ಬೈಲಹೊಂಗಲ: ಸಮಿಪದ ಸಾಣಿಕೊಪ್ಪ, ಚಿವಟಗುಂಡಿ ಗ್ರಾಮಗಳಲ್ಲಿ ಸಂಸದರ ಅನುದಾನ ಅಡಿಯಲ್ಲಿ ನಿರ್ಮಿಸಿದ ನೂತನ ಸಮುದಾಯ ಭವನಗಳ ಉದ್ಘಾಟನೆಯನ್ನು ಮಾಜಿ ಸಂಸದೆ ಮಂಗಳ ಸುರೇಶ ಅಂಗಡಿ ನೆರವೇರಿಸಿದರು.
ಬೈಲಹೊಂಗಲ: ಸಮಿಪದ ಸಾಣಿಕೊಪ್ಪ, ಚಿವಟಗುಂಡಿ ಗ್ರಾಮಗಳಲ್ಲಿ ಸಂಸದರ ಅನುದಾನ ಅಡಿಯಲ್ಲಿ ನಿರ್ಮಿಸಿದ ನೂತನ ಸಮುದಾಯ ಭವನಗಳ ಉದ್ಘಾಟನೆಯನ್ನು ಮಾಜಿ ಸಂಸದೆ ಮಂಗಳ ಸುರೇಶ ಅಂಗಡಿ ನೆರವೇರಿಸಿದರು.
ಈ ವೇಳೆ ಮಾತನಾಡಿದ ಅವರು ಗ್ರಾಮೀಣ ಭಾಗಗಳಲ್ಲಿ ಸಮುದಾಯ ಭವನಗಳ ಅವಶ್ಯಕತೆ ಇರುವುದನ್ನು ಮನಗಂಡು ಅನುದಾನ ಹಾಕಿದ್ದೇವೆ. ಅವುಗಳ ಸದ್ಬಳಕೆ ಸರಿಯಾಗಿ ಆಗಲಿ ಎಂಬುದು ನಮ್ಮ ಆಶಯ, ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿಯೇ ನಮ್ಮ ಮೂಲ ಉದ್ದೇಶ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಆಡಳಿತದಲ್ಲಿ ಹೆಚ್ಚಿನ ಕಾರ್ಯಗಳನ್ನು ಮಾಡೋಣ ಎಂದರು.ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಗುರು ಮೆಟಗುಡ್ಡ, ಮಂಡಲ ಅಧ್ಯಕ್ಷ ಸುಭಾಷ ತುರಮರಿ, ಮುಖಂಡ ಗುರುಪಾದ ಕಳ್ಳಿ, ಓಬಿಸಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂತೋಷ ಹಡಪದ, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಲಕ್ಕಪ್ಪ ಕಾರಗಿ, ವಿಶಾಲ ಬೋಗೂರ, ಯಲ್ಲನಗೌಡ ಸಂಗನಗೌಡ್ರ, ದುಂಡಪ್ಪ ಮಲ್ಲೂರ, ಶಿವಬಸಪ್ಪ ಬೊಗೂರ, ಸಿದ್ದಪ್ಪ ರಾನೋಜಿ. ಚನ್ನಬಸಪ್ಪ ಗುರುವಣ್ಣವರ, ನಾಗಯ್ಯ ಚಿಕ್ಕಮಠ, ಮಹಾಂತಯ್ಯ ಹಿರೇಮಠ, ಬಸವರಾಜ ಕಲ್ಲೂರ,ಈರಪ್ಪ ತಿಗಡಿ, ಅಡವಯ್ಯ ಶಿವಪೂಜಿಮಠ, ಮೋಹನ ಬಡಿಗೇರ, ಅಡಿವೆಪ್ಪ ರಾಯಣ್ಣವರ, ನಾಗಪ್ಪ ಸಂಗೊಳ್ಳಿ, ಉದಯ ಚಿಕ್ಕಮಠ ಅನೇಕ ಪದಾಧಿಕಾರಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು.