ಸಿದ್ದರಾಮಯ್ಯ ಆರ್‌ಎಸ್‌ಎಸ್ ಟ್ರೈನಿಂಗ್‌ಗೆ ಬರಲಿ

| Published : Feb 20 2024, 01:45 AM IST

ಸಾರಾಂಶ

ಹೊಡಿ, ಬಡಿ, ಕಡಿ ಎಂದು ಹೇಳುವ ಈಶ್ವರಪ್ಪಗೆ ಆರ್‌ಎಸ್ಎಸ್‌ನಲ್ಲಿ ಟ್ರೈನಿಂಗ್‌ಗೆ ಆಗಿದೆ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಮಾಜಿ ಸಚಿವ ಈಶ್ವರಪ್ಪ ಮುಖ್ಯಮಂತ್ರಿ ಆರ್‌ಎಸ್ಎಸ್ ಟ್ರೈನಿಂಗ್‌ಗೆ ಬರಲಿ ಎಂದು ಆಹ್ವಾನ ಮಾಡಿದ್ದಾರೆ.

ಚಿತ್ರದುರ್ಗ: ಹೊಡಿ, ಬಡಿ, ಕಡಿ ಎಂದು ಹೇಳುವ ಈಶ್ವರಪ್ಪಗೆ ಆರ್‌ಎಸ್ಎಸ್‌ನಲ್ಲಿ ಟ್ರೈನಿಂಗ್‌ಗೆ ಆಗಿದೆ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಮಾಜಿ ಸಚಿವ ಈಶ್ವರಪ್ಪ ಮುಖ್ಯಮಂತ್ರಿ ಆರ್‌ಎಸ್ಎಸ್ ಟ್ರೈನಿಂಗ್‌ಗೆ ಬರಲಿ ಎಂದು ಆಹ್ವಾನ ಮಾಡಿದ್ದಾರೆ.

ನನಗೆ ಆರ್‌ಎಸ್ಎಸ್‌ನಲ್ಲಿ ಟ್ರೈನಿಂಗ್‌ ಆಗಿದೆ. ಸಿದ್ದರಾಮಯ್ಯ ಅವರಿಗೆ ಟ್ರೈನಿಂಗ್ ಆಗದಿರುವುದೇ ಸಮಸ್ಯೆ. ಒಂದು ದಿನವಾದರೂ ಸಿದ್ದರಾಮಯ್ಯ ಆರ್‌ಎಸ್ಎಸ್ ಟ್ರೈನಿಂಗ್‌ಗೆ ಬರಲಿ. ಅಲ್ಲಿ ಏನು ಹೇಳಿಕೊಡುತ್ತಾರೆ ಗೊತ್ತಾಗುತ್ತದೆ.

ಹೊಡಿ, ಬಡಿ, ಕಡಿ ಎಂದು ನಾನು ಹೇಳಿಲ್ಲ. ದೇಶ ವಿಭಜನೆ ಬಗ್ಗೆ ಮಾತಾಡಿದ್ದರ ಬಗ್ಗೆ ತಿಳಿಸಿದ್ದೇನೆ. ಭಾರತ ಮಾತೆ ತುಂಡು ಮಾಡುವ ವ್ಯಕ್ತಿಗೆ ಗುಂಡಿಕ್ಕುವ ಕಾನೂನು ತರಬೇಕೆಂದು ಹೇಳಿದ್ದೆ ಎಂದರು.

ರಾಮಮಂದಿರ ಬೇರೆ ಸ್ಥಳದಲ್ಲಿ ನಿರ್ಮಾಣವಾಗಿದೆ. ಅವ್ಯವಹಾರ ನಡೆದಿದೆ ಎಂಬ ಸಚಿವ ಸಂತೋಷ್ ಲಾಡ್ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಸಚಿವ ಸಂತೋಷ್ ಲಾಡ್‌ಗೆ ಏನೂ ಗೊತ್ತಿಲ್ಲ. ಅಜ್ಞಾನದಿಂದ ಹಾಗೆ ಮಾತಾಡ್ತಿದ್ದಾರೆ.

ರಾಮಮಂದಿರ ದೇಶ ಒಂದಾಗಿಸಲು ಕಟ್ಟಿದ ಮಂದಿರ. ಅಯೋಧ್ಯೆಯಲ್ಲಿ 700ಕ್ಕೂ ಹೆಚ್ಚು ಹೋಟೆಲ್ ನಿರ್ಮಾಣ ಆಗಲಿವೆ.

ಅನೇಕರಿಗೆ ಉದ್ಯೋಗ ಅವಕಾಶ ಲಭಿಸಲಿದೆ. ರಾಮಮಂದಿರ ಬಗ್ಗೆ ಮಾತಾಡುವ ಯೋಗ್ಯತೆ ಸಂತೋಷ್ ಲಾಡ್‌ಗೆ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಈಶ್ವರಪ್ಪ ಉತ್ತರಿಸಿದರು.