ಅಂದಿನ ಕಾಲಘಟ್ಟದಲ್ಲಿ ಡಾ.ರಾಜ್‌ಕುಮಾರ್ ರಾಜಕೀಯ ಪ್ರವೇಶ ಮಾಡಿದ್ದರೇ ರಾಜ್ಯದ ಮುಖ್ಯಮಂತ್ರಿ ಆಗಬಹುತ್ತಿತ್ತು. ಆದರೆ, ರಾಜಕೀಯದಿಂದ ದೂರವಿದ್ದು, ಕಲಾ ಸೇವೆಗೆ ನಿರಂತರವಾಗಿ ತಮ್ಮ ಜೀವನವನ್ನೇ ಸೆವಿಸಿದರು. ಸರ್ಕಾರ ಇಂತಹ ಪ್ರಚೋದನಾತ್ಮಕ ಹೇಳಿಕೆ ನೀಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು.
ಕನ್ನಡಪ್ರಭ ವಾರ್ತೆ ಮಳವಳ್ಳಿ
ಕರ್ನಾಟಕ ರತ್ನ ಡಾ.ರಾಜ್‌ಕುಮಾರ್ ಅವರ ಸ್ಮಾರಕ ನಿರ್ಮಾಣಕ್ಕೆ ಸರ್ಕಾರ ಕೊಟ್ಟಿರುವ ಭೂಮಿ ಬಗ್ಗೆ ಪ್ರಶ್ನೆ ಮಾಡಿದ ನಟ ಚೇತನ್ ತನ್ನ ಮನೆಯಲ್ಲಿ ಕ್ಷಮೆಯಾಚನೆ ಮಾಡಿರುವುದನ್ನು ಅಭಿಮಾನಿಗಳು ಒಪ್ಪುವುದಿಲ್ಲ. ತನ್ನ ಪಾಪದ ಪ್ರಾಯಶ್ವಿತ್ತ ಮಾಡಿಕೊಳ್ಳಲು ಡಾ.ರಾಜ್ ಪುಣ್ಯ ಭೂಮಿಗೆ ಬಂದು ಕ್ಷಮೆಯಾಚಿಸಬೇಕು ಎಂದು ಡಾ.ರಾಜ್‌ಕುಮಾರ್ ಕಲಾ ಸಂಘದ ಅಧ್ಯಕ್ಷ ದೊಡ್ಡಯ್ಯ ಆಗ್ರಹಿಸಿದರು.ಪಟ್ಟಣದ ಡಾ.ರಾಜ್‌ಕುಮಾರ್ ಕಲಾ ಸಂಘದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಾ.ರಾಜ್ ಅವರು ಕನ್ನಡ ಚಿತ್ರರಂಗಕ್ಕೆ ಮಾತ್ರ ಸೀಮಿತಗೊಳ್ಳದೇ ಭಾಷೆ, ನಾಡು,ನುಡಿ, ಸಂಸ್ಕೃತಿಗೆ ದೊಡ್ಡ ಕಾಣಿಕೆ ಕೊಟ್ಟಿದ್ದಾರೆ. ರಾಜ್‌ಕುಮಾರ್ ಅವರು ಕರ್ನಾಟಕದ ಸಾಂಸ್ಕೃತಿಕ ಅಸ್ಮಿತೆಯಾಗಿದ್ದಾರೆ ಎಂದರು.
2006, ಏ.2 ರಂದು ಡಾ.ರಾಜ್‌ಕುಮಾರ್ ನಿಧನರಾದ ಸಂದರ್ಭದಲ್ಲಿ ಸರ್ಕಾರ ಇವರ ಸೇವೆಯನ್ನು ಗುರುತಿಸಿ ಸ್ಮಾರಕ ನಿರ್ಮಾಣಕ್ಕೆ 2.5 ಎಕರೆ ನೀಡಿ ಅಭಿವೃದ್ಧಿ ಪಡಿಸಲಾಗಿತ್ತು. ಆದರೆ, 20 ವರ್ಷಗಳ ನಂತರ ಅವರ ಹುಟ್ಟು ಹಬ್ಬದ ದಿನದಂದೆ ಚೇತನ್ ವಿವಾದಾತ್ಮಕ ಹೇಳಿಕೆ ನೀಡಿರುವುದನ್ನು ಖಂಡಿಸಿದರು.ಕನ್ನಡಿಗರ ಭಾವನಕ್ಕೆ ದಕ್ಕೆ ತಂದು ಸಮಾಜದಲ್ಲಿ ಸಾಮರಸ್ಯವನ್ನು ಕದಡುತ್ತಿರುವ ಚೇತನ್ ಮೇಲೆ ಸರ್ಕಾರ ಸ್ವಯಂ ಮೊಕದ್ದಮೆ ದಾಖಲು ಮಾಡಿಕೊಂಡು ತನಿಖೆಗೆ ಒಳಪಡಿಸಿ ಬಂಧಿಸಬೇಕು ಎಂದು ಆಗ್ರಹಿಸಿದರು.
ಅಂದಿನ ಕಾಲಘಟ್ಟದಲ್ಲಿ ಡಾ.ರಾಜ್‌ಕುಮಾರ್ ರಾಜಕೀಯ ಪ್ರವೇಶ ಮಾಡಿದ್ದರೇ ರಾಜ್ಯದ ಮುಖ್ಯಮಂತ್ರಿ ಆಗಬಹುತ್ತಿತ್ತು. ಆದರೆ, ರಾಜಕೀಯದಿಂದ ದೂರವಿದ್ದು, ಕಲಾ ಸೇವೆಗೆ ನಿರಂತರವಾಗಿ ತಮ್ಮ ಜೀವನವನ್ನೇ ಸೆವಿಸಿದರು. ಸರ್ಕಾರ ಇಂತಹ ಪ್ರಚೋದನಾತ್ಮಕ ಹೇಳಿಕೆ ನೀಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಸಾಮಾಜಿಕ ಕಾರ್ಯಕರ್ತ ಎಂದು ಹೇಳಿಕೊಳ್ಳುವ ಚೇತನ್‌ಗೆ ಡಾ.ರಾಜ್‌ಕುಮಾರ್ ಸೇವೆ ಬಗ್ಗೆ ಸಾಮಾನ್ಯ ಜ್ಞಾನವು ಇಲ್ಲದಿರುವುದು ವಿಪರ್ಯಾಸ. ಬಾಯಿಗೆ ಬಂದಂತೆ ಹೇಳಿಕೆ ನೀಡುವ ಇವರನ್ನು ಕರ್ನಾಟಕದಿಂದ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ರಾಶಿರಾಪು ಸೇನಾ ಸಮಿತಿ ಅಧ್ಯಕ್ಷ ಕೃಷ್ಣ, ರೊ.ಎಂ.ವಿ ಶೇಮಶೇಖರ್, ಗ್ಲೋರಿ ಅಜ್ಮಿತ್‌ಉಲ್ಲಾ ಇದ್ದರು.