ನೆಮ್ಮದಿ ಜೀವನಕ್ಕೆ ಪ್ರತಿ ಗ್ರಾಮ ವ್ಯಸನ ಮುಕ್ತವಾಗಲಿ: ನಾರಾಯಣ ಚಿದ್ರಿ

| Published : Mar 22 2024, 01:03 AM IST

ನೆಮ್ಮದಿ ಜೀವನಕ್ಕೆ ಪ್ರತಿ ಗ್ರಾಮ ವ್ಯಸನ ಮುಕ್ತವಾಗಲಿ: ನಾರಾಯಣ ಚಿದ್ರಿ
Share this Article
  • FB
  • TW
  • Linkdin
  • Email

ಸಾರಾಂಶ

ಡಾ.ವಿರೇಂದ್ರ ಹೆಗ್ಗಡೆಯವರ ಕಾರ್ಯಕ್ರಮಕ್ಕೆ ಕೈಜೋಡಿಸಿ ಎಂದು ಕರ್ನಾಟಕ ಆರ್ಯ ಪ್ರತಿನಿಧಿ ಸಭಾ ರಾಜ್ಯ ಉಪಾಧ್ಯಕ್ಷ ನಾರಾಯಣ ಚಿದ್ರಿ ಮನವಿ ಮಾಡಿದರು. ಹುಮನಾಬಾದ್‌ನಲ್ಲಿ ರ್ಮಸ್ಥಳ ಸ್ವಸಹಾಯ ಸಂಘದಿಂದ ಮದ್ಯ ವ್ಯಸನ ಮುಕ್ತ ವಿಶೇಷ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಶಿಬಿರ ಪೂರ್ವಭಾವಿ ಸಭೆ ನಡೆಯಿತು.

ಕನ್ನಡಪ್ರಭ ವಾರ್ತೆ ಹುಮನಾಬಾದ್‌

ಧರ್ಮಸ್ಥಳದ ಧರ್ಮಾಧಿಕಾರಿಗಳ ಸಮಾಜ ಮತ್ತು ಕುಟುಂಬ ಉದ್ಧಾರ ಕಾರ್ಯಕ್ರಮಗಳಿಗೆ ಪ್ರತಿಯೊಬ್ಬರು ಕೈಜೋಡಿಸಬೇಕೆಂದು ಕರ್ನಾಟಕ ಆರ್ಯ ಪ್ರತಿನಿಧಿ ಸಭಾ ರಾಜ್ಯ ಉಪಾಧ್ಯಕ್ಷ ನಾರಾಯಣ ಚಿದ್ರಿ ಮನವಿ ಮಾಡಿದರು.

ಪಟ್ಟಣದ ಆರ್ಯ ಸಮಾಜ ಭವನದಲ್ಲಿ ಧರ್ಮಸ್ಥಳ ಸ್ವಸಹಾಯ ಸಂಘದಿಂದ ಮದ್ಯ ವ್ಯಸನ ಮುಕ್ತ ವಿಶೇಷ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಶಿಬಿರ ಪೂರ್ವಭಾವಿ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿ ಗ್ರಾಮಗಳು ವ್ಯಸನ ಮುಕ್ತ ಗ್ರಾಮಗಳಾಗಬೇಕು, ಅಂದಾಗ ಮಾತ್ರ ಮಹಿಳೆಯರು, ಮಕ್ಕಳು ಶಾಂತಿ ನೆಮ್ಮದಿಯ ಜೀವನ ನಡೆಸಲು ಹಾಗೂ ಮಕ್ಕಳಲ್ಲಿ ಉತ್ತಮ ಸಂಸ್ಕಾರ ಸಂಸ್ಕೃತಿ ನೀಡಲು ಸಹಕಾರಿಯಗಲಿದೆ ಎಂದರು.

ಧರ್ಮಸ್ಥಳ ಸ್ವಸಹಾಯ ಸಂಘದ ಜಿಲ್ಲಾ ನಿರ್ದೇಶಕ ಪ್ರವಿಣಕುಮಾರ ಪ್ರಾಸ್ತಾವಿಕ ಮಾತನಾಡಿ. ಮಾನಸಿಕ ಒತ್ತಡ, ವ್ಯವಹಾರದಲ್ಲಿ ಸೋಲು, ನಷ್ಟ, ಸಹವಾಸ ದೋಷ, ಆರೋಗ್ಯ ಸಮಸ್ಯೆ ಕಾರಣಗಳಿಂದ ಮದ್ಯಪಾನ ಚಟಕ್ಕೆ ಬಲಿಯಾಗುತ್ತಿದ್ದಾರೆ. ಮದ್ಯ ವ್ಯಸನದಿಂದ ಎದುರಾಗುವ ಸಮಸ್ಯೆಗಳನ್ನು ನಿವಾರಿಸಲೆಂದೇ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಕರ್ನಾಟಕ ಜನ ಜಾಗೃತಿ ವೇದಿಕೆ ಮೂಲಕ ಆರಂಭಿಸಿರುವ ಮದ್ಯವರ್ಜನ ಶಿಬಿರ ಮೂಲಕ ರಾಜ್ಯದ ಅನೇಕ ಜನರು ಮದ್ಯ ತ್ಯಜಿಸಿ ನವಜೀವನ ಮೂಲಕ ಉತ್ತಮ ಬದುಕು ಕಟ್ಟಿಕೊಂಡಿದ್ದಾರೆ. ಲೋಕಸಭಾ ಚುನಾವಣೆ ಬಳಿಕ 50 ಮದ್ಯವ್ಯಸನಿಯ ಸದಸ್ಯರ ಶಿಬಿರವು ಹುಮನಾಬಾದ ತಾಲೂಕಿನಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.

ಜನಜಾಗೃತಿ ವೇದಿಕೆ ಸದಸ್ಯ ಬಸವರಾಜ ಅಷ್ಟಗಿ, ಹಳ್ಳಿಖೇಡ (ಬಿ) ಸಾರ್ವಜನಿಕ ಆಸ್ಪತ್ರೆ ವೈದ್ಯರಾದ ಹಸನ್, ರಾಜಕೀಯ ಮುಖಂಡ ಸುರೇಶ ಘಾಂಗ್ರೆ, ಹುಡಗಿ ಕರಿಬಸವೇಶ್ವರ ದೇವಸ್ಥಾನ ಅರ್ಚಕ ಮಹಾದೇವಪ್ಪಾ, ತಾಲೂಕು ಯೋಜನಾಧಿಕಾರಿ ವಿರೇಶ ಎನ್, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಪ್ರಾದೇಶಿಕ ಯೋಜನಾಧಿಕಾರಿ ರಾಜೇಶ, ಹುಮನಾಬಾದ ಸಹಾಯಕ ಯೋಜನಾಧಿಕಾರಿ ಮಲ್ಲಯ್ಯಾಸ್ವಾಮಿ ಮಠ, ಸ್ವಸಹಾಯ ಸಂಘ ಮಹಿಳಾ ಸದಸ್ಯರು ಇದ್ದರು.