ಗೌರಿ-ಗಣೇಶ ಹಬ್ಬ, ಈದ್‌ಮಿಲಾದ್‌ ಸೌಹಾರ್ದತೆಯ ಹಬ್ಬವಾಗಲಿ: ಎಸ್ಸೈ ಗುರಣ್ ಹೆಬ್ಬಾಳ್

| Published : Aug 31 2024, 01:31 AM IST

ಗೌರಿ-ಗಣೇಶ ಹಬ್ಬ, ಈದ್‌ಮಿಲಾದ್‌ ಸೌಹಾರ್ದತೆಯ ಹಬ್ಬವಾಗಲಿ: ಎಸ್ಸೈ ಗುರಣ್ ಹೆಬ್ಬಾಳ್
Share this Article
  • FB
  • TW
  • Linkdin
  • Email

ಸಾರಾಂಶ

ರಿಪ್ಪನ್‍ಪೇಟೆಯ ಗ್ರಾಮ ಪಂಚಾಯಿತ್ ಕುವೆಂಪು ಸಭಾಭವನದಲ್ಲಿ ಗೌರಿಗಣೇಶ ಮತ್ತು ಈದ್ ಮಿಲಾದ್ ಹಬ್ಬದ ಶಾಂತಿ ಸಮಿತಿ ಸಭೆ ಆಯೋಜಿಸಲಾಗಿತ್ತು.

ಕನ್ನಡಪ್ರಭ ವಾರ್ತೆ ರಿಪ್ಪನ್‍ಪೇಟೆ

ಗೌರಿ ಗಣೇಶ ಮತ್ತು ಈದ್‍ಮಿಲಾದ್ ಹಬ್ಬವನ್ನು ಶಾಂತಿ ಸೌಹಾರ್ದತೆಯಿಂದ ಊರಹಬ್ಬವನ್ನಾಗಿ ಆಚರಿಸುವಂತಾಗಬೇಕು. ಈ ಹಬ್ಬದಲ್ಲಿ ಕಡ್ಡಾಯವಾಗಿ ಡಿಜೆಯಂತಹ ಕರ್ಕಶವಾದ ಹೆಚ್ಚು ಸೌಂಡ್ ಮಾಡುವಂತಹ ಸ್ಪೀಕರ್ ಬಳಸುವುದರಿಂದ ಅನಾರೋಗ್ಯ ಪೀಡಿತರಿಗೆ ಆಪಾಯವಾಗುವ ಸಂಭವವೇ ಹೆಚ್ಚು ಆದ್ದರಿಂದಾಗಿ ಡಿಜೆಯನ್ನು ಕಡ್ಡಾಯವಾಗಿ ನಿಷೇದಿಸಲಾಗಿದೆ ಎಂದು ಹೊಸನಗರ ವೃತ್ತ ನಿರೀಕ್ಷಕ ಗುರಣ್ ಹೆಬ್ಬಾಳ್ ಹೇಳಿದರು.

ರಿಪ್ಪನ್‍ಪೇಟೆಯ ಗ್ರಾಮ ಪಂಚಾಯಿತಿ ಕುವೆಂಪು ಸಭಾಭವನದಲ್ಲಿ ಆಯೋಜಿಸಿದ್ದ ಗೌರಿ-ಗಣೇಶ ಮತ್ತು ಈದ್ ಮಿಲಾದ್ ಹಬ್ಬದ ಶಾಂತಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಗಣಪತಿ ವಿಸರ್ಜನಾ ಮೆರವಣಿಗೆಯನ್ನು ಕಳೆದ ವರ್ಷದಂತೆ ನಡೆಸಿಕೊಂಡು ಬರುವಂತೆ ಸಲಹೆ ಸೂಚನೆಗಳನ್ನು ನೀಡಿದರು.

ತಹಶೀಲ್ದಾರ್ ರಶ್ಮಿ ಹಾಲೇಶ್ ಮಾತನಾಡಿ, ಗೌರಿ-ಗಣೇಶ ಮತ್ತು ಈದ್ ಮಿಲಾದ್‌ ಹಬ್ಬದಲ್ಲಿ ವೈಯಕ್ತಿಕ ವಿಚಾರವನ್ನು ತಂದು ಆಶಾಂತಿ ಸೃಷ್ಟಿಸುವವರ ವಿರುದ್ಧ ಮುಲಾಜಿಲ್ಲದೆ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸಲಾಗುವುದೆಂದು ತಿಳಿಸಿದರು.

ಈ ಸಭೆಯಲ್ಲಿ ಆರ್.ಎ.ಚಾಬುಸಾಬ್, ಆರ್.ಎನ್.ಮಂಜುನಾಥ, ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರ ಸೇನಾ ಸಮಿತಿಯ ಅಧ್ಯಕ್ಷ ರಾಮಚಂದ್ರ ಬಳೆಗಾರ್, ಎಂ,ಬಿ.ಮಂಜುನಾಥ, ಎಂ.ಸುರೇಶ್ ಸಿಂಗ್, ಜುಮ್ಮಾ ಮಸೀದಿಯ ಅಧ್ಯಕ್ಷ ಹಸನಬ್ಬ, ಆಶೀಫ್, ಉಬೇದುಲ್ಲಾ ಷರೀಫ್, ನರಸಿಂಹ, ಜೆ.ಜಿ.ಸದಾನಂದ ಸಾರ್ವಜನಿಕರ ಪರವಾಗಿ ಹಲವು ಸಲಹೆಗಳನ್ನು ನೀಡಿದರು.

ಅಗ್ನಿಶಾಮಕ ಇಲಾಖೆ.ಪಿಡಬ್ಲೂಡಿ, ಮೆಸ್ಕಾಂ, ಕಂದಾಯ, ತಾಲೂಕು, ಗ್ರಾಮ ಪಂಚಾಯತ್ ಸೇರಿದಂತೆ ವಿವಿಧ ಇಲಾಖೆ ಆಧಿಕಾರಿ ವರ್ಗ ಹಾಜರಿದ್ದರು.