ಸಾರಾಂಶ
ಎಲ್ಲರಿಗೂ ಉನ್ನತ ಶಿಕ್ಷಣ ದೊರೆಯುವಂತಾಗಬೇಕು ಎಂಬ ಸದುದ್ದೇಶದಿಂದ ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದ ಪ್ರಾದೇಶಿಕ ಕೇಂದ್ರಗಳನ್ನು ಪ್ರಾರಂಭಿಸುತ್ತಿದೆ ಎಂದು ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದ ಉಪಕುಲಪತಿ ಪ್ರೊ.ಶರಣಪ್ಪ.ವಿ ಹಲಸೆ ಹೇಳಿದರು.
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲಎಲ್ಲರಿಗೂ ಉನ್ನತ ಶಿಕ್ಷಣ ದೊರೆಯುವಂತಾಗಬೇಕು ಎಂಬ ಸದುದ್ದೇಶದಿಂದ ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದ ಪ್ರಾದೇಶಿಕ ಕೇಂದ್ರಗಳನ್ನು ಪ್ರಾರಂಭಿಸುತ್ತಿದೆ ಎಂದು ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದ ಉಪಕುಲಪತಿ ಪ್ರೊ.ಶರಣಪ್ಪ.ವಿ ಹಲಸೆ ಹೇಳಿದರು.
ಪಟ್ಟಣದ ಮಹದೇಶ್ವರ ಕಲ್ಯಾಣ ಮಂಟಪದ ಎದುರು ವಿವಿ ಪ್ರಾದೇಶಿಕ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿ ಮುಕ್ತ ವಿವಿ ಮೂರು ಹಂತಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು ಮೈಸೂರು ಪ್ರಧಾನ ಕೇಂದ್ರದ ವ್ಯಾಪ್ತಿಯಲ್ಲಿ 3 ವಿವಿಗಳಿವೆ, 34 ರೀಜನಲ್ ಸೆಂಟರ್, 134 ಸ್ಟಡಿ ಸೆಂಟರ್ ಗಳಿವೆ, 10 ಬಿಇಡಿ ಕಾಲೇಜುಗಳಿವೆ,ಯುಜಿಸಿ ಯಿಂದ ನ್ಯಾಕ್ ಎ ಪ್ಲಸ್‍ಆಗಿದೆ. 43 ಸಾವಿರ ವಿದ್ಯಾರ್ಥಿಗಳು ಕಳೆದ ವರ್ಷ ದಾಖಲಾಗಿದ್ದು . 64 ವಿಷಯಗಳನ್ನು 2028 ರವರಗೆ ಮಾನ್ಯತೆ ಮಾಡಿಕೊಟ್ಟಿದ್ದಾರೆ. ಇಷ್ಟು ಕೋರ್ಸ್‍ಗಳು ಯಾವ ಯುನಿವರ್ಸಿಟಿಯು ನೀಡಿಲ್ಲ ಎಂಬುದು ನಮ್ಮೆಲ್ಲರಿಗೂ ಹೆಮ್ಮೆ ತರುವ ವಿಚಾರ ಎಂದರು. ಕಳೆದ ಬಾರಿ ಶೇ 80 ರಿಂದ 90 ರಷ್ಟು ಫಲಿತಾಂಶ ಬಂದಿದೆ. ಜನವರಿಯಿಂದ ಮಾರ್ಚ್‍ವರಗೆ ಜುಲೈನಿಂದ ಸೆಪ್ಟಂಬರ್ ವರಿಗೆ ದಾಖಲಾತಿಗಳು ನಡೆಯುತ್ತದೆ. ಈ ವರ್ಷ 1 ಲಕ್ಷ ದಾಖಲೆಯಾಗಬೇಕು ಎಂಬ ಗುರಿ ಹೊಂದಲಾಗಿದ್ದು ಸರಕಾರಿ ಕಾಲೇಜಿನಲ್ಲಿ ಎರಡು ಕೊಠಡಿಗಳನ್ನು ನೀಡುವುದಾಗಿ ಶಿಕ್ಷಣ ಸಚಿವರು ಭರವಸೆ ನೀಡಿದ್ದಾರೆ. ಆಟೋ, ಕ್ಯಾಬ್ ಚಾಲಕರ ಮಕ್ಕಳಿಗೆ ಶೇ 50, ಕೆಎಸ್‍ಆರ್‌ಟಿಸಿ ಬಸ್ ಚಾಲಕರ ಮಕ್ಕಳಿಗೆ ಶೇ 25ರಷ್ಟು ಶುಲ್ಕ ರಿಯಾಯಿತಿ ನೀಡಲಾಗುತ್ತಿದೆ. ಲೈಂಗಿಕ ಅಲ್ಪ ಸಂಖ್ಯಾತರು, ಏಕ ಪೋಷಕರ ಮಕ್ಕಳಿಗೆ ಉಚಿತವಾಗಿ ಶಿಕ್ಷಣ ನೀಡಲಾಗುತ್ತಿದೆ. ಈ ಭಾಗದಲ್ಲಿಯು ಹೆಚ್ಚಿನ ಜನ ಉನ್ನತ ಶಿಕ್ಷಣ ಪಡೆಯಲು ಅವಕಾಶ ಮಾಡಿಕೊಡಲಾಗುವುದು ಎಂದರು. ಈ ಸಂದರ್ಭದಲ್ಲಿ ಮುಕ್ತ ವಿಶ್ವವಿದ್ಯಾಲಯದ ಕುಲಸಚಿವ ಕೆ.ಎಲ್.ಎನ್. ಮೂರ್ತಿ, ಅಧ್ಯಯನ ಕೇಂದ್ರದ ಮುಖ್ಯಸ್ಥರು ಎಂ.ರಾಮನಾಥಂ ನಾಯ್ಡು, ಮಹದೇಶ್ವರ ಕಾಲೇಜಿನ ಸಂಯೋಜಕ ಮಹದೆವಯ್ಯ, ವಿವಿ ಪ್ರಾದೇಶಿಕ ನಿರ್ದೇಶಕಿ ಧನಲಕ್ಷ್ಮಿಎನ್, ಡಾಟಾ ಎಂಟ್ರಿ ಆಪರೇಟರ್ ಪಲ್ಲವಿ ಎಂ.ಎನ್, ಎಸ್.ಡಿ.ಸಿ ವಿಜಯ್, ಗಿರೀಶ್, ಸಿದ್ದೇಶ್ ಕುಮಾರ್, ಸುನೀಲ್, ಚೈತ್ರಾ, ಬೃಂದಾ ಎಂ.ವಿ, ಪರಿಚಾಲಕ ಅರುಣ್ ಇನ್ನಿತರರು ಇದ್ದರು.1ಕೆಜಿಎಲ್ 50ಕೊಳ್ಳೇಗಾಲ ಪಟ್ಟಣದ ಮಹದೇಶ್ವರ ಕಲ್ಯಾಣ ಮಂಟಪದ ಎದುರು ವಿವಿ ಪ್ರಾದೇಶಿಕ ಕೇಂದ್ರವನ್ನು ಉಪಕುಲಪತಿ ಪ್ರೊ. ಶರಣಪ್ಪ.ವಿ.ಹಲಸೆ ಉದ್ಘಾಟಿಸಿದರು .