ಗಲ್ಲಿ ಪ್ರಶ್ನೆಗಳನ್ನು ದಿಲ್ಲಿಗೆ ಒಯ್ಯಲು ಅವಕಾಶ ಮಾಡಿಕೊಡಿ: ಡಾ. ಅಂಜಲಿ

| Published : May 03 2024, 01:08 AM IST

ಗಲ್ಲಿ ಪ್ರಶ್ನೆಗಳನ್ನು ದಿಲ್ಲಿಗೆ ಒಯ್ಯಲು ಅವಕಾಶ ಮಾಡಿಕೊಡಿ: ಡಾ. ಅಂಜಲಿ
Share this Article
  • FB
  • TW
  • Linkdin
  • Email

ಸಾರಾಂಶ

ಬಿಜೆಪಿಗರ ಸುಳ್ಳುಗಳು ಮಿತಿ ಮೀರಿದೆ. ನಿಮ್ಮ ಕಷ್ಟಕ್ಕಾಗುವವರಿಗೆ ಮತ ಹಾಕಿ ಎಂದು ಕಾಂಗ್ರೆಸ್ ಅಭ್ಯರ್ಥಿ ಡಾ. ಅಂಜಲಿ ನಿಂಬಾಳ್ಕರ್ ಮನವಿ ಮಾಡಿದರು.

ಕಾರವಾರ: ಮೋದಿ ನೋಡಿ, ಮೋದಿ ನಮಸ್ಕಾರ ನಂಬಿ ಮತ ಹಾಕಿ ಎನ್ನುತ್ತಾರೆ. ಹಾಗೇನಾದರೂ ಈ ಬಾರಿ ಮಾಡಿದರೆ ಖಾಲಿ ಚೊಂಬು ಸಿಗುತ್ತದಷ್ಟೇ. ಗಲ್ಲಿ ಪ್ರಶ್ನೆಗಳನ್ನು ದಿಲ್ಲಿಗೆ ಒಯ್ಯಲು ಕಾಂಗ್ರೆಸ್‌ಗೆ ಮತ ನೀಡಿ ಎಂದು ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಅಂಜಲಿ ನಿಂಬಾಳ್ಕರ್ ಮನವಿ ಮಾಡಿದರು.

ಕಾರವಾರದ ವಿವಿಧೆಡೆ ಅವರು ಪ್ರಚಾರ ನಡೆಸಿದರು. ಬಿಜೆಪಿಗರ ಸುಳ್ಳುಗಳು ಮಿತಿ ಮೀರಿದೆ. ನಿಮ್ಮ ಕಷ್ಟಕ್ಕಾಗುವವರಿಗೆ ಮತ ಹಾಕಿ. ಆರು ಬಾರಿ ಶಾಸಕರಾಗಿದ್ದ ಬಿಜೆಪಿ ಅಭ್ಯರ್ಥಿ ಕಾಗೇರಿಯವರದ್ದು ಏನು ಅನುಭವ ಎನ್ನುವುದು ಗೊತ್ತಾಗುತ್ತಿಲ್ಲ. ಸ್ಪೀಕರ್ ಆಗಿದ್ದರೂ ಜನಕ್ಕೆ ನ್ಯಾಯ ಕೊಡಿಸುವ ಕೆಲಸ ಮಾಡಿಲ್ಲ. ಹಳ್ಳಿ ಜನರ ಕಷ್ಟಗಳನ್ನು ಕೇಳುತ್ತಿದ್ದರೆ ಇದು ದೇಶದ ಚುನಾವಣೆ ಎಂದು ಬಿಜೆಪಿಗರು ಹೇಳುತ್ತಾರೆ. ಮೇ ೭ರಂದು ಅವರಿಗೆ ತಿಳಿಸಬೇಕಿದೆ, ಹಳ್ಳಿಯಿಂದಲೇ ದೇಶ ನಡೆಯುವುದು ಎಂದು ಎಂದರು.

ಶಾಸಕ ಸತೀಶ್ ಸೈಲ್ ಮಾತನಾಡಿ, ಶೇ. ೯೭ರಷ್ಟು ಜನರಿಗೆ ಗ್ಯಾರಂಟಿ ಯೋಜನೆ ಮುಟ್ಟಿದೆ. ಬಿಜೆಪಿ ಜನ ಮಜ್ಜಿಗೆ, ಮೊಸರು ತಿನ್ನುವ ಬುದ್ಧಿವಂತರು. ಹೀಗಾಗಿ ಅವರು ಮೊದಲ ಸಾಲಿನಲ್ಲಿ ಅರ್ಜಿ ಸಲ್ಲಿಸಿ ಫಲಾನುಭವಿಯಾಗಿದ್ದಾರೆ ಎಂದರು ವ್ಯಂಗ್ಯ ಮಾಡಿದರು.

ಡಿಸಿಸಿ ವಕ್ತಾರ ಶಂಭು ಶೆಟ್ಟಿ ಮಾತನಾಡಿದರು. ಬ್ಲಾಕ್ ಅಧ್ಯಕ್ಷ ಸಮೀರ್ ನಾಯ್ಕ, ಪ್ರಮುಖರಾದ ಜಿ.ಪಿ. ನಾಯ್ಕ, ಗಣಪತಿ ಮಾಂಗ್ರೆ, ದೇವಾನಂದ ಚಂಡೇಕರ್, ಚಂದ್ರಕಾಂತ ಚಿಂಚಣಕರ್, ರಾಘು ನಾಯ್ಕ ಮುಂತಾದವರಿದ್ದರು.ವಿವಿಧೆಡೆ ಕಾಂಗ್ರೆಸ್ ಮುಖಂಡರ ಪ್ರಚಾರ

ಯಲ್ಲಾಪುರ: ತಾಲೂಕಿನ ವಿವಿಧೆಡೆ ಲೋಕಸಭಾ ಚುನಾವಣೆಯ ಹಿನ್ನೆಲೆ ಕಾಂಗ್ರೆಸ್ ಪ್ರಚಾರ ಕಾರ್ಯ ಚುರುಕಾಗಿ ನಡೆಯುತ್ತಿದೆ. ತಾಲೂಕಿನ ವಜ್ರಳ್ಳಿ, ಪಪಂ ವ್ಯಾಪ್ತಿಯ ಮಂಜುನಾಥ ನಗರ, ಸಾವಗದ್ದೆ, ಕಣ್ಣೀಗೇರಿ ಗ್ರಾಪಂ ವ್ಯಾಪ್ತಿಯ ಮಾವಳ್ಳಿ, ಹೊನ್ನಗದ್ದೆ, ಮುಂತಾದ ಭಾಗಗಳಲ್ಲಿ ಪ್ರಚಾರ ಕಾರ್ಯ ನಡೆಯಿತು.ಗ್ಯಾರಂಟಿ ಸಮಿತಿಯ ಜಿಲ್ಲಾ ಉಪಾಧ್ಯಕ್ಷ ಡಿ.ಎನ್. ಗಾಂವ್ಕರ, ತಾಲೂಕಾಧ್ಯಕ್ಷ ಉಲ್ಲಾಸ ಶಾನಭಾಗ, ಬಿಸಿಸಿ ಅಧ್ಯಕ್ಷ ಎನ್.ಕೆ. ಭಟ್ಟ, ಜಿಲ್ಲಾ ಕಾರ್ಯದರ್ಶಿ ವಿ.ಎಸ್. ಭಟ್ಟ, ತಾಲೂಕು ಕಾರ್ಯದರ್ಶಿ ಅನಿಲ ಮರಾಠೆ, ನಗರ ಘಟಕಾಧ್ಯಕ್ಷ ರವಿಚಂದ್ರ ನಾಯ್ಕ, ಸಾಮಾಜಿಕ ಜಾಲತಾಣದ ಅಧ್ಯಕ್ಷೆ ಮುಶರತ್ ಬಾನು, ಪಪಂ ಮಾಜಿ ಅಧ್ಯಕ್ಷ ಎಂ.ಡಿ. ಮುಲ್ಲಾ, ಪಪಂ ಸದಸ್ಯ ಸತೀಶ ನಾಯ್ಕ, ಜಿ.ಎಚ್. ಮರಿಯೋಜಿರಾವ್, ಲಾರೆನ್ಸ್ ಸಿದ್ದಿ, ಅಣ್ಣಪ್ಪ ನಾಯ್ಕ, ನಾಗರಾಜ ಕೈಟ್ಕರ್, ಜಯವಂತ ಮರಾಠಿ, ಮಹೇಶ ಮರಾಠಿ, ಶ್ಯಾಮ್ ಪಾಟೀಲ್, ಗಣಪತಿ ಮರಾಠಿ ಮತ್ತಿತರರು ವಿವಿಧ ಕಡೆ ನಡೆದ ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡಿದ್ದರು.