ಎಣ್ಣೆಗೆರೆಯಲ್ಲಿ ನಿತ್ರಾಣಗೊಂಡಿದ್ದ ಚಿರತೆ ಸೆರೆ

| Published : Jun 19 2024, 01:04 AM IST

ಸಾರಾಂಶ

ದಾಬಸ್‌ಪೇಟೆ: ಗಾಯಗೊಂಡು ನಿತ್ರಾಣವಾಗಿದ್ದ ಚಿರತೆಯನ್ನು ಅರಣ್ಯಾಧಿಕಾರಿಗಳು ಸೆರೆ ಹಿಡಿದಿರುವ ಘಟನೆ ನೆಲಮಂಗಲ ತಾಲೂಕಿನ ಎಣ್ಣೆಗೆರೆ ಗ್ರಾಮದಲ್ಲಿ ನಡೆದಿದೆ.

ದಾಬಸ್‌ಪೇಟೆ: ಗಾಯಗೊಂಡು ನಿತ್ರಾಣವಾಗಿದ್ದ ಚಿರತೆಯನ್ನು ಅರಣ್ಯಾಧಿಕಾರಿಗಳು ಸೆರೆ ಹಿಡಿದಿರುವ ಘಟನೆ ನೆಲಮಂಗಲ ತಾಲೂಕಿನ ಎಣ್ಣೆಗೆರೆ ಗ್ರಾಮದಲ್ಲಿ ನಡೆದಿದೆ.

ಕಳೆದ ಎರಡು ಮೂರು ತಿಂಗಳಿಂದ ಚಿರತೆಯೊಂದು ಎಣ್ಣೆಗೆರೆ ಗ್ರಾಮ ಸೇರಿದಂತೆ ಬಿಟ್ಟಸಂದ್ರ, ಕಾಳಿಪಾಳ್ಯ, ರಂಗೇನಹಳ್ಳಿ, ಹೊಸಪಾಳ್ಯ, ಗಂಗೇನಪುರ, ಹೇಮಾಪುರ, ಮದಲಕೋಟೆ ಸೇರಿದಂತೆ ಹಲವಾರು ಗ್ರಾಮಗಳಲ್ಲಿ ಕಾಣಿಸಿಕೊಂಡಿತ್ತು. ಬೆಟ್ಟಗುಡ್ಡಗಳಿಗೆ ಜಾನುವಾರು, ಮೇಕೆ, ಕುರಿಗಳನ್ನು ಮೇಯಿಸಲು ಹೋದಾಗ ದಾಳಿ ಮಾಡಿತ್ತು. ಗ್ರಾಮದಲ್ಲಿದ್ದ ನಾಯಿಗಳ ಮೇಲೆಯೂ ದಾಳಿ ಮಾಡಿ ತಿಂದು ಹಾಕಿತ್ತು. ಇದರಿಂದ ಗ್ರಾಮಸ್ಥರು, ರೈತರು ಚಿರತೆಯ ದಾಳಿಯಿಂದ ಭಯಬೀತರಾಗಿದ್ದರು.

ಇದೀಗ ಎಣ್ಣೆಗೆರೆ ಗ್ರಾಮದ ಬಳಿ ಗಾಯಗೊಂಡ ಸ್ಥಿತಿಯಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದನ್ನು ಕಂಡ ಗ್ರಾಮಸ್ಥರು ಅರಣ್ಯಾಧಿಕಾರಿಗಳಿಗೆ ವಿಷಯ ಮುಟ್ಟಿಸಿದ್ದು, ಗಾಯಗೊಂಡಿದ್ದ ಚಿರತೆಯನ್ನು ದಾಬಸ್‌ಪೇಟೆ ವಲಯ ಅರಣ್ಯಾಧಿಕಾರಿಗಳು ಬಲೆ ಬೀಸಿ ಸೆರೆ ಹಿಡಿದಿದ್ದು, ಗಾಯಗೊಂಡ ಚಿರತೆಗೆ ಬನ್ನೇರುಘಟ್ಟ ಪಶುವೈದ್ಯರು ಚಿಕಿತ್ಸೆ ನೀಡಿದ್ದು ಚೇತರಿಕೆ ಕಾಣುತ್ತಿದೆ.

ನಿಟ್ಟುಸಿರು ಬಿಟ್ಟ ಗ್ರಾಮಸ್ಥರು: ಚಿರತೆ ಸೆರೆಯಿಂದಾಗಿ ಎಣ್ಣೆಗೆರೆ ಗ್ರಾಮ ಸೇರಿದಂತೆ ಅಕ್ಕಪಕ್ಕದ ಗ್ರಾಮಗಳು ಭಯಬೀತರಾಗಿದ್ದು ಮನೆಯಿಂದ ಹೊರಬರಲು ಹೆದರುತ್ತಿದ್ದು ಆತಂಕದಲ್ಲೇ ಜಾನುವಾರುಗಳನ್ನು ಮೇಯಿಸುತ್ತಿದ್ದರು. ಇದೀಗ ಚಿರತೆ ಸೆರೆಯಿಂದಾಗಿ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.