ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಡಿ. 17ರಂದು ಮೊದಲ ಬಾರಿಗೆ ಚಿರತೆ ಕಾಣಿಸಿಕೊಂಡಿದ್ದರಿಂದ ಅರಣ್ಯ ಇಲಾಖೆ ಬರೋಬ್ಬರಿ 11 ಟ್ರ್ಯಾಪ್ ಕ್ಯಾಮೆರಾಗಳನ್ನು ವಿವಿಧೆಡೆ ಅಳವಡಿಸಿತ್ತು. ಜತೆಗೆ 2 ಕಡೆ ಬೋನ ಅಳವಡಿಸಲಾಗಿತ್ತು. ಆ ಬಳಿಕ ಡಿ. 31ರ ವರೆಗೆ ನಾಲ್ಕೈದು ಬಾರಿ ಕ್ಯಾಮೆರಾಗಳಲ್ಲಿ ಚಿರತೆಯ ಓಡಾಟ ಸೆರೆಯಾಗಿತ್ತು.
ಹುಬ್ಬಳ್ಳಿ:
ಎಂಟ್ಹತ್ತು ದಿನಗಳಿಂದ ಕಾಣಿಸಿಕೊಳ್ಳದೆ ಇದ್ದ ಚಿರತೆ ಗುರುವಾರ ವಿಮಾನ ನಿಲ್ದಾಣದ ಪ್ರಾಂಗಣ ಸೇರಿದಂತೆ ವಿವಿಧೆಡೆ ಪ್ರತ್ಯಕ್ಷವಾಗಿದ್ದು ಜನರ ಆತಂಕ ಹೆಚ್ಚಿಸಿದೆ. ಈ ಬಾರಿಯಾದರೂ ಅದನ್ನು ಸೆರೆಹಿಡಿದು ಆತಂಕ ದೂರ ಮಾಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.ಚಿರತೆ ಸೆರೆ ಹಿಡಿಯಲೆಂದು ಅಳವಡಿಸಿರುವ ಟ್ರ್ಯಾಪ್ ಕ್ಯಾಮೆರಾದಲ್ಲಿ ಚಿರತೆ ಓಡಾಡುತ್ತಿರುವ ದೃಶ್ಯ ಕಂಡು ಬಂದಿದೆ. ಈ ನಡುವೆ ಕಾರವಾರ ರಸ್ತೆಯ ಆಸ್ಮಾ ಇಂಡಸ್ಟ್ರೀಜ್ ಬಳಿಯೂ ಚಿರತೆ ಓಡಾಟ ಕಂಡು ಬಂದಿದೆ. ಸತ್ತೂರಿನಲ್ಲಿ ಕಾಣಿಸಿಕೊಂಡಿದೆ ಎಂದು ಸಾರ್ವಜನಿಕರು ತಿಳಿಸಿದ್ದು ಅಲ್ಲಿನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ವಿಮಾನ ನಿಲ್ದಾಣದಲ್ಲಿ ಡಿ. 17ರಂದು ಮೊದಲ ಬಾರಿಗೆ ಚಿರತೆ ಕಾಣಿಸಿಕೊಂಡಿದ್ದರಿಂದ ಅರಣ್ಯ ಇಲಾಖೆ ಬರೋಬ್ಬರಿ 11 ಟ್ರ್ಯಾಪ್ ಕ್ಯಾಮೆರಾಗಳನ್ನು ವಿವಿಧೆಡೆ ಅಳವಡಿಸಿತ್ತು. ಜತೆಗೆ 2 ಕಡೆ ಬೋನ ಅಳವಡಿಸಲಾಗಿತ್ತು. ಆ ಬಳಿಕ ಡಿ. 31ರ ವರೆಗೆ ನಾಲ್ಕೈದು ಬಾರಿ ಕ್ಯಾಮೆರಾಗಳಲ್ಲಿ ಚಿರತೆಯ ಓಡಾಟ ಸೆರೆಯಾಗಿತ್ತು. ಆ ಬಳಿಕ ಮತ್ತೊಂದು ಬೋನ್ ಇಡಲಾಗಿತ್ತು. ಅದಾದ ನಂತರ ಮತ್ತೆ ಚಿರತೆ ಕಂಡು ಬಂದಿರಲಿಲ್ಲ. ಹೀಗಾಗಿ ಇಲ್ಲಿಂದ ಚಿರತೆ ಹೋಗಿರಬಹುದು. ಆದರಿಂದ ಜನರು ಆತಂಕ ಪಡುವ ಅಗತ್ಯವಿಲ್ಲ. ಆದರೂ ಚಿರತೆ ಸೆರೆ ಹಿಡಿಯಲು ಪ್ರಯತ್ನ ಮಾಡಲಾಗುತ್ತಿದೆ. ಜನರು ಒಂಟಿಯಾಗಿ ಹೊರಗೆ ಓಡಾಡಬಾರದು ಎಂಬ ಸೂಚನೆಯನ್ನೂ ಅರಣ್ಯ ಇಲಾಖೆ ತಿಳಿಸಿತ್ತು. ಆದರೆ, ಇದೀಗ ಕಾರವಾರ ರಸ್ತೆಯಲ್ಲಿ ಓಡಾಡುತ್ತಿರುವ ದೃಶ್ಯ ಅಲ್ಲಿನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದರೆ, ವಿಮಾನ ನಿಲ್ದಾಣದ ಹಿಂಬದಿಯಲ್ಲಿ ಕಂಡು ಬಂದಿರುವುದು ಟ್ರ್ಯಾಪ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇನ್ನು ಸತ್ತೂರಿನಲ್ಲಿ ಓಡಾಟದ ಮಾಹಿತಿ ಅಲ್ಲಿನ ಜನತೆ ನೀಡಿದ್ದಾರೆ. ಹೀಗಾಗಿ ಆದಷ್ಟು ಬೇಗನೆ ಚಿರತೆ ಸೆರೆ ಹಿಡಿಯಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.ವಿಮಾನ ನಿಲ್ದಾಣದ ಹಿಂಬದಿಯಲ್ಲಿ ಅಳವಡಿಸಿರುವ ಟ್ರ್ಯಾಪ್ ಕ್ಯಾಮೆರಾದಲ್ಲಿ ಮತ್ತೆ ಚಿರತೆಯ ಓಡಾಟದ ದೃಶ್ಯ ಸೆರೆಯಾಗಿದೆ. ಕಾರವಾರ ರಸ್ತೆ, ಸತ್ತೂರಲ್ಲೂ ಕಂಡಿದೆ ಎಂದು ಅಲ್ಲಿನ ಸಾರ್ವಜನಿಕರು ತಿಳಿಸಿದ್ದಾರೆ. ಅದನ್ನು ಪರಿಶೀಲಿಸಲಾಗುತ್ತಿದೆ. ಸಾರ್ವಜನಿಕರು ಮುಂಜಾಗ್ರತೆಯಿಂದ ಇರಬೇಕು.ಆರ್.ಎಸ್.ಉಪ್ಪಾರ, ಅರಣ್ಯ ಇಲಾಖೆ ಅಧಿಕಾರಿಗಳು