ಸಿಎಂ ಸಿದ್ದರಾಮಯ್ಯ, ಕಾಗಿನೆಲೆ ಶ್ರೀಗಳ ಕ್ಷಮೆ ಕೇಳಲಿ-ಸಂಸದ ಗೋವಿಂದ ಕಾರಜೋಳ

| Published : Nov 08 2024, 12:30 AM IST

ಸಿಎಂ ಸಿದ್ದರಾಮಯ್ಯ, ಕಾಗಿನೆಲೆ ಶ್ರೀಗಳ ಕ್ಷಮೆ ಕೇಳಲಿ-ಸಂಸದ ಗೋವಿಂದ ಕಾರಜೋಳ
Share this Article
  • FB
  • TW
  • Linkdin
  • Email

ಸಾರಾಂಶ

ಸಿಎಂ ಸಿದ್ದರಾಮಯ್ಯ, ಕಾಗಿನೆಲೆ ಗುರುಪೀಠದ ಸ್ವಾಮೀಜಿಗಳ ನಿಂದನೆ ಮಾಡಿರುವುದನ್ನು ನಾನು ಖಂಡಿಸುತ್ತೇನೆ, ಕಾಗಿನೆಲೆ ಸ್ವಾಮೀಜಿಗಳನ್ನು ಕ್ಷಮೆ ಕೇಳಬೇಕು ಎಂದು ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಆಗ್ರಹಿಸಿದರು.

ಶಿಗ್ಗಾಂವಿ: ಸಿಎಂ ಸಿದ್ದರಾಮಯ್ಯ, ಕಾಗಿನೆಲೆ ಗುರುಪೀಠದ ಸ್ವಾಮೀಜಿಗಳ ನಿಂದನೆ ಮಾಡಿರುವುದನ್ನು ನಾನು ಖಂಡಿಸುತ್ತೇನೆ, ಕಾಗಿನೆಲೆ ಸ್ವಾಮೀಜಿಗಳನ್ನು ಕ್ಷಮೆ ಕೇಳಬೇಕು ಎಂದು ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಆಗ್ರಹಿಸಿದರು.ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅವರು ತಮ್ಮ ಅಭ್ಯರ್ಥಿ ಪರ ಪ್ರಚಾರ ಮಾಡಲು ನನ್ನದೇನೂ ತಕರಾರು ಇಲ್ಲ, ಆದರೆ ಪ್ರಚಾರದಲ್ಲಿ ಕಾಗಿನೆಲೆ ಗುರುಪೀಠದ ಸ್ವಾಮೀಜಿಗಳನ್ನು ನಿಂದನೆ ಮಾಡಿರುವುದನ್ನು ನಾನು ಖಂಡಿಸುತ್ತೇನೆ ಎಂದರು.ಮಠ-ಮಾನ್ಯಗಳು ನಮ್ಮ ಶ್ರದ್ಧಾಕೇಂದ್ರಗಳು, ಮಠಗಳಲ್ಲಿರುವ ಸ್ವಾಮೀಜಿಗಳು ಲೋಕಕಲ್ಯಾಣಕ್ಕಾಗಿ ಪ್ರಾರ್ಥನೆಯನ್ನು ಮಾಡುತ್ತಿರುತ್ತಾರೆ. ಅಂಥವರ ಬಗ್ಗೆ ಶಿಗ್ಗಾಂವಿ ಕ್ಷೇತ್ರದಲ್ಲಿ ಬೊಮ್ಮಾಯಿ ಅವರ ಪರವಾಗಿ ಹೇಳಿದರೆ ನೀವು ಅವರ ಪರವಾಗಿ ಹೇಳಬೇಡಿ ಎನ್ನುವುದು ಸರಿಯಲ್ಲ. ಇದು ಹತಾಶೆ ಮನೋಭಾವನೆಯನ್ನು ತೋರಿಸುತ್ತದೆ. ನಿಮಗೆ ಮೂರು ಕ್ಷೇತ್ರಗಳಲ್ಲಿ ಸೋಲುತ್ತೇವೆ ಎಂಬ ಭಯದ ಭೀತಿ ಕಾಡುತ್ತಿದೆ. ಹಗರಣಗಳಲ್ಲಿ ಸಿಲುಕಿಕೊಂಡು ಸಿದ್ದರಾಮಯ್ಯ ಅವರ ಮನಸ್ಥಿತಿ ಸರಿಯಿಲ್ಲ, ರಾಜ್ಯದ ಮುಖ್ಯಮಂತ್ರಿಯಾಗಿ ಶ್ರದ್ಧಾಕೇಂದ್ರಗಳ ಮುನ್ನಡೆಸುವವರಿಗೆ ಗೌರವಕೊಡಬೇಕು. ಜತೆಗೆ ಕಾಗಿನೆಲೆ ಸ್ವಾಮಿಗಳ ಕ್ಷಮೆ ಕೇಳಬೇಕು ಎಂದರು.

ಈ ಸಂದರ್ಭದಲ್ಲಿ ಲಿಡ್ಕರ್ ಮಾಜಿ ಉಪಾಧ್ಯಕ್ಷ ಡಿ.ಎಸ್. ಮಾಳಗಿ ಇದ್ದರು.