ತದ್ದೇವಾಡಿ, ಮಣಕಂಲಗಿ ಗ್ರಾಮಗಳ ವ್ಯಾಪ್ತಿಯಲ್ಲಿ ಕಳೆದ ಬಹುದಿನಗಳಿಂದ ಚಿರತೆ ದಾಳಿಗೆ ಸಾಕು ಪ್ರಾಣಿಗಳು ಬಲಿಯಾಗುತ್ತಿದ್ದು, ಒಂದರ ಮೇಲೊಂದರಂತೆ ದನ, ಕರು, ಆಡು, ಕುರಿಗಳನ್ನು ಚಿರತೆ, ಕೊಂದು ಹಾಕುತ್ತಿದೆ.
ಕನ್ನಡಪ್ರಭ ವಾರ್ತೆ ಚಡಚಣ
ಚಿರತೆ ಕಾಟದಿಂದ ತದ್ದೇವಾಡಿ, ಮರಗೂರ, ಮಣಕಂಲಗಿ, ಉಮರಾಣಿ, ಟಾಕಳಿ ಗ್ರಾಮದ ಜನರಲ್ಲಿ ದಿನವಿಡೀ ಆತಂಕದ ವಾತವಾರಣ ಸೃಷ್ಟಿಯಾಗಿದೆ. ಮತ್ತೆ ಚಿರತೆ ಮಣಕಂಲಗಿ ಗ್ರಾಮದ ಜಮೀನಿನಲ್ಲಿ ಮಹಿಳೆಯೊಬ್ಬರಿಗೆ ಕಣ್ಣಿಗೆ ಬಿದಿದ್ದು ಭಾನುವಾರ ಮತ್ತು ಸೋಮವಾರ ಎರಡು ದಿನದಿಂದ ಅರಣ್ಯ ಇಲಾಖೆಯಿಂದ ಸತತ ಕಾರ್ಯಾಚರಣೆ ನಡೆದಿದೆ.ತದ್ದೇವಾಡಿ, ಮಣಕಂಲಗಿ ಗ್ರಾಮಗಳ ವ್ಯಾಪ್ತಿಯಲ್ಲಿ ಕಳೆದ ಬಹುದಿನಗಳಿಂದ ಚಿರತೆ ದಾಳಿಗೆ ಸಾಕು ಪ್ರಾಣಿಗಳು ಬಲಿಯಾಗುತ್ತಿದ್ದು, ಒಂದರ ಮೇಲೊಂದರಂತೆ ದನ, ಕರು, ಆಡು, ಕುರಿಗಳನ್ನು ಚಿರತೆ, ಕೊಂದು ಹಾಕುತ್ತಿದೆ. ಚಿರತೆ ಹಿಡಿಯಲು ಅರಣ್ಯ ಇಲಾಖೆ, ಹಲಸಂಗಿ ಗೊಲ್ಲ ಸಮುದಾಯ ತಂಡ, ಪೊಲೀಸ್ ಇಲಾಖೆ ಮತ್ತು ಗ್ರಾಮಸ್ಥರ ಸತತ ಪ್ರಯತ್ನ ನಡೆದರೂ ಸಹ ಕಣ್ಣು ತಪ್ಪಿಸಿಕೊಳ್ಳುತ್ತಿದೆ.
ಅರಣ್ಯಾಧಿಕಾರಿಗಳಾದ ಭಾಗ್ಯವಂತ ಮಸೂದಿ, ಎಸ್.ಜಿ. ಸಂಗಾಲಕ, ಮಂಜುನಾಥ ಧುಳೆ, ಕಂದಾಯ ನಿರೀಕ್ಷಕ ಗುರುಶಾಂತ ಬಿರಾದಾರ, ಲೋಣಿ ಗ್ರಾಪಂ ಪಿಡಿಓ ಸತೀಶ ಬಿರಾದಾರ, ಗ್ರಾಮಾಡಳಿತ ಅಧಿಕಾರಿ ಸಿ.ಎಸ್ ದಟ್ಟಿ, ಹಲಸಂಗಿ ಗೋಪಾಲಕ ತಂಡ, ಪಶು ಇಲಾಖೆ ಹಾಗೂ ತದ್ದೇವಾಡಿ, ಮರಗೂರ, ಮಣಕಂಲಗಿ, ಉಮರಾಣಿ, ಟಾಕಳಿ ಗ್ರಾಮಸ್ಥರು ಇದ್ದರು.ಚಿರತೆ ಪತ್ತೆಗೆ ಅರಣ್ಯ ಇಲಾಖೆಯಿಂದ ಸಾಕಷ್ಟು ಪ್ರಯತ್ನ ನಡೆದಿದೆ. ಚಿರತೆ ಕಾಣಿಸಿಕೊಂಡ ಸ್ಥಳದಿಂದ ತಪ್ಪಿಸಿಕೊಂಡು ತಿರುಗುತ್ತಿದೆ. ಇಲಾಖೆಯಿಂದ ಸುತ್ತ ಮುತ್ತಲಿನ ಪ್ರದೇಶದಲ್ಲಿ ಡ್ರೋನ್ ಕ್ಯಾಮೆರಾ ಮೂಲಕ ಕಾರ್ಯಾಚರಣೆ ನಡೆದಿದ್ದು, ಆದಷ್ಟು ಬೇಗನೆ ಪತ್ತೆ ಹಚ್ಚಲಾಗುವುದು. ಗ್ರಾಮಸ್ಥರು ಕಾಣಿಸಿಕೊಂಡಾಗ ತಕ್ಷಣ ನಮ್ಮ ಗಮನಕ್ಕೆ ತರಬೇಕು. ಅಡವಿ ವಸ್ತಿ ಜನ ಮುಂಜಾಗೃತೆಯಿಂದ ಇರಬೇಕು.ಮಲ್ಲಿನಾಥ ಕುಸನಾಳ, ಅರಣ್ಯಾಧಿಕಾರಿ ವಿಜಯಪುರ
ಚಿರತೆ ಸತತವಾಗಿ ಒಂದು ವರ್ಷದಿಂದ ಈ ಭಾಗದ ಜನರ ನಿದ್ದೆಗೆಡಿಸಿದೆ. ಸಾಕು ಪ್ರಾಣಿ, ಜಾನುವಾರಗಳ ಮೇಲೆ ದಾಳಿ ಮಾಡುತ್ತಿದ್ದು, ಜಮೀನಿನಲ್ಲಿ ಕೆಲಸ ಮಾಡಲು ರೈತರಲ್ಲಿ ಭಯದ ವಾತವರಣ ಸೃಷ್ಟಿಯಾಗಿದೆ. ಅರಣ್ಯ ಇಲಾಖೆ ಸತತ ಪ್ರಯತ್ನ ನಡೆದಿದೆ. ತದ್ದೇವಾಡಿ, ಮಣಕಂಲಗಿ, ಉಮರಾಣಿ, ಟಾಕಳಿ, ಮರಗೂರ ಗ್ರಾಮದ ಕಬ್ಬು ಕಟಾವು ಮಾಡಲು ನಮ್ಮ ಸಮೀಪದ ಸಕ್ಕರೆ ಕಾರ್ಖಾನೆಗಳಿಗೆ ಸೂಚಿಸಬೇಕು. ಚಿರತೆ ಪತ್ತೆಗೆ ಅನುಕೂಲವಾಗುತ್ತದೆ.ನಾಗನಾಥಗೌಡ ಬಿರದಾರ, ರೈತೋದಯ ಹಸಿರು ಸೇನೆ ರಾಜ್ಯ ಉಪಾಧ್ಯಕ್ಷ