ಮನುಷ್ಯ ಸತ್ತ ನಂತರವೂ ನೆನಪಿನಲ್ಲಿ ಉಳಿಯುವಂತಹ ಕೆಲಸ ಮಾಡಲಿ: ಸ್ವಾಮೀಜಿ

| Published : Dec 24 2024, 12:47 AM IST

ಮನುಷ್ಯ ಸತ್ತ ನಂತರವೂ ನೆನಪಿನಲ್ಲಿ ಉಳಿಯುವಂತಹ ಕೆಲಸ ಮಾಡಲಿ: ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ರಾಣಿಬೆನ್ನೂರು ನಗರದ ಹುಣಸಿಕಟ್ಟಿ ರಸ್ತೆಯಲ್ಲಿ ಸೋಮವಾರ ಕಾಕಿ ಜನಸೇವಾ ಸಂಸ್ಥೆ ವತಿಯಿಂದ ಉಚಿತ ಸರ್ವಧರ್ಮ ಸಾಮೂಹಿಕ ವಿವಾಹ ಸಮಾರಂಭ ನಡೆಯಿತು.

ರಾಣಿಬೆನ್ನೂರು: ಮನುಷ್ಯ ಸಾವಿನ ನಂತರ ನೆನಪಿನಲ್ಲಿ ಉಳಿಯುವಂತಹ ಕೆಲಸ ಮಾಡುವ ಮೂಲಕ ಸಮಾಜದ ಋಣ ತೀರಿಸಬೇಕು ಎಂದು ಶನೈಶ್ಚರ ಮಂದಿರದ ಶಿವಯೋಗಿ ಶಿವಾಚಾರ್ಯರು ನುಡಿದರು.

ನಗರದ ಹುಣಸಿಕಟ್ಟಿ ರಸ್ತೆಯಲ್ಲಿ ಸೋಮವಾರ ಲೋಕಾರ್ಪಣೆಗೊಂಡ ಜೇಸಿ ವಾಣಿ ಅರಮನೆ ಹಾಗೂ ಕಾಕಿ ಜನಸೇವಾ ಸಂಸ್ಥೆ ವತಿಯಿಂದ ಉಚಿತ ಸರ್ವಧರ್ಮ ಸಾಮೂಹಿಕ ವಿವಾಹ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.ಸಾಮೂಹಿಕ ಮದುವೆ ಭಾಗ್ಯವಂತರದು ಹೊರತು ಬಡವರದ್ದಲ್ಲ. ಅರಮನೆ ಮಾದರಿಯಲ್ಲಿ ಕಲ್ಯಾಣ ಮಂಟಪದಲ್ಲಿ ಮದುವೆ ನಿಜಕ್ಕೂ ಅದೃಷ್ಟ. ನವ ದಂಪತಿಗಳು ಸಂಸ್ಕಾರದಲ್ಲಿ ರಾಜ-ರಾಣಿ ಆಗಬೇಕು. ಆದರ್ಶ ಬದುಕು ಸಾಗಿಸಿದಲ್ಲಿ ಜೀವನ ಸಾರ್ಥಕವಾಗುತ್ತದೆ ಎಂದರು.

ಲಿಂಗದಹಳ್ಳಿ ಹಿರೇಮಠದ ವೀರಭದ್ರ ಶಿವಾಚಾರ್ಯರು ಮಾತನಾಡಿ, ನವ ದಂಪತಿ ಬದುಕು ಉಜ್ವಲವಾಗಲಿ. ಕಾಕಿ ಮನೆತನದ ಸಮಾಜಮುಖಿ ಕಾರ್ಯ ಆದರ್ಶಪ್ರಾಯವಾಗಿದೆ ಎಂದರು.

ಸಾಮೂಹಿಕ ವಿವಾಹದಲ್ಲಿ 11 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಕಾಕಿ ಜನಸೇವಾ ಸಂಸ್ಥೆ ಅಧ್ಯಕ್ಷ ಶ್ರೀನಿವಾಸ ಕಾಕಿ, ಕಾರ್ಯದರ್ಶಿ ರೂಪಾ ಕಾಕಿ, ಕುರುಹಿನಶೆಟ್ಟಿ ಸಮಾಜದ ಅಧ್ಯಕ್ಷ ಹನುಮಂತಪ್ಪ ಅಮಾಸಿ, ಉಪಾಧ್ಯಕ್ಷ ಶಿವಾನಂದ ಸಾಲಗೇರಿ, ಖಜಾಂಚಿ ಹನುಮಂತಪ್ಪ ಕಾಕಿ, ಕಾರ್ಯದರ್ಶಿ ಮಂಜುನಾಥ ಹೊಸಪೇಟೆ, ಜೆಡಿಎಸ್ ಜಿಲ್ಲಾಧ್ಯಕ್ಷ ಮಂಜುನಾಥ ಗೌಡಶಿವಣ್ಣನವರ, ವರ್ತಕ ಎಂ.ಎಸ್. ಅರಕೇರಿ, ಸಣ್ಣಹನುಮಂತಪ್ಪ ಕಾಕಿ, ಲಕ್ಷ್ಮಣ ಕನಕಿ, ವೆಂಕಟೇಶ ಕಾಕಿ, ಪ್ರಕಾಶ ಗಚ್ಚಿನಮಠ, ಶಿವಾನಂದ ಬಗಾದಿ, ಪ್ರಭುಲಿಂಗ ಹಲಗೇರಿ, ವೆಂಕಟೇಶ ಸಾಲಗೇರಿ, ಶಿವಶಂಕರ ಕೆ, ಗುಡದಯ್ಯ ಹಲಗೇರಿ, ನೀಲಕಂಠಪ್ಪ, ಕೊಟ್ರೇಶಪ್ಪ ಎಮ್ಮಿ, ನಿತ್ಯಾನಂದ ಕುಂದಪುರ, ಕೆ.ಸಿ. ನಾಗರಜ್ಜಿ, ಶಿವಾನಂದ ಬಗಾದಿ ಜಟ್ಟೆಪ್ಪ ಕರೇಗೌಡ್ರ, ಲಕ್ಷ್ಮೀ ಕಾಕಿ ಇದ್ದರು.

ಇದಕ್ಕೂ ಮುನ್ನಾದಿನ ನಗರದ ಯರೇಕುಪ್ಪಿ ರಸ್ತೆಯ ನೀಲಕಂಠೇಶ್ವರ ದೇವಸ್ಥಾನದ ಗಣೇಶೋತ್ಸವ ಮಂಟಪದಿಂದ ವಧು-ವರರ ಸಾರೋಟದ ಮೆರವಣಿಗೆಗೆ ಶಾಸಕ ಪ್ರಕಾಶ ಕೋಳಿವಾಡ ಹಾಗೂ ಮಾಜಿ ಶಾಸಕ ಅರುಣಕುಮಾರ ಪೂಜಾರ ಚಾಲನೆ ನೀಡಿದರು. ಮೆರವಣಿಗೆ ಹಳೇ ಪಿ.ಬಿ. ರಸ್ತೆ, ಕಾಕಿ ಗಲ್ಲಿ, ಕುರುಬಗೇರಿ ಕ್ರಾಸ್, ದುರ್ಗಾ ಸರ್ಕಲ್, ಎಂ.ಜಿ. ರಸ್ತೆ, ಚಕ್ಕಿಮಿಕ್ಕಿ ಸರ್ಕಲ್, ಅಂಚೆ ವೃತ್ತ, ಪುನೀತರಾಜಕುಮಾರ ಸರ್ಕಲ್, ಮೇಡ್ಲೇರಿ ರಸ್ತೆ, ಗಂಗಾಜಲ ಚೌಡೇಶ್ವರಿ ದೇವಸ್ಥಾನ, ಪಂಪಾನಗರ, ಹುಣಿಸಿಕಟ್ಟಿ ರಸ್ತೆಯ ಮೂಲಕ ಜೆಸಿ ವಾಣಿ ಅರಮನೆ ತಲುಪಿತು.