ಕನ್ನಡ ಭಾಷೆ ನೆಲ ಜಲದ ರಕ್ಷಣೆಗೆ ರಾಜ್ಯದ ಪ್ರತಿಯೊಬ್ಬರೂ ಸಂಕಲ್ಪ ಮಾಡಬೇಕು. ನಿತ್ಯ ಜೀವನದಲ್ಲಿ ಕನ್ನಡವನ್ನೇ ಬಳಸಬೇಕು.

ಕೋಲಾರ: ಕನ್ನಡ ನಾಡು ನುಡಿಗಾಗಿ ಹೋರಾಟ ಮಾಡಿದ ಮಹನೀಯರು ಕನ್ನಡ ರಾಜ್ಯೋತ್ಸವದಂದು ಸ್ಮರಿಸುವ ಮೂಲಕ ಗೌರವಿಸುವುದು, ಕನ್ನಡ ಭಾಷೆ ನೆಲ ಜಲದ ರಕ್ಷಣೆಗೆ ರಾಜ್ಯದ ಪ್ರತಿಯೊಬ್ಬರೂ ಸಂಕಲ್ಪ ಮಾಡಬೇಕು. ನಿತ್ಯ ಜೀವನದಲ್ಲಿ ಕನ್ನಡವನ್ನೇ ಬಳಸಬೇಕು ಎಂದು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಿರಿಗನ್ನಡ ವೇದಿಕೆ ಅಧ್ಯಕ್ಷ ಎಚ್. ರಾಮಚಂದ್ರಪ್ಪ ತಿಳಿಸಿದರು.

ಸಿರಿಗನ್ನಡ ವೇದಿಕೆ, ರೋಟರಿ ಸಂಸ್ಥೆ, ಶ್ರೀ ಗಂಗಾನಿಕೇತನ ಫೌಂಡೇಶನ್, ಸುವರ್ಣ ಕರ್ನಾಟಕ ವೃತ್ತಿನಿರತ ಪತ್ರಕರ್ತರ ಸಂಘದಿಂದ 70ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಅಸಂಘಟಿತ ಕಾರ್ಮಿಕರಿಗೆ ಹಾಗೂ ಪೌರಕಾರ್ಮಿಕರಿಗೆ ಹಾಗು ಆಟೋಚಾಲಕರಿಗೆ, ವಿಕಲಚೇತರಿಗೆ ಮತ್ತು ನಾಡು ನುಡಿ ಸಾಹಿತ್ಯ ಕನ್ನಡ ಭಾಷೆಗಾಗಿ ಸೇವೆ ಮಾಡಿದ ಸಾಧಕರನ್ನು ಸನ್ಮಾನಿಸಿದರು.

ಕಾರ್ಯಕ್ರಮದಲ್ಲಿ ಡಾ.ಹೆಜ್ಜಾಜೆ ಮಹದೇವ್, ಸುವರ್ಣ ಕರ್ನಾಟಕ ವೃತ್ತಿ ನಿರತ ಪತ್ರಕರ್ತರ ಸಂಘದ ಗೌರವಾಧ್ಯಕ್ಷ ರಾಮಾಚಾರ್, ಅಧ್ಯಕ್ಷ ಜಿ.ಆರ್.ನಾಗರಾಜ್, ಪ್ರೇಮಲತಾ ಇದ್ದರು.