ಸಾರಾಂಶ
ಕಲಾ ಪರಂಪರೆ ಉಳಿಸಿ ಬೆಳೆಸಲು ಕಲಾವಿದರರಿಗೆ ಸೂಕ್ತ ಪ್ರೋತ್ಸಾಹ ನೀಡಬೇಕು
ರಾಣಿಬೆನ್ನೂರು: ಇಂದಿನ ದಿನಗಳಲ್ಲಿ ಭಾರತೀಯ ಸಂಸ್ಕೃತಿಯಲ್ಲಿ ಹಾಸು ಹೊಕ್ಕಾಗಿರುವ ಕನ್ನಡ ಸಂಸ್ಕೃತಿಯ ಕಲೆ, ಸಾಹಿತ್ಯ, ಸಂಗೀತ ಪುನರುತ್ಥಾನವಾಗಬೇಕಾದ ಅಗತ್ಯವಿದೆ ಎಂದು ತಾಪಂ ಮಾಜಿ ಅಧ್ಯಕ್ಷ ನೀಲಕಂಠಪ್ಪ ಕುಸುಗೂರ ಹೇಳಿದರು.
ತಾಲೂಕಿನ ಕುಪ್ಪೇಲೂರ ಗ್ರಾಮದಲ್ಲಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ರಂಗ ಚೇತನ ಸಂಸ್ಥೆ ಸಂಯುಕ್ತವಾಗಿ ಆಯೋಜಿಸಿದ್ದ ಸಾಂಸ್ಕೃತಿಕ ಕಲಾ ವೈಭವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕಲಾ ಪರಂಪರೆ ಉಳಿಸಿ ಬೆಳೆಸಲು ಕಲಾವಿದರರಿಗೆ ಸೂಕ್ತ ಪ್ರೋತ್ಸಾಹ ನೀಡಬೇಕು ಎಂದರು.ರಂಗ ಚೇತನದ ಗೌರವಾಧ್ಯಕ್ಷ ದುರುಗಪ್ಪ ಕರಿಯಜ್ಜಿ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ನಾಡಿನ ಹಿರಿಯ ಕಲಾವಿದ ಕೆ.ಸಿ. ನಾಗರಜ್ಜಿ, ವಿಷ್ಣುಮೂರ್ತಿ ಬಂಗಾರಿ, ಗುಡ್ಡರಾಜ ಹಲಗೇರಿ ಇವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಗಾಪಂ ಅಧ್ಯಕ್ಷೆ ಶಿಲ್ಪಾ ಮರಳಪ್ಪನವರ, ಉಪಾಧ್ಯಕ್ಷೆ ರೇಖಾ ಮಾದೇನಹಳ್ಳಿ, ಮಾಜಿ ಅಧ್ಯಕ್ಷ ರಂಗಣ್ಣ ಆಡಿನವರ, ಸುರೇಶ ಭಾನುವಳ್ಳಿ, ಪಿ.ಕೆ.ಪಿ.ಎಸ್. ಎಸ್.ಎನ್ ಅಧ್ಯಕ್ಷ ಹನುಮಂತಪ್ಪ ಸಂಕಣ್ಣನವರ, ಜಯಣ್ಣ ಜಿಗಳಿ, ರಂಗ ಚೇತನದ ಅಧ್ಯಕ್ಷ ಗಣೇಶ ಗುಡಿಗುಡಿ, ಕವಿತಾ ಹಾಗೂ ಗ್ರಾಮದ ಮುಖಂಡರು,ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಮಹಿಳೆಯರು ಉಪಸ್ಥಿತರಿದ್ದರು.ರುದ್ರೇಶ ಬಡಿಗೇರ, ದೇವರಾಜ ಮಾಗೋಡ, ಬಸವರಾಜ ಕಡೇಮನಿ, ಲಿಂಗದಹಳ್ಳಿ ಮಂಜುನಾಥ, ಮಹಿಳಾ ಭಜನಾ ಸಂಘದ ಕಲಾವಿದರು, ರಾಮಪ್ಪ ಮಾರನಹಳ್ಳಿ ಸಂಗಡಿಗರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತ ಪಡಿಸಿದರು.