ಲಕ್ಷ ಮತ ಅಂತರದಿಂದ ಗಾಯತ್ರಿ ಸಿದ್ದೇಶ್ವರ್‌ ಗೆಲ್ಲಿಸೋಣ

| Published : Apr 27 2024, 01:18 AM IST

ಲಕ್ಷ ಮತ ಅಂತರದಿಂದ ಗಾಯತ್ರಿ ಸಿದ್ದೇಶ್ವರ್‌ ಗೆಲ್ಲಿಸೋಣ
Share this Article
  • FB
  • TW
  • Linkdin
  • Email

ಸಾರಾಂಶ

ಭವ್ಯ ಭಾರತದ ಭವಿಷ್ಯಕ್ಕಾಗಿ ಮೂರನೇ ಭಾರಿಗೆ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಮಂತ್ರಿ ಮಾಡುವ ಮೂಲಕ ಲೋಕಸಭೆ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ಅವರನ್ನು ಒಂದು ಲಕ್ಷ ಮತಗಳ ಅಂತರದಿಂದ ಗೆಲ್ಲಿಸೋಣ ಎಂದು ಮಾಜಿ ಶಾಸಕ ಎಚ್.ಪಿ. ರಾಜೇಶ್ ಜಗಳೂರಲ್ಲಿ ಹೇಳಿದ್ದಾರೆ.

- ಕಲ್ಲೇದೇವರಪುರ ಸಭೆಯಲ್ಲಿ ಮಾಜಿ ಶಾಸಕ ಎಚ್.ಪಿ.ರಾಜೇಶ್ ಹೇಳಿಕೆ - - - ಕನ್ನಡಪ್ರಭ ವಾರ್ತೆ ಜಗಳೂರು

ಭವ್ಯ ಭಾರತದ ಭವಿಷ್ಯಕ್ಕಾಗಿ ಮೂರನೇ ಭಾರಿಗೆ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಮಂತ್ರಿ ಮಾಡುವ ಮೂಲಕ ಲೋಕಸಭೆ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ಅವರನ್ನು ಒಂದು ಲಕ್ಷ ಮತಗಳ ಅಂತರದಿಂದ ಗೆಲ್ಲಿಸೋಣ ಎಂದು ಮಾಜಿ ಶಾಸಕ ಎಚ್.ಪಿ. ರಾಜೇಶ್ ಹೇಳಿದರು.

ತಾಲೂಕಿನ ಕಲ್ಲೇದೇವರಪುರ ಗ್ರಾಮದ ಹೊರವಲಯದಲ್ಲಿ ಎಚ್.ಪಿ.ರಾಜೇಶ್ ಅಭಿಮಾನಿ ಬಳಗದ ಕಾರ್ಯಕರ್ತರ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

31ರಂದು ಗಾಯತ್ರಿ ಸಿದ್ದೇಶ್ವರ್ ನಮ್ಮ ಕ್ಷೇತ್ರದಲ್ಲಿ ಪ್ರಚಾರ ಹಮ್ಮಿಕೊಂಡಿದ್ದಾರೆ. ಈಶಾನ್ಯ ಭಾಗದ ಅಣಬೂರು ಜಿ.ಪಂ. ಕ್ಷೇತ್ರದ ಐದು ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನಗಳಲ್ಲಿ ಪ್ರಚಾರ ಹಮ್ಮಿಕೊಂಡಿದ್ದು, ಮುಖಂಡರು ಕಾರ್ಯಕರ್ತರು ಭಾಗವಹಿಸಬೇಕು ಎಂದು ತಿಳಿಸಿದರು.

ಜಗಳೂರು ಕ್ಷೇತ್ರ 2008ರಲ್ಲಿ ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರವಾದ ನಂತರ, ಸರ್ಕಾರಿ ಹುದ್ದೆ ತ್ಯಜಿಸಿ ಚುನಾವಣೆಗೆ ಬಿಜೆಪಿಯಿಂದ ಸ್ಪರ್ಧಿಸಿ, ಪರಾಭವಗೊಂಡೆ. ಅಲ್ಲಿಂದ ಇಲ್ಲಿಯವರೆಗೆ ಐದು ಚುನಾವಣೆ ಮಾಡಿದೆ. ನೀವೆಲ್ಲರೂ ಇಲ್ಲಿಯವರೆಗೆ ನನ್ನ ಬೆಂಬಲಿಸಿ ಮತ ಹಾಕುತ್ತ ಬಂದಿದ್ದೀರಿ. ಇಂಥ ಪ್ರೀತಿ ಪಡೆದ ನಾನೇ ಅದೃಷ್ಟವಂತ ಎಂದು ಭಾವುಕರಾದ ಅವರು, ಮಾಜಿ ಶಾಸಕ ಎಸ್.ವಿ.ರಾಮಚಂದ್ರ, ನಾನು ಇಬ್ಬರು ಜೊತೆಗೂಡಿ ಲೋಕಸಭಾ ಚುನಾವಣೆಯಲ್ಲಿ ಒಂದು ಲಕ್ಷ ಮತವನ್ನ ಬಿಜೆಪಿಗೆ ದೊರಕಿಸಿ, ವರಿಷ್ಠರಿಗೆ ಕೊಟ್ಟ ಮಾತು ಉಳಿಸಿಕೊಳ್ಳುತ್ತೇವೆ ಎಂದರು.

ಸಂಸದರ ಪುತ್ರ ಜಿ.ಎಸ್. ಅನಿತ್ ಕುಮಾರ್ ಮಾತನಾಡಿ, ಜಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಶಾಸಕರಾದ ಎಸ್.ವಿ. ರಾಮಚಂದ್ರ ಹಾಗೂ ಎಚ್.ಪಿ .ರಾಜೇಶ್ ಇಬ್ಬರು ಅತ್ಯಂತ ಪ್ರಭಾವಿ ನಾಯಕರು. ಒಂದು ರೈಲಿನ ಎರಡು ಹಳಿಗಳಿದ್ದಂತೆ. ಸಮಾನಂತರವಾಗಿ ಸಾಗುವ ಮೂಲಕ ಬಿಜೆಪಿಯನ್ನು ಗೆಲ್ಲಿಸುವ ವಿಶ್ವಾಸವಿದೆ ಎಂದರು.

ಸಭೆಯಲ್ಲಿ ಮುಖಂಡರಾದ ಎಲ್.ಬಿ. ಬೈರೇಶ್, ಸೂರಲಿಂಗಪ್ಪ, ಎನ್.ಎಸ್.ರಾಜು, ಹನುಮಂತಾಪುರ ಬಸವರಾಜ್, ಎಸ್.ಬಿ. ಕುಬೇಂದ್ರಪ್ಪ, ನರೇಂದ್ರ ಬಾಬು, ಎಸ್.ಎನ್. ತಿಪ್ಪೇಸ್ವಾಮಿ, ನಂಜುಡಸ್ವಾಮಿ, ಶಾಹಿದ್, ಲೋಕೇಶ್, ಶೇಖರಪ್ಪ, ಅಜ್ಜಣ್ಣ, ಬಿದರಿಕೆರೆ ವೀರೇಶ್, ಅಜ್ಜಪ್ಪ, ಶೇಖರಪ್ಪ, ಮಲ್ಲಿಕಾರ್ಜುನ, ನಾಗಲಿಂಗಪ್ಪ, ಕೊಟ್ರೇಶ್, ನಿಜಲಿಂಗಪ್ಪ, ಮಾರಣ್ಣ, ಹೊನ್ನೂರು ಸ್ವಾಮಿ, ಬಾಲರಾಜ್, ಅರವಿಂದ ಪಾಟೀಲ್, ಬೆಂಬಲಿಗರು ಇದ್ದರು.

- - - -26ಜೆ.ಎಲ್,ಆರ್.1:

ಜಗಳೂರು ತಾಲೂಕಿನ ಕಲ್ಲೇದೇವರಪುರ ಸಭೆಯಲ್ಲಿ ಮಾಜಿ ಶಾಸಕ ಎಚ್.ಪಿ.ರಾಜೇಶ್ ಮಾತನಾಡಿದರು.