ಸಾರಾಂಶ
ರಟ್ಟೀಹಳ್ಳಿ: ಬಿಜೆಪಿ ಬೇರು ಮಟ್ಟದಿಂದ ಗಟ್ಟಿಯಾಗಲು ಸ್ಥಳೀಯ ಬೂತ್ ಮಟ್ಟದ ಅಧ್ಯಕ್ಷರು, ಬಿಎಲ್‌ಎಗಳು, ಶಕ್ತಿ ಕೇಂದ್ರ, ಹಾಗೂ ಮಹಾ ಶಕ್ತಿ ಕೇಂದ್ರಗಳೇ ಪ್ರಮುಖ ಕಾರಣಾಗುತ್ತಾರೆ, ಆದ್ದರಿಂದ ಅವರಿಗೆ ನೀಡಿದ ಜವಾಬ್ದಾರಿಯನ್ನು ಚಾಚು ತಪ್ಪದೆ ಪಾಲಿಸಿದರೆ ಮಾತ್ರ ಪಕ್ಷ ಬಲಿಷ್ಠವಾಗಲು ಸಾಧ್ಯ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ್ ಹೇಳಿದರು.
ಪಟ್ಟಣದ ಆರ್.ಎನ್. ಗಂಗೋಳ ಅವರ ಪಕ್ಷದ ಕಚೇರಿಯಲ್ಲಿ ನಡೆದ ಬಿಜೆಪಿ ಬೂತ್ ಮಟ್ಟದ ಅಧ್ಯಕ್ಷರ ಮತ್ತು ಬಿ.ಎಲ್.ಎ.2ಗಳ ಸಭೆ ಹಾಗೂ ಪದವೀಧರ ಚುನಾವಣೆ ಹಿನ್ನೆಲೆ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಪಕ್ಷದ ತತ್ವ ಸಿದ್ಧಾಂತ ಅರಿತು ಪ್ರತಿಯೊಬ್ಬ ಕಾರ್ಯಕರ್ತರು ಪಕ್ಷ ಸಂಘಟನೆಗೆ ಮುಂದಾಗಬೇಕು, ತಮಗೆ ನೀಡಿದ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಿದರೆ ಮಾತ್ರ ಪಕ್ಷ ಅಧಿಕಾರ ಹಿಡಿಯುವಲ್ಲಿ ಸಾಧ್ಯವಾಗುವುದು, ಇದಕ್ಕೆ ತಾಜಾ ಉದಾಹಣೆ ಎಂದರೆ ಇತ್ತೀಚಿಗೆ ನಡೆದ ರಟ್ಟೀಹಳ್ಳಿ ಪಟ್ಟಣ ಪಂಚಾಯತ್ ಚುನಾವಣೆ ನಮ್ಮ ಸಾಮಾನ್ಯ ಕಾರ್ಯಕರ್ತರೇ ಮುಂದಾಳತ್ವವಹಿಸಿಕೊಂಡು ಕಾಂಗ್ರೆಸ್‍ನಲ್ಲಾದ ಕ್ಷೀಪ್ರ ಬೆಳವಣಿಗೆಯ ಲಾಭ ಪಡೆದು ಅಧಿಕಾರ ಹಿಡಿಯಲು ಸಾಧ್ಯವಾಯಿತು. ಇಂಥ ಸಾಮಾನ್ಯ ಕಾರ್ಯಕರ್ತರ ಪ್ರಾಮಾಣಿಕ ಶ್ರಮದ ಫಲವಾಗಿ ದೇಶದ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಲು ಪೇಜ್ ಪ್ರಮುಖರು ಬೂತ್ ಮಟ್ಟದ ಅಧ್ಯಕ್ಷರು ಕಾರಣಾಗುತ್ತಾರೆ ಎಂದರು.ರಾಜ್ಯ ಸರಕಾರದ 2.5.ವರ್ಷದ ಅಧಿಕಾರದ ಅವಧಿಯಲ್ಲಿ ಪ್ರತಿನಿತ್ಯ ಒಂದಿಲ್ಲೊಂದು ಹಗರಣಗಳು ಬೆಳಕಿಗೆ ಬರುತ್ತಿವೆ. ತಮ್ಮ ಹಗರಣಗಳನ್ನು ಮುಚ್ಚಿಹಾಕಲು ಆರೆಸ್ಸೆಸ್ ನಿಷೇಧ, ಅಕ್ಟೋಬರ್ ಕ್ರಾಂತಿ, ನವ್ಹೆಂಬರ್ ಕ್ರಾಂತಿ ಎಂದು ಕಾಂಗ್ರೆಸ್ ಶಾಸಕರು, ಸಚಿವರು ಉಹಾಪೋಹಗಳನ್ನು ಮುನ್ನಲೆಗೆ ತಂದು ತಮ್ಮ ಹುಳಕನ್ನು ಮುಚ್ಚಿಟ್ಟು ಹಗರಣಗಳಲ್ಲೇ ಕಾಲಹರಣ ಮಾಡಿ ರಾಜ್ಯದ ಜನತೆಗೆ ಮಕ್ಮಲ್ ಟೋಪಿ ಹಾಕುವಂತ ಕಾರ್ಯವಾಗುತ್ತಿದೆ. ಪಂಚ ಗ್ಯಾರಂಟಿ ಹೆಸರಿನಲ್ಲಿ ರಾಜ್ಯದ ಜನತೆಗೆ ದ್ರೋಹಮಾಡಿ ದಿನ ಬಳಕೆ ವಸ್ತುಗಳನ್ನು ದುಪ್ಪಟ್ಟು ಮಾಡಿ ಜನತೆಗೆ ಹೊರೆ ಮಾಡುವಂತ ಕಾರ್ಯವಾಗುತ್ತಿದೆ. ಇದರಿಂದ ಸಾಮಾನ್ಯ ಮಹಿಳೆಯರು ರಾಜ್ಯ ಸರಕಾರಕ್ಕೆ ಛೀಮಾರಿ ಹಾಕುತ್ತಿದ್ದಾರೆ. ಇಂತಹ ವಿಷಯಗಳನ್ನು ಜನತೆಗೆ ಅರ್ಥ ಮಾಡಿಸಬೇಕು ಎಂದರು. ಇತ್ತೀಚೆಗೆ ಉಪಮುಖ್ಯ ಮಂತ್ರಿ ಡಿ.ಕೆ. ಶಿವಕುಮಾರ ಅವರು 6ನೇ ಗ್ಯಾರಂಟಿ ತಂದಿದ್ದಾರೆ. ಬಿ. ಖಾತಾದಿಂದ ಎ ಖಾತಾ ಮಾಡುತ್ತಿದ್ದೇವೆ ಎಂದು ಹಗಲು ದರೋಡೆಗೆ ಮುಂದಾಗಿದ್ದಾರೆ ಎಂದು ಟೀಕಿಸಿದರು.ತಾಲೂಕಾಧ್ಯಕ್ಷ ದೇವರಾಜ ನಾಗಣ್ಣನವರ ಮಾತನಾಡಿ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಅಧಿಕಾರ ಹಿಡಿದಾಗಿನಿಂದ ಇಲ್ಲಿವರೆಗೂ ಒಂದಿಲ್ಲೊಂದು ಹಗರಣಗಳಲ್ಲೆ ಕಾಲ ಕಳೆಯುತ್ತಿದೆ. ಅಭಿವೃದ್ಧಿ ಕಾರ್ಯಗಳು ಶೂನ್ಯ. ಇಂತಹ ಸಮಸ್ಯೆಗಳನ್ನು ಸಮಾಜಕ್ಕೆ ಮನವರಿಕೆ ಮಾಡುವಂತ ಕಾರ್ಯವಾಗಬೇಕು. ಆದ್ದರಿಂದ ಮುಂಬರುವ ದಿನಗಳಲ್ಲಿ ಎಲ್ಲರೂ ಒಗ್ಗಟ್ಟಾಗಿ ದುಡಿದು ಪಕ್ಷ ಸಂಘಟನೆ ಮಾಡೋಣ ಎಂದರು.ಬಿಜೆಪಿ ಮುಖಂಡ ಪಾಲಾಕ್ಷಗೌಡ ಪಾಟೀಲ್, ಮಾಜಿ ಮುಖ್ಯ ಸಚೇತಕ ಡಿ.ಎಂ. ಸಾಲಿ, ಬೋಜರಾಜ ಕೆರೂಡಿ, ಸಂತೋಷ ಆಲದಕಟ್ಟಿ, ಆರ್.ಎನ್. ಗಂಗೋಳ, ಲಿಂಗರಾಜ ಚಪ್ಪರದಳ್ಳಿ, ಆನಂದಪ್ಪ ಹಾದಿಮನಿ, ಎನ್.ಎಂ. ಈಟೇರ್ ಮಾತನಾಡಿದರು. ಪಟ್ಟಣ ಪಂಚಾಯತ್ ಸದಸ್ಯ ಬಸವರಾಜ ಆಡಿನವರ, ಬಸವರಾಜ ಕಟ್ಟಿಮನಿ, ಪರಮೇಶಪ್ಪ ಹಲಗೇರಿ, ಪ್ರಶಾಂತ ದ್ಯಾವಕ್ಕಳವರ, ಸುಶೀಲ ನಾಡಿಗೇರ, ಬಸನಗೌಡ ಮಳವಳ್ಳಿ, ಹನಮಂತಪ್ಪ ಗಾಜೇರ ಹಾಗೂ ಸುತ್ತಮುತ್ತಲಿನ ಪಕ್ಷದ ಮುಖಂಡರು ಇದ್ದರು.
;Resize=(128,128))
;Resize=(128,128))