ಸಾರಾಂಶ
ತಿಪಟೂರು: ತಾಲೂಕಿನ ಹೊನ್ನವಳ್ಳಿ ಹೋಬಳಿಯ ಹುರುಳಿಹಳ್ಳಿ, ಮಣಕೀಕೆರೆ, ಹೊಸಹಳ್ಳಿ, ಚೌಲಿಹಳ್ಳಿ, ಮೀಸೆತಿಮ್ಮನಹಳ್ಳಿ ಭಾಗಗಳಲ್ಲಿ ಕಳೆದ ಮೂರು ತಿಂಗಳಿನಿಂದಲೂ ಗ್ರಾಮಸ್ಥರ ನಿದ್ದೆಗೆಡಿಸಿದ್ದ ೬ ವರ್ಷದ ಚಿರತೆಯು ಅರಣ್ಯ ಇಲಾಖೆಯು ಗುರುವಾರ ರಾತ್ರಿ ಇಟ್ಟಿದ್ದ ಬೋನಿಗೆ ಬಿದ್ದಿದ್ದು, ಗ್ರಾಮಸ್ಥರು ಸ್ವಲ್ಪ ಮಟ್ಟಿಗೆ ನಿರಾಳರಾಗಿದ್ದಾರೆ.

ಈ ಸುತ್ತಮುತ್ತಲ ಪ್ರದೇಶಗಳಲ್ಲಿ ಕಳೆದ ಮೂರು ತಿಂಗಳಿನಿಂದಲೂ 3-4 ಚಿರತೆಗಳು ಒಟ್ಟೊಟ್ಟಿಗೆ ಓಡಾಡುತ್ತಿದ್ದವು. ಇದರಿಂದ ರೈತರಲ್ಲಿ ಆತಂಕ ಉಂಟುಮಾಡಿತ್ತು. ಚಿರತೆಗಳ ಹಾವಳಿಯಿಂದ ಕತ್ತಲಾದರೆ ಓಡಾಡುವಂತಿರಲಿಲ್ಲ ಹಸು, ಮೇಕೆ, ಸಾಕು ನಾಯಿ, ಕುರಿಗಳನ್ನು ಹೊರಗೆ ಬಿಡುವಂತಿರಲಿಲ್ಲ. ಈಗಾಗಲೆ ಜನರು ಸಾಕಷ್ಟು ದನ, ಕರು, ಕುರಿಗಳನ್ನು ಕಳೆದುಕೊಂಡಿದ್ದರು. ಈ ಬಗ್ಗೆ ಪತ್ರಿಕೆಗಳಲ್ಲಿಯೂ ವರದಿ ಪ್ರಕಟವಾಗಿತ್ತು. ಎಚ್ಚೆತ್ತುಕೊಂಡ ಅರಣ್ಯ ಇಲಾಖೆಯು ಹುರುಳಿಹಳ್ಳಿ ತೋಟದಲ್ಲಿ ಬೋನ್ ಇಡಲಾಗಿತ್ತು. ಬೋನು ಇಟ್ಟ ಒಂದೇ ದಿನದಲ್ಲಿ ಚಿರತೆ ಬೋನಿನಲ್ಲಿ ಸೆರೆಯಾಗಿದೆ. ಬೋನಿಗೆ ಬಿದ್ದಿದ್ದ ಚಿರತೆ ವೀಕ್ಷಿಸಲು ಸುತ್ತಮುತ್ತಲಿನ ಹಳ್ಳಿಗಳಿಂದ ನೂರಾರು ಜನರು ಆಗಮಿಸಿದ್ದರು. ಗ್ರಾಮಸ್ಥರಲ್ಲಿ ಸ್ವಲ್ಪ ಮಟ್ಟಿಗೆ ಆತಂಕ ದೂರವಾಗಿದ್ದು ಇನ್ನೂ ಮೂರ‍್ನಾಲ್ಕು ಚಿರತೆಗಳ ಓಡಾಟವಿದ್ದು ಇದೇ ರೀತಿ ಬೇರೆ ಬೇರೆ ಕಡೆಗಳಲ್ಲಿ ಬೋನು ಇಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.;Resize=(128,128))
;Resize=(128,128))