ಮದ್ದೂರು ಗ್ರಾಮದಲ್ಲಿ ಸ್ವಾಭಾವಿಕವಾಗಿ ಚಿರತೆ ಸಾವು

| Published : Sep 21 2024, 01:58 AM IST

ಮದ್ದೂರು ಗ್ರಾಮದಲ್ಲಿ ಸ್ವಾಭಾವಿಕವಾಗಿ ಚಿರತೆ ಸಾವು
Share this Article
  • FB
  • TW
  • Linkdin
  • Email

ಸಾರಾಂಶ

ಯಳಂದೂರು: ತಾಲೂಕಿನ ಮದ್ದೂರು ಗ್ರಾಮದ ಎಳೆಪಿಳ್ಳಾರಿ ದೇವಸ್ಥಾನದಿಂದ ಮಲ್ಲಿಗೆಹಳ್ಳಿ ಹೋಗುವ ಕಾಲುವೆ ಪೊದೆಯಲ್ಲಿ ಚಿರತೆ ಸ್ವಾಭಾವಿಕವಾಗಿ ಮೃತಪಟ್ಟಿದೆ.

ಯಳಂದೂರು: ತಾಲೂಕಿನ ಮದ್ದೂರು ಗ್ರಾಮದ ಎಳೆಪಿಳ್ಳಾರಿ ದೇವಸ್ಥಾನದಿಂದ ಮಲ್ಲಿಗೆಹಳ್ಳಿ ಹೋಗುವ ಕಾಲುವೆ ಪೊದೆಯಲ್ಲಿ ಚಿರತೆ ಸ್ವಾಭಾವಿಕವಾಗಿ ಮೃತಪಟ್ಟಿದೆ.

ಇಲ್ಲಿನ ಪೊದೆಯಲ್ಲಿ ಗುರುವಾರ ಮಧ್ಯಾಹ್ನ ಚಿರತೆ ಕಾಣಿಸಿಕೊಂಡಿತ್ತು. ಈ ವೇಳೆ ಅರಣ್ಯ ಇಲಾಖೆಗೆ ಇಲ್ಲಿನ ರೈತರು ಮಾಹಿತಿ ನೀಡಿದ್ದರು. ಈ ವೇಳೆ ಪೊದೆಯಲ್ಲಿ ಅಡಗಿದ್ದ ಚಿರತೆಯನ್ನು ಹಿಡಿಯಲು ಇಲಾಖೆಯ ಸಿಬ್ಬಂದಿ ಇಲ್ಲಿಗೆ ಬಂದ ವೇಲೆ ಬಿಆರ್‌ಟಿ ನಿರ್ದೇಶಕರು, ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಮಾರ್ಗದರ್ಶನದಂತೆ ಸ್ಥಳಕ್ಕೆ ತೆರಳಿದ್ದಾರೆ. ಈ ವೇಳೆ ಏಕಾಏಕಿ ಪೊದೆಯಲ್ಲಿ ಅಡಗಿದ್ದ ಚಿರತೆ ದಾಳಿ ಮಾಡಿ ಸಿಬ್ಬಂದಿ ಹಾಗೂ ಸಾರ್ವಜನಿಕರ ಮೇಲೆ ದಾಳಿ ಮಾಡಲು ಮುಂದಾಯಿತು.

ಆಗ ಸಾರ್ವಜನಿಕರ ಹಿತದೃಷ್ಟಿ ಹಾಗೂ ಆತ್ಮ ರಕ್ಷಣೆಗೆ ಗನ್ ನಿಂದ ಸಿಬ್ಬಂದಿ ಗಾಳಿಯಲ್ಲಿ ಒಂದು ಸುತ್ತು ಕಾಡತೂಸು ಹಾರಿಸಲಾಯಿತು. ಈ ಸಂದರ್ಭದಲ್ಲಿ ಆಕಸ್ಮಿಕವಾಗಿ ಪಕ್ಕದಲ್ಲಿದ್ದ ಅರಣ್ಯ ಇಲಾಖೆಯ ಸಿಬ್ಬಂದಿ ಎಸ್.ರವಿ, ರಂಗಸ್ವಾಮಿ ಗ್ರಾಮಸ್ಥರಾದ ಶಿವಮೂರ್ತಿ, ರಂಗಸ್ವಾಮಿ, ಜಿ. ಮೂರ್ತಿ ಅವರ ಮೇಲೆ ಕಾಡತೂಸಿನಿಂದ ಬಂದ ಪಿಲ್ಲೇಟ್ಸ್‌ಗಳು ತಗುಲಿ ಗಾಯವಾಗಿದೆ. ಅಲ್ಲೇ ಇದ್ದ ಬೈಕ್‌ನ ಬಳಿ ಚಿರತೆಯೂ ಬಂದು ಮೃತಪಟ್ಟಿದೆ.

ಗಾಯಗೊಂಡವರನ್ನು ಯಳಂದೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಯನ್ನು ಕೊಳ್ಳೇಗಾಲದ ಖಾಸಗಿ ಆಸ್ಪತ್ರೆಯಲ್ಲಿ ಕೊಡಿಸಲಾಗಿದೆ. ವೈದ್ಯರು ಸಣ್ಣಪುಟ್ಟ ಗಾಯವಾಗಿದ್ದು ತೊಂದರೆ ಇಲ್ಲ ಎಂದು ತಿಳಿಸಿದ್ದಾರೆ.

ಉಪ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ನಿರ್ದೇಶಕ ಶ್ರೀಪತಿ, ಎಸಿಎಫ್ ಪ್ರಕಾಶ್ಕರ್ ಅಕ್ಷಯ್‌ಅಶೋಕ್, ಆರ್‌ಎಫ್‌ಒ ನಾಗೇಂದ್ರನಾಯಕ್ ನೇತೃತ್ವದಲ್ಲಿ ಪಶುವೈದ್ಯಾಧಿಕಾರಿ ಡಾ.ಆದರ್ಶ್ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು ಮೃತಪಟ್ಟ ಚಿರತೆ ಗಂಡಾಗಿದ್ದು ೦೨ ರಿಂದ ೦೩ ವರ್ಷ ಪ್ರಾಯದ್ದಾಗಿದೆ ಹಾಗೂ ಇದು ಸ್ವಾಭಾವಿಕವಾಗಿ ಮೃತಪಟ್ಟಿದೆ ಎಂದು ದೃಢೀಕರಿಸಲಾಗಿದ್ದು ನಿಯಮಾನುಸಾರ ಮುಂದಿನ ಕ್ರಮ ವಹಿಸಲಾಗಿದೆ ಎಂದು ತಿಳಿಸಿದ್ದಾರೆ.