ ಇತರರಿದ್ದರು.