ಸಾರಾಂಶ
ಮರಿಯಮ್ಮನಹಳ್ಳಿ: ಉಡಿ ತುಂಬುವ ಆಚರಣೆಯು ಭಾರತೀಯ ಸಂಸ್ಕೃತಿಯ ಪ್ರತೀಕವಾಗಿದೆ. ಹಿಂದಿನ ಕಾಲದಿಂದಲೂ ಮಹಿಳೆಯರಿಗೆ ಉನ್ನತ ಸ್ಥಾನಮಾನ ನೀಡಲಾಗಿದೆ. ಇಂತಹ ಸಂಪ್ರದಾಯ ಪಾಲಿಸಿಕೊಂಡು ಬರುತ್ತಿರುವುದು ನಿಜಕ್ಕೂ ಹೆಮ್ಮೆಯ ಸಂಗತಿಎಂದು ಹುಬ್ಬಳ್ಳಿಯ ಮೂರುಸಾವಿರ ಮಠದ ಜ.ಗುರುಸಿದ್ದರಾಜಯೋಗೀಂದ್ರ ಶ್ರೀ ಹೇಳಿದರು.ಸಮೀಪದ ಜಿ.ನಾಗಲಾಪುರದ ಒಪ್ಪತ್ತೇಶ್ವರಸ್ವಾಮಿ ವಿರಕ್ತಮಠದ ನಿರಂಜನಪ್ರಭು ದೇಶಿಕರ ನಿರಂಜನ ಚರಪಟ್ಟಾಧಿಕಾರ ಮಹೋತ್ಸವದ ಅಂಗವಾಗಿ ಗುರುವಾರ ಹಮ್ಮಿಕೊಂಡಿದ್ದ 3001 ಮುತ್ತೈದೆಯರಿಗೆ ಉಡಿತುಂಬುವ ಸಮಾರಂಭದ ದಿವ್ಯ ಸಾನಿಧ್ಯವನ್ನು ವಹಿಸಿ ಆಶೀರ್ವಚನ ನೀಡಿದರು.ಎಲ್ಲಿ ಮಹಿಳೆಯರು ಗೌರವಿಸಲ್ಪಡುತ್ತಾರೋ ಅಲ್ಲಿ ದೇವತೆಗಳು ಸಹ ಅದನ್ನು ನೋಡಿ ಆನಂದ ಪಡುತ್ತಾರೆ. ಮಹಿಳೆಯರಿಗೆ ಗೌರವದ ಸ್ಥಾನಮಾನಗಳನ್ನು ಪ್ರತಿಯೊಬ್ಬರು ನೀಡಬೇಕು. ಸಮಾಜದಲ್ಲಿ ಯಾವುದೇ ಧಾರ್ಮಿಕ ಆಚರಣೆಗಳು ನಡೆಯಬೇಕಾದರೆ ಅಲ್ಲಿ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿರುತ್ತಾರೆ. ಮಹಿಳೆಯರೇ ನಮ್ಮ ಭಾರತೀಯ ಸಂಸ್ಕೃತಿಯ ವಾರಸುದಾರರಾಗಿದ್ದಾರೆ ಎಂದು ಅವರು ಹೇಳಿದರು.ಮಹಿಳೆಯರಿಗೆ ಗೌರವ ಕೊಡಲು ಉಡಿತುಂಬುವ ಕಾರ್ಯಕ್ರಮ ಹಮ್ಮಿಕೊಂಡಿರುವುದು ಹೆಮ್ಮೆಯ ಸಂಗತಿಯಾಗಿದೆ. ಮಹಿಳೆಯರಿಗೆ ಸಮಾಜದಲ್ಲಿ ಗೌರವ ಸ್ಥಾನ ಇದೆ. ಮಹಿಳೆಯರು ಪ್ರತಿಯೊಂದು ರಂಗದಲ್ಲೂ ಪುರುಷರಿಗೆ ಸಮಾನಾಗಿ ದುಡಿಯುತ್ತಿದ್ದಾರೆ. ಉತ್ತಮ ಸಮಾಜದ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ ದೊಡ್ಡದು. ತಾಯಂದಿರುವ ಮಕ್ಕಳಿಗೆ ಉತ್ತಮ ಸಂಸ್ಕಾರ, ಸಂಸ್ಕೃತಿಯನ್ನು ಕಲಿಸುವ ಮೂಲಕ ಉತ್ತಮ ವ್ಯಕ್ತಿಗಳನ್ನಾಗಿ ರೂಪಿಸಬೇಕು ಎಂದು ಅವರು ಹೇಳಿದರು.ಕೊಟ್ಟೂರು ಸ್ವಾಮಿ ಸಂಸ್ಥಾನ ಮಠದ ನಿರಂಜನ ಜ.ಕೊಟ್ಟೂರು ಬಸವಲಿಂಗ ಆಶೀರ್ವಚನ ನೀಡಿ ಮಾತನಾಡಿ, ಉಡಿ ತುಂಬುವ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದು ನಮ್ಮ ಗುರುಗಳಾದ ಸಂಗನಬಸವ ಶ್ರೀ, ೧೦ ಸಾವಿರ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರವನ್ನು ನೆರವೇರಿಸಿದ್ದಾರೆ ಎಂದರು.ಎಲ್ಲ ರಕ್ತ ಸಂಬಂಧಗಳನ್ನು ಮೀರಿ ಭಕ್ತ ಸಂಬಂಧ ಇಟ್ಟುಕೊಂಡು ಭಕ್ತರಿಗಾಗಿ ಸಮಾಜೋದ್ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಭಕ್ತ ಸಮುದಾಯಕ್ಕೆ ಕೊಡುವ ಸಲುವಾಗಿ ಈ ವ್ಯವಸ್ಥೆಯನ್ನು ಪೂಜ್ಯ ಕುಮಾರ ಮಹಾಶಿವಯೋಗಗಳು ನೀಡಿರುವಂತ ಮಹಾನ್ ಕೊಡುಗೆಯಾಗಿದೆ ಎಂದರು.ಲಿಂಗನಾಯಕನಹಳ್ಳಿಯ ಜಂಗಮ ಲಿಂಗಕ್ಷೇತ್ರದ ಚನ್ನವೀರ ಶ್ರೀ ಸಮಾರಂಭದ ಅಧ್ಯಕ್ಷತೆ ವಹಿಸಿ ಆಶೀರ್ವಚನ ನೀಡಿದರು.ಉರವಕೊಂಡದ ಜ.ಡಾ.ಕರಿಬಸವ ಶ್ರೀ, ಬಳ್ಳಾರಿಯ ಕಲ್ಯಾಣ ಮಠದ ಶ್ರೀ ಕಲ್ಯಾಣ ಶ್ರೀ, ದರೂರಿನ ಕೊಟ್ಟೂರು ಶ್ರೀ, ಮಲ್ಲನಕೆರೆಯ ಚನ್ನಬಸವ ಶ್ರೀ, ನೀಲಗುಂದದ ಗುಡ್ಡದ ವಿರಕ್ತಮಠದ ಚನ್ನಬಸವ ಶ್ರೀ, ನಂದಿಪುರದ ಮಹೇಶ್ವರ ಶ್ರೀ, ಹರಪನಹಳ್ಳಿಯ ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ, ಗ್ರಾಪಂ ಉಪಾಧ್ಯಕ್ಷೆ ಪರಿಮಳ ಅನಂತಸ್ವಾಮಿ, ಹನುಮನಹಳ್ಳಿ ಕುರಿ ಶಿವಮೂರ್ತಿ, ಕುರಟ್ಟಿ ಪೂರ್ಣತೇಜ, ಗಂಡಿ ಬಸವರಾಜ, ಡಣಾಪುರ ಗ್ರಾಪಂ ಅಧ್ಯಕ್ಷ ಎಚ್.ಮಲ್ಲೇಶ, ಸಾಲಿಸಿದ್ದಯ್ಯಸ್ವಾಮಿ, ಗರಗ ಪ್ರಕಾಶ್ ಪೂಜಾರ್, ಹುಲುಮನಿ ಕೊಟ್ರೇಶ್, ಜಿ.ಸತೀಶ್, ಚಂದ್ರಶೇಖರಯ್ಯ ಉಪಸ್ಥಿತರಿದ್ದರು.ಇದೇ ಸಂದರ್ಭದಲ್ಲಿ ಇಂದುಮತಿ ಸಾಲಿಮಠ ಹಾಸ್ಯಭರಿತವಾಗಿ ನೈತಿಕ ವಿಚಾರ ತಿಳಿಸಿದರು.
;Resize=(128,128))
;Resize=(128,128))