ಸಾರಾಂಶ
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಬೇರೆ ಧರ್ಮಗಳಿಂದ ಹಿಂದು ಧರ್ಮವನ್ನು ತುಳಿಯುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಹಿಂದುಗಳು ಜಾಗೃತರಾಗದಿದ್ದರೆ ಧರ್ಮ ಅಳಿದು ಹೋಗುತ್ತದೆ ಎಂದು ಮುಖಂಡ ಮನೋಹರ್ ಮಠದ್ ಎಚ್ಚರಿಸಿದರು.ಪಟ್ಟಣದ ಗಂಜಾಂನಲ್ಲಿ ಸಂಕೀರ್ತನಾ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು. ನಾವು ಕಾನೂನನ್ನು ಕೈಗೆತ್ತಿಕೊಳ್ಳುವ ಅವಶ್ಯಕತೆ ಇಲ್ಲ. ನಾವು ಜಾಗೃತರಾಗಿ ಒಗ್ಗಟ್ಟು ಪ್ರದರ್ಶನ ಮಾಡಬೇಕು. ಹನುಮ ಮಾಲೆ ಹಾಕಿದರೆ ಸಾಕು, ನಮ್ಮ ಬೇಡಿಕೆ ಈಡೇರುತ್ತವೆ. ಬೇರೆ ಧರ್ಮದವರು ನಮ್ಮ ಮೇಲೆ ದಬ್ಬಾಳಿಕೆ ಮಾಡುವುದು ತಪ್ಪುತ್ತದೆ ಎಂದರು.
ದೇಶದ ವಿವಿಧೆಡೆ ಹಿಂದು ದೇಗುಲಗಳು ಮಸೀದಿಗಳಾಗಿದ್ದವು. ಈಗ ಅಯೋಧ್ಯೆಯಲ್ಲಿ ರಾಮಮಂದಿರ, ಕಾಶಿಯಲ್ಲಿ ವಿಶ್ವನಾಥ ಮಂದಿರ ಆಗಿದೆ. ಇನ್ನು ಮಥುರಾದಲ್ಲಿ ಕೃಷ್ಣನ ದೇವಾಲಯ ಆಗಬೇಕು. ನಾವು ಅದಕ್ಕೆ ಬೆಂಬಲ ಕೊಡಬೇಕು. ಜಗತ್ತಲ್ಲಿ ಶಾಂತಿ ಸಾರುವ ಏಕೈಕ ಧರ್ಮ ಹಿಂದೂ ಧರ್ಮ. ದೇಶದಲ್ಲಿ ಮೊದಲು ಮಸೀದಿ ಕಟ್ಟಲು ಜಾಗ ಕೊಟ್ಟಿದ್ದೇ ಹಿಂದೂ ರಾಜ. ಈಗ ನೀವು ನಮಗೆ ಸೌಹಾರ್ದತೆಯ ಪಾಠ ಮಾಡುತ್ತಿದ್ದೀರಿ ಎಂದು ಕಿಡಿಕಾರಿದರು.ಶ್ರೀರಂಗಪಟ್ಟಣದ ಇಂದಿನ ಜಾಮೀಯ ಮಸೀದಿ ಜಾಗದಲ್ಲಿ 1674ರಲ್ಲಿ ದೇವಾಲಯ ಕಟ್ಟಿಸಲಾಗಿತ್ತು. ಆದರೆ, ನಮ್ಮ ಇತಿಹಾಸ ತಿರುಚಿ ಅಲ್ಲಿ ಮಸೀದಿ ಇದೆ ಎಂಬ ದಾಖಲೆ ಸೃಷ್ಟಿಸಿದ್ದರು. ಅದೇ ಜಾಗದಲ್ಲಿ ಹನುಮನ ದೇವಾಲಯ ಆಗಬೇಕು ಎಂಬುದು ನಮ್ಮ ಸಂಕಲ್ಪವಾಗಿದೆ. ನಾವು ಕಾನೂನಿನ ಮೂಲಕವೇ ಇದಕ್ಕೆ ಹೋರಾಟ ಮಾಡಬೇಕು. ಜ್ಞಾನವ್ಯಾಪಿ ಮಸೀದಿಯಲ್ಲಿ ಪರಿಶೀಲನೆ ಆದಹಾಗೆ ಇಲ್ಲೂ ಪರಿಶೀಲನೆ ಆಗಲಿ ಎಂದು ಆಗ್ರಹಿಸಿದರು.
ನ್ಯಾಯಾಲಯದ ಇದಕ್ಕೆ ಒಂದು ಕಮೀಟಿ ರಚನೆ ಮಾಡಿ ಸತ್ಯ ಬಯಲು ಮಾಡಬೇಕು. ಅಲ್ಲಿ ಶತಮಾನಗಳಿಂದ ಮಸೀದಿ ಇದೆ ಎಂಬ ವರದಿ ಬಂದರೆ ಮಸೀದಿಯೇ ಇರಲಿ. ಆದರೆ, ಅಲ್ಲಿ ಹಿಂದೂ ದೇವಾಲಯ ಇರೋದು ಸತ್ಯವಾದರೆ ದೇವಾಲಯ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿದರು.ಸಹಬಾಳ್ವೆ ಬಗ್ಗೆ ನಮಗೆ ಪಾಠ ಮಾಡುವವರು ನಮ್ಮ ಜಾಗವನ್ನು ನಮಗೆ ಬಿಟ್ಟುಕೊಡಲಿ. ರೈತರ ಜಮೀನು, ದೇವಾಲಯಗಳು ವಕ್ಫ್ ಮಂಡಳಿಗೆ ಸೇರಿವೆ ಎನ್ನುತ್ತಿದ್ದಾರೆ. ಒಬ್ಬ ರಾಜಕಾರಣಿ ವಿಧಾನಸೌಧವೂ ವಕ್ಫ್‌ಗೆ ಸೇರಿದೆ ಎಂದು ಹೇಳುವ ಮೂಲಕ ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿದ್ದಾರೆ ಎಂದು ವಕ್ಫ್ ಮಂಡಳಿ ವಿರುದ್ಧ ಕಿಡಿಕಾರಿದರು.
ಮುಖಂಡ ಲೋಹಿತ್ ರಾಜೇ ಅರಸ್ ಮಾತನಾಡಿ, ಜಿಹಾದಿಗಳು ನಮ್ಮ ಹಿಂದೂ ರಾಜರ ಮೇಲೆ ಮೋಸದಿಂದ ಆಕ್ರಮಣ ಮಾಡಿ ಹತ್ಯೆ ಮಾಡಿದ್ದಾರೆ. ಲವ್ ಜಿಹಾದ್, ಲ್ಯಾಂಡ್ ಜಿಹಾದ್, ಫೆಸ್ಟಿವಲ್ ಜಿಹಾದ್ ಮೂಲಕ ನಿರಂತರ ದಬ್ಬಾಳಿಕೆ ನಡೆಯುತ್ತಿದೆ. ಈ ಬಗ್ಗೆ ಹಿಂದೂಗಳು ಈಗಲಾದರು ಎಚ್ಚೆತ್ತುಕೊಂಡು ಒಗ್ಗಟಾಗಬೇಕು. ಮೂಡಲಬಾಗಿಲು ಆಂಜನೇಯನ ಮೂಲಸ್ಥಾನದಲ್ಲಿ ದೇಗುಲ ನಿರ್ಮಿಸುವವರೆಗೆ ವಿರಮಿಸಬಾರದು ಎಂದು ಕರೆ ನೀಡಿದರು.