ಮುಳಗುಂದ: ಕೃಷಿ ಇಲಾಖೆಯ ಯೋಜನೆಗಳನ್ನು ರೈತರು ಸದುಪಯೋಗ ಪಡಿಸಿಕೊಂಡು ಉನ್ನತಿ ಹೊಂದಬೇಕು. ಅಂದಾಗ ಮಾತ್ರ ಯೋಜನೆಗಳು ಯಶಸ್ವಿಯಾಗಲು ಸಾಧ್ಯ ಎಂದು ಸೊರಟೂರಿನ ಓಂಕಾರೇಶ್ವರ ಮಠದ ಫಕೀರೇಶ್ವರ ಸ್ವಾಮಿಗಳು ತಿಳಿಸಿದರು.
ಸಮೀಪದ ಕಣವಿ ಗ್ರಾಮದ ಪ್ರಗತಿಪರ ರೈತರಾದ ಶರಣಪ್ಪಗೌಡ ಪಾಟೀಲ ಅವರ ತೋಟದಲ್ಲಿ ರಿವಾರ್ಡ್ ಯೋಜನೆಯಲ್ಲಿ ನಿರ್ಮಿಸಿದ ಕೃಷಿ ಹೊಂಡಕ್ಕೆ ಬಾಗಿನ ಅರ್ಪಿಸುವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.ಜಗತ್ತಿನ ಎಲ್ಲ ಕಾಯಕಕ್ಕಿಂತ ಒಕ್ಕಲುತನ ಬಹಳ ಶ್ರೇಷ್ಠ. ಹಾಗಾಗಿ, ರೈತನ ಹಿತ ಕಾಯುವ ಜವಾಬ್ದಾರಿ ನಮ್ಮೆಲ್ಲರದ್ದು ಎಂದರು.ಕಾಂಗ್ರೆಸ್ ಯುವ ಮುಖಂಡ ಕೆ.ಎಚ್. ಪಾಟೀಲ ಮಾತನಾಡಿ, ರಿವಾರ್ಡ್‌ನಂತಹ ಒಂದು ಯೋಜನೆ ರೈತರೊಬ್ಬರ ಬದುಕಿನಲ್ಲಿ ಇಷ್ಟು ಬದಲಾವಣೆ ತರುವುದು ಸಾದ್ಯವಾದರೆ ಇದು ಎಲ್ಲ ರೈತರಿಗೆ ತಲುಪುವಂತಾಗಬೇಕು. ಆ ಮೂಲಕ ನಮ್ಮ ತಾಲೂಕು ಪ್ರಗತಿ ಸಾಧಿಸುತ್ತದೆ. ಮುಖ್ಯವಾಗಿ ಯುವ ಜನತೆ ಕೃಷಿಯತ್ತ ಮುಖ ಮಾಡಿ ರಿವಾರ್ಡ್ ಅಂತಹ ಯೋಜನೆಗಳನ್ನು ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು.
ಸಹಾಯಕ ಕೃಷಿ ನಿರ್ದೇಶಕ ಮಲ್ಲಯ್ಯ ಕೊರವನವರ ಮಾತನಾಡಿ, ರಿವಾರ್ಡ್ ಜಲಾನಯನ ಯೋಜನೆಯು ಬಹಳಷ್ಟು ವೈಜ್ಞಾನಿಕವಾಗಿ ಯೋಜಿತವಾಗಿದೆ. ಅದು ರೈತರ ಉನ್ನತಿಗಾಗಿ ಇದೆ. ಕೃಷಿ ಹೊಂಡದ ಜತೆಗೆ ತೋಟಗಾರಿಕೆ ಘಟಕದ ಅಡಿಯಲ್ಲಿ ಪೇರಲ ಹಣ್ಣಿನ ಗಿಡಗಳನ್ನು ನಾಟಿ ಮಾಡಲಾಗಿದೆ. ಒಟ್ಟಿನಲ್ಲಿ ರೈತರ ಆದಾಯ ದ್ವಿಗುಣಗೊಳಿಸುವುದೇ ಇಲಾಖೆಯ ಉದ್ದೇಶ ಎಂದರು.ಈ ವೇಳೆ ಕೃಷಿ ಅಧಿಕಾರಿ ಎಫ್.ಸಿ. ಗುರಿಕಾರ, ತೋಟಗಾರಿಕೆ ಅಧಿಕಾರಿ ಶೈಲೇಂದ್ರ ಬಿರಾದಾರ, ಶಿದ್ದಪ್ಪ ಕೋರಿ, ಅಜ್ಜಣ್ಣ ಹುಗ್ಗೆನ್ನವರ, ಬಸವರಾಜ ಬಂದಕ್ಕನವರ, ಗಂಗಪ್ಪ ಗಡಾದ, ಪರಪ್ಪ ಕೋಳಿವಾಡ, ದೇವರೆಡ್ಡಿ ಅಗಸನಕೊಪ್ಪ ಸೇರಿದಂತೆ ರೈತರು ಇದ್ದರು. ನಂತರ ರಿವಾರ್ಡ್ ಯೋಜನೆಯ ಕೃಷಿ ಹೊಂಡಕ್ಕೆ ಬಾಗಿನ ಅರ್ಪಿಸಲಾಯಿತು.ಇಂದು ಶ್ರೀ ವಿಜಯ ಮಹಾಂತೇಶ ನಾಟಕ ಪ್ರದರ್ಶನ
ನರೇಗಲ್ಲ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪಿ.ಬಿ. ಧುತ್ತರಗಿ ಟ್ರಸ್ಟ್ ಸಹಯೋಗದಲ್ಲಿ ನರೇಗಲ್ಲ ಅವಿವಿಪ್ರ ಸಮಿತಿ, ಅನ್ನದಾನೇಶ್ವರ ಮಹಾವಿದ್ಯಾಲಯ ಹಾಗೂ ಸ್ನಾತಕೋತ್ತರ ಕೇಂದ್ರ ನರೇಗಲ್ಲ, ಐಕ್ಯುಎಸಿ ಘಟಕ ಮತ್ತು ಕನ್ನಡ ವಿಭಾಗದ ವತಿಯಿಂದ ಕವಿ ಪಿ.ಬಿ. ಧುತ್ತರಗಿ ಅವರ ಸರ್ವಮಂಗಳ ಅರ್ಥಾತ್ ಶ್ರೀ ವಿಜಯ ಮಹಾಂತೇಶ ನಾಟಕ ಹಾಗೂ ವಿದ್ಯಾರ್ಥಿಗಳ ಓದು, ಅಭಿಪ್ರಾಯ, ಸಂವಾದ ಕಾರ್ಯಕ್ರಮ ಏ. 23ರಂದು ಬೆಳಗ್ಗೆ 10.30ಕ್ಕೆ ಇಲ್ಲಿಯ ಮಹಾವಿದ್ಯಾಲಯದ ಸಭಾಭವನದಲ್ಲಿ ನಡೆಯಲಿದೆ.ಹಾಲಕೆರೆ ಸಂಸ್ಥಾನಮಠದ ಮುಪ್ಪಿನ ಬಸವಲಿಂಗ ಸ್ವಾಮಿಗಳು ಸಾನ್ನಿದ್ಯ ವಹಿಸಲಿದ್ದಾರೆ. ಸೂಳೆಭಾವಿ- ಬಾಗಲಕೋಟೆ ಪಿ.ಬಿ. ಧುತ್ತರಗಿ ಟ್ರಸ್ಟ್‌ನ ಎಸ್.ಕೆ. ಕೊನೆಸಾಗರ ಅಧ್ಯಕ್ಷತೆ ವಹಿಸುವರು. ಅನ್ನದಾನೇಶ್ವರ ಪದವಿ ಮಹಾವಿದ್ಯಾಲಯದ ಆಡಳಿತ ಮಂಡಳಿ ಚೇರಮನ್ ಡಾ. ಎಸ್.ಎ. ಪಾಟೀಲ ಸಮಾರಂಭ ಉದ್ಘಾಟಿಸುವರು. ಗದಗ ಡಯಟ್ ಉಪನ್ಯಾಸಕ ಯಲ್ಲಪ್ಪ ಹಂದ್ರಾಳ ಉಪನ್ಯಾಸ ನೀಡುವರು ಎಂದು ಮಹಾವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಕಲ್ಲಯ್ಯ ಎಸ್. ಹಿರೇಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.